Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹಿಂದುಳಿದ ವರ್ಗಗಳಿಗೆ ಅತಿಹೆಚ್ಚು ಅನುಕೂಲ ಮಾಡಿಕೊಟ್ಟಿದ್ದಾರೆ

Advertisement
ಮೂಡಲಗಿ:-  ದೇವರಾಜ‌ ಅರಸು ಬಳಿಕ ಸಿದ್ದರಾಮಯ್ಯನವರಿಂದ ಹಿಂದುಳಿದ ವರ್ಗಗಳಿಗೆ ಅತಿಹೆಚ್ಚು ಅನುಕೂಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್



ಬಿಜೆಪಿ ಕೊಟ್ಟಿದ್ದ ಒಂದೂ ಭರವಸೆ ಈಡೇರಿಸಿಲ್ಲ - ಸವದಿ

ಅರಭಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಬ್ಬರದ ಪ್ರಚಾರ

ಹಿಂದುಳಿದ ವರ್ಗಗಳ ನಾಯಕ ಎನಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ದೇವರಾಜ ಅರಸು ಅವರಂತೆಯೇ ಹಿಂದುಳಿದ ವರ್ಗಗಳಿಗೆ ಅತಿಹೆಚ್ಚು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅಭಿಪ್ರಾಯ ವ್ಯಕ್ತಪಡಿಸಿದರು.



ಅರಭಾವಿ ವಿಧಾನಸಭಾ ಕ್ಷೇತ್ರದ ಮೂಡಲಗಿ ಪಟ್ಟಣದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಎಲ್ಲ ವರ್ಗಗಳಿಗೆ ತುಂಬಾ ಅನುಕೂಲ ಆಗಿದೆ ಎಂದರು.

ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಪತನಗೊಳ್ಳುತ್ತೆ. ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸಲಾಗುತ್ತದೆ ಎಂದು ಗೋಕಾಕ್ ಶಾಸಕರು ದಿನಬೆಳಗಾದರೆ ಹೇಳಿಕೊಂಡು ತಿರುಗುತ್ತಿದ್ದಾರೆ. ಸಿದ್ದರಾಮಯ್ಯನವರ ಸರ್ಕಾರ ಬೀಳಿಸೋಕೆ ಪ್ರಯತ್ನಿಸಿದರೆ ನಾಡಿನ ಸಮಸ್ತ ಜನರು, ಅದರಲ್ಲೂ ಹಿಂದುಳಿದ ವರ್ಗಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಇಂಥ ಒಬ್ಬ ನಾಯಕನನ್ನು ಕೆಳಗಿಳಿಸಲು ಸಾಧ್ಯವೇ ಎಂದು ಸಚಿವರು ಪ್ರಶ್ನಿಸಿದರು.

ಚುನಾವಣೆಗೂ ಮುನ್ನವೇ ಕೇಂದ್ರದಲ್ಲಿ ಮಂತ್ರಿಯಾಗಲು ಡಜನ್ ಗಟ್ಟಲೆ ಆಕಾಂಕ್ಷೆಗಳು ರೆಡಿಯಾಗುತ್ತಿದ್ದಾರೆ. ಮಂತ್ರಿಯಾಗುವ ಕನಸಿನಲ್ಲಿರುವ ಅಭ್ಯರ್ಥಿಗಳು ಮೊದಲು ಚುನಾವಣೆಯಲ್ಲಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.

ಕಳೆದ ನಾಲ್ಕು ಅವಧಿಯಲ್ಲಿ ಬೆಳಗಾವಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯೇ ಆರಿಸಿಬರುತ್ತಿದ್ದು, ಈ ಬಾರಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಬೇಕು. ಕೇಂದ್ರದಲ್ಲಿ ಇಂಡಿಯಾ ಒಕ್ಕೂಟದ ಸರ್ಕಾರ ಬಂದೇ ಬರುತ್ತೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

* ಬಿಜೆಪಿ ಕೊಟ್ಟಿದ್ದ ಒಂದೂ ಭರವಸೆ ಈಡೇರಿಸಿಲ್ಲ - ಸವದಿ*

ನಿಜವಾದ ದೇಶ ಭಕ್ತರು ಕಾಂಗ್ರೆಸಿಗರು. ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್. ಸ್ವಾತಂತ್ರ್ಯ ಬಂದಾಗ ದೇಶದಲ್ಲಿ ಬಿಜೆಪಿ‌ ಹುಟ್ಟಿರಲಿಲ್ಲ. ಚಕ್ರವರ್ತಿ ಸೂಲಿಬೆಲೆ ಎಂಬ ಅರಬೆಂದ ವ್ಯಕ್ತಿಗಳಿಂದ ಜನರ ಮುಂದೆ ಸುಳ್ಳು ಹೇಳಿಸುವುದೇ ಬಿಜೆಪಿ ಕೆಲಸ.‌ 2014 ರಲ್ಲಿ ಬಿಜೆಪಿ ಹೇಳಿದ ಒಂದೇ ಒಂದು ಮಾತನ್ನೂ ಈಡೇರಿಸಿಲ್ಲ. ನದಿ ಜೋಡಣೆ ಭರವಸೆ ಏನಾಯಿತು. ಪೆಟ್ರೋಲ್, ಡಿಸೇಲ್ ರೇಟ್ ಕಡಿಮೆ ಮಾಡ್ತೀವಿ ಅಂದಿದ್ದು ಕೇವಲ ಭರವಸೆ ಆಗಿಯೇ ಉಳಿಯಿತು. ರಸಗೊಬ್ಬರ ದರ ಕಡಿಮೆ ಮಾಡುವುದಾಗಿ ಭರವಸೆ ನೀಡಿದ್ದ ಕೇಂದ್ರ ರೈತರಿಗೆ ಅನ್ಯಾಯ ಮಾಡಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಲಕ್ಷ್ಮಣ್ ಸವದಿ ಲೇವಡಿ ಮಾಡಿದರು.

ಬಿಜೆಪಿಯಲ್ಲಿ ಹಿಂದುಳಿದ ವರ್ಗಗಳ ನಾಯಕನಾಗಿ ಕೆ.ಎಸ್.ಈಶ್ವರಪ್ಪ ಒಬ್ಬರೇ ಇದ್ದದ್ದು, ಈ‌ ಚುನಾವಣೆಯಲ್ಲಿ ಅವರನ್ನೂ ಮುಗಿಸಿಬಿಟ್ಟರು. ಇದರಿಂದ ಹಿಂದುಳಿದ ವರ್ಗಗಳ ಮೇಲೆ ಬಿಜೆಪಿಯವರಿಗೆ ಅಭಿಮಾನ ಇಲ್ಲ ಎಂದು ತೋರುತ್ತದೆ. ಇದಕ್ಕೆ ಹಾಲು ಮತ ಸಮುದಾಯದವರು ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳಬೇಕು. 40 ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದರೂ ಈಶ್ವರಪ್ಪಗೆ ಬಿಜೆಪಿ ಅನ್ಯಾಯ ಎಸಗಿದೆ ಎಂದು ಶಾಸಕ ಲಕ್ಷ್ಮಣ್ ಸವದಿ ಟೀಕಿಸಿದರು.

* ಬೃಹತ್ ಮೆರವಣಿಗೆ


ಮೂಡಲಗಿ ಸಮಾವೇಶಕ್ಕೂ ಮುನ್ನ ಪುರಸಭೆಯಿಂದ ಆರಂಭಗೊಂಡ ಮೆರವಣಿಗೆ ಸಂಗಪ್ಪ‌ ಸರ್ಕಲ್ ಮಾರ್ಗವಾಗಿ ಬಸವ ಮಂಟಪ ತಲುಪಿತು. ಸುಮಾರು ಐದು ಸಾವಿರಕ್ಕೂ ಅಧಿಕ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಇದಕ್ಕೂ ಮೊದಲು ಅರಭಾವಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ದುರದುಂಡಿ, ರಾಜಾಪೂರ, ಶಿವಾಪೂರ, ಖಾನಟ್ಟಿ‌, ಮುನ್ಯಾಳ ಗ್ರಾಮಗಳಲ್ಲಿ ಸಚಿವ ಸತೀಶ್ ಜಾರಕಿಹೊಳಿ‌ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜಂಟಿ ಪ್ರಚಾರ ನಡೆಸಿದರು. ಧರ್ಮಟ್ಟಿ,‌ ಸುಣಧೋಳಿ ಗ್ರಾಮಗಳಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಚಾರ ಕೈಗೊಂಡರು.

* ಮಠಕ್ಕೆ ಭೇಟಿ
ಮೂಡಲಗಿಯ ಶ್ರೀ ಶಿವಭೋಧರಂಗ ಮಠಕ್ಕೆ ಭೇಟಿ ನೀಡಿದ ಸಚಿವರು, ಶ್ರೀ ಶ್ರೀಪಾದ ಅಮೃತ ಸ್ವಾಮೀಜಿ ಹಾಗೂ ಶ್ರೀ ಸಮರ್ಥ್ ಸ್ವಾಮೀಜಿಯವರ‌ ಆಶೀರ್ವಾದ ಪಡೆದರು.

ಈ ವೇಳೆ ಮುಖಂಡರಾದ ಅರವಿಂದ್ ದಳವಾಯಿ, ಅನಿಲ್ ದಳವಾಯಿ, ಬಿ.ಬಿ.ಹಂದಿಗುಂದ್, ಎಸ್.ಆರ್. ಸೋನವಾಲ್ಕರ್, ಪ್ರಕಾಶ್ ಅರಳಿ, ಲಖನ ಸವಸುದ್ದಿ, ರಮೇಶ್ ಉಟಗಿ, ಸುರೇಶ್ ಮಗದುಮ್, ಭರಮಣ್ಣ ಉಪ್ಪಾರ್, ರವಿ ಮೂಡಲಗಿ, ಲಕ್ಕಣ್ಣ ಸವಸುದ್ದಿ, ಅಜಿತ್ ಬೆಳಕೋಡ, ರಾಮಣ್ಣ ಬೆಳಕೋಡ, ಮಲ್ಲಿಕಾರ್ಜುನ ಗೋರೂಶಿ, ಲಗಮ್ನನ ಕಳಸನ್ನವರ್, ಉಮೇಶ್ ಬಿ ಪಾಟೀಲ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ವರದಿ ಪ್ರತೀಕ ಚಿಟಗಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ