Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನೀರಲ್ಲ ತುಪ್ಪದಿಂದ ತಯಾರಾದ ವಿಶ್ವದ ಏಕೈಕ ದೇವಾಲಯ 

Advertisement
ರಾಜಸ್ಥಾನ : ಭಾರತೀಯ ದೇವಾಲಯಗಳ ನಿರ್ಮಾಣ ಬಹಳಷ್ಟು ವಿಶೇಷತೆಗಳಿಂದ ಕೂಡಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಸುಂದರ ದೇವಾಲಯಗಳು ಇಂದಿಗೂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ.

ಪುರಾತನ ದೇವಾಲಯಗಳ ನಿರ್ಮಾಣ ವಿಧಾನಗಳು ಬಹಳ ಅದ್ಭುತವಾಗಿವೆ. ರಾಜಸ್ಥಾನದ ಭಂಡಾಸರ್ ದೇವಾಲಯದ ನಿರ್ಮಾಣವಂತೂ ಭಕ್ತರನ್ನು ಅಚ್ಚರಿಗೊಳಿಸುವುದರಲ್ಲಿ ಅನುಮಾನವೇ ಇಲ್ಲ.

ಈ ದೇವಾಲಯದ ನಿರ್ಮಾಣದ ಸಂದರ್ಭದಲ್ಲಿ ನೀರಿನ ಬದಲು ತುಪ್ಪವನ್ನು ಬಳಸಲಾಗಿದೆ. ರಾಜಸ್ಥಾನದಲ್ಲಿರುವ ಭಂಡಾಸರ್ ದೇವಾಲಯವನ್ನು 15ನೇ ಶತಮಾನದಲ್ಲಿ ಬಂದಾ ಶಾ ಓಸ್ವಾಲ್ ಎಂಬ ಶ್ರೀಮಂತ ವ್ಯಾಪಾರಿ ನಿರ್ಮಿಸಿದ. ಈ ದೇವಾಲಯವು ಜೈನ ಧರ್ಮದ ಐದನೇ ತೀರ್ಥಂಕರ ಸುಮತಿನಾಥನಿಗೆ ಸಮರ್ಪಿತವಾಗಿದೆ.

ಈ ದೇವಾಲಯವು ತುಪ್ಪದಿಂದ ಮಾಡಲ್ಪಟ್ಟಿದೆ, ಮಾತ್ರವಲ್ಲ ಅದರ ಒಳಾಂಗಣ ಮತ್ತು ವಾಸ್ತುಶಿಲ್ಪ ಕೂಡ ಕಣ್ಸೆಳೆಯುವಂತಿದೆ. ಅನೇಕ ಜೈನ ದೇವಾಲಯಗಳಂತೆ ಸುಂದರ ಕೆತ್ತನೆಗಳು ಮತ್ತು ವರ್ಣಚಿತ್ರಗಳನ್ನು ಹೊಂದಿದೆ. ಈ ದೇವಾಲಯವನ್ನು ಮೂರು ಮಹಡಿಗಳಲ್ಲಿ ನಿರ್ಮಿಸಲಾಗಿದೆ, ಇದರಲ್ಲಿ ಜೈನ ಸಂಸ್ಕೃತಿಯ ವಿಭಿನ್ನ ಅಂಶಗಳನ್ನು ನೋಡಬಹುದು.

ದೇವಾಲಯವನ್ನು ತುಪ್ಪದಿಂದ ನಿರ್ಮಿಸಿದ್ದೇಕೆ?

ಈ ದೇವಾಲಯವನ್ನು ನೀರಿನ ಬದಲು ತುಪ್ಪದಿಂದ ನಿರ್ಮಿಸಿದ್ದೇಕೆ ಅನ್ನೋದು ಇಂಟ್ರೆಸ್ಟಿಂಗ್‌ ಸಂಗತಿ. ಬಂದಾ ಷಾ ಇಲ್ಲಿ ದೇವಾಲಯ ನಿರ್ಮಾಣಕ್ಕೆ ಮುಂದಾದಾಗ ಗ್ರಾಮಸ್ಥರು ಅದನ್ನು ವಿರೋಧಿಸಿದ್ದರು. ಏಕೆಂದರೆ ಆ ಭಾಗದಲ್ಲಿ ನೀರಿಗಾಗಿ ತೀವ್ರ ಹಾಹಾಕಾರವಿತ್ತು, ಬದುಕುವುದೇ ಕಷ್ಟವೆಂಬ ಪರಿಸ್ಥಿತಿಯಿತ್ತು.

ಅಂಥದ್ರಲ್ಲಿ ದೇವಾಲಯ ನಿರ್ಮಾಣಕ್ಕೆ ಸಾವಿರಾರು ಲೀಟರ್‌ ನೀರು ವ್ಯರ್ಥವಾಗುತ್ತದೆ ಎಂಬುದು ಗ್ರಾಮಸ್ಥರ ವಾದ. ಇದನ್ನು ಆಲಿಸಿದ ಬಂದಾ ಷಾ ದೇವಾಲಯವನ್ನು ನೀರಿನ ಬದಲು ತುಪ್ಪದಿಂದ ನಿರ್ಮಿಸಲು ನಿರ್ಧರಿಸಿದ.

ದೇವಾಲಯದ ಅಡಿಪಾಯ ಸಂಪೂರ್ಣ ತುಪ್ಪದಿಂದ ಮಾಡಲ್ಪಟ್ಟಿದೆ ಎಂಬುದನ್ನು ಅಗೆದು ಪರೀಕ್ಷಿಸಿಲ್ಲ. ಆದರೆ ದೇವಾಲಯ ನಿರ್ಮಾಣದಲ್ಲಿ ತುಪ್ಪವನ್ನು ಬಳಸಿದ್ದರಿಂದ ಸೆಖೆಗಾಲದಲ್ಲಿ ಇಲ್ಲಿ ನೆಲ ಜಾರುತ್ತದೆ, ಸ್ತಂಭಗಳು ಮತ್ತು ನೆಲದಿಂದ ತುಪ್ಪ ಸೋರುತ್ತದೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ