
ರಾಮದುರ್ಗ ಕಡೆಯಿಂದ ಸವದತ್ತಿ ಕಡೆಗೆ ಹೊರಟಿರುವ ಕಾರು ಹಾಗೂ ಧಾರವಾಡ ಕಡೆಯಿಂದ ರಾಮದುರ್ಗಕಡೆ ಬರತಿದ್ದ ಕಾರ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ. ಸವದತ್ತಿ ಕಡೆಗೆ ಹೊರಟಿರುವ ಕಾರಿನಲ್ಲಿ ಪ್ರಯಾಣಿಕರು ಹಾಗೂ ರಾಮದುರ್ಗಕಡೆಗೆ ಬರತಿದ್ದ ಕಾರಿನಲ್ಲಿ ಸೇರಿದಂತೆ ಎರಡು ಕಾರಿನಲ್ಲಿ ಪ್ರಯಾಣ ಮಾಡುತ್ತಿರುವ ಚೆನ್ನಪ್ಪ ಬಳಲಿಮಟ್ಟಿ, ನೀಲಾಂ ಬಳಲಿಮಟ್ಟಿ,ತಾರಾ ಕರಿಗೌಡರ್, ಸಂಚಿತ್ ಬಳಲಿಮಟ್ಟಿ,ಮತ್ತು ಕೃಷ್ಣ ಬಿಸಾನಿ, ಪ್ರಯಾಣಿಸುತ್ತಿದ್ದರು ಇವರು ಗಂಭೀರವಾಗಿ ಗಾಯಗೊಂಡಿದ್ದಾರೆ ಈವರಿಗೆ ರಾಮದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕೆತ್ಸೆ ನೀಡಿ ಹೆಚ್ಚಿನ ಚಿಕೆತ್ಸೆಗಾಗಿ ಬಾಗಲಕೋಟ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ಘಟನೆಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ, ಮುಳ್ಳೂರ ಘಾಟ್ ತಿರುವಿನಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಕುರಿತು ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ:-ಮಂಜುನಾಥ ಕಲಾದಗಿ

