Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸುಗಮ ಸಂಚಾರಕ್ಕೆ ಪೋಲೀಸ್ ಇಲಾಖೆಯಿಂದ ಅನುವು

Advertisement
ಸಿರುಗುಪ್ಪ :- ನಗರದ ಬಸ್ ನಿಲ್ದಾಣ, ತರಕಾರಿ ಮಾರುಕಟ್ಟೆ ಹತ್ತಿರದ ಹೂವು ಮತ್ತು ಹಣ್ಣು ಇನ್ನಿತರ ವ್ಯಾಪಾರದ ತಳ್ಳುಗಾಡಿಗಳನ್ನು ಹಿಂದಕ್ಕೆ ಸರಿಸಿದ ಪೋಲೀಸ್ ಇಲಾಖೆಯು ಇಟ್ಟಿಗೆಗಳಿಂದ ಗಡಿಯನ್ನು ನಿರ್ಮಿಸಿ ರಸ್ತೆಯ ಬಳಿ ಬಾರದಂತೆ ಸೂಚಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.



ನಮ್ಮ ತಳ್ಳುಗಾಡಿಗಳು ಇದ್ದಲ್ಲೇ ಇರುತ್ತವೆ ಸಾರ್ ಬೇರೆ ಕಡೆಯಿಂದ ವಾಹನಗಳಲ್ಲಿ ಬಂದು ತರಕಾರಿ ಮತ್ತು ಹಣ್ಣು ಮಾರುವವರಿಂದ ತೊಂದರೆಯಾಗುತ್ತಿದೆ ಎಂದು ಬೀದಿ ಬದಿ ವ್ಯಾಪಾರಿಗಳು ತಿಳಿಸಿದರು.



ಪಿ.ಎಸ್.ಐ ಪರಶುರಾಮ ಅವರು ಮಾತನಾಡಿ ವ್ಯಾಪಾರದ ಪೈಪೋಟಿಯಿಂದಾಗಿ ತಳ್ಳು ಗಾಡಿಯ ವ್ಯಾಪಾರಿಗಳು ರಸ್ತೆಯ ಪಕ್ಕಕ್ಕೆ ಬಂದು ನಿಲ್ಲುವ ಕಾರಣ ಗ್ರಾಹಕರು ರಸ್ತೆಯ ಮೇಲೆ ತಮ್ಮ ವಾಹನಗಳನ್ನು ನಿಲ್ಲಿಸಿ ಖರೀದಿಸುವುದರಿಂದ ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿರುವ ಕಾರಣ ಸಾರ್ವಜನಿಕರ ಹಿತಾದೃಷ್ಟಿಯಿಂದಾಗಿ ತಳ್ಳುಗಾಡಿಗಳನ್ನು ಹಿಂದಕ್ಕೆ ಸರಿಸಲಾಗಿದೆ.

ಬಸ್ ನಿಲ್ದಾಣ ಮತ್ತು ತರಕಾರಿ ಮಾರುಕಟ್ಟೆಗೆ ಬರುವ ಸಾರ್ವಜನಿಕರಿಗೆ ಸದಾ ಕಿರಿಕಿರಿಯಾಗುತ್ತಿದ್ದ ಪರಿಣಾಮ ಸಂಚಾರ   ಸುಗಮಗೊಳಿಸಲಾಗಿದೆ.ಖಾಸಗಿ ಬಸ್ ನಿಲುಗಡೆಯ ತೆರವಿಗಾಗಿ ಸಂಬಂದಪಟ್ಟ ಸಾರಿಗೆ ಅಧಿಕಾರಿಗಳಿಂದ ದೂರು ಅಥವಾ ಮನವಿ ಸಲ್ಲಿಕೆಯಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದರು.

ಸರ್ಕಾರಿ ಬಸ್ ನಿಲ್ದಾಣದ ಹತ್ತಿರ ರಸ್ತೆಗೆ ಅಡ್ಡಲಾಗಿ ನಿಲ್ಲುವ ಖಾಸಗಿ ಬಸ್‌ಗಗಳಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗುವ ಬಗ್ಗೆ ಸಾರ್ವಜನಿಕರು ಆರೋಪಿಸಿದರು.ಈ ಬಗ್ಗೆ ವ್ಯಪಸ್ಥಾಪಕ ತಿರುಮಲೇಶ ಅವರು ಪ್ರತಿಕ್ರಿಯಿಸಿ ನಿಲ್ದಾಣದ ಬಳಿ ನಿಲ್ಲುವ ಖಾಸಗಿ ಬಸ್‌ಗಳ ನಿಲುಗಡೆಯನ್ನು ತೆರವುಗೊಳಿಸುವಂತೆ ಈಗಾಗಲೇ ಮೂರು ಬಾರಿ ಮನವಿ ಮಾಡಲಾಗಿದ್ದು ಮತ್ತೊಮ್ಮೆ ಮನವಿ ಮಾಡಲಾಗುವುದೆಂದರು.

ವರದಿ .ಶ್ರೀನಿವಾಸ ನಾಯ್ಕ
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ ಕಾಂಗ್ರೆಸ್ ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ : ಪ್ರತಾಪ್ ಸಿಂಹ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 15 ರೂ. ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ 22 ರೂ. ಹೆಚ್ಚಳ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ಮಯಾಂಕ ಯಾದವ್‌ಗೆ ವಿಕೆಟ್  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಜಾತ್ರೆಗೆ ಹೋಗುವ ವಿಚಾರಕ್ಕೆ ದಂಪತಿ ನಡುವೆ ಜಗಳ : ದೂದಗಂಗಾ ನದಿಗೆ ಹಾರಿದ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಹೆಣ್ಣು ಮಗು ಎಂಬ ಕಾರಣಕ್ಕೆ ನೀರಿನ ಸಂಪ್ ಗೆ ಎಸೆದು ಕೊಂದು ಪಾಪಿ ತಂದೆಸುಳ್ಳು ಸುದ್ದಿ ಪ್ರಕಟ : ಸಂಪಾದಕ ಆನಂದ್ ಕೌಶಿಕ್ 6 ತಿಂಗಳು ಸಜೆ ಮತ್ತು 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯಬಾಗಲಕೋಟೆ ಬೇಕರಿ ತಪಾಸಣೆ ತಾಜಾ ಎಣ್ಣೆ ಬಳಸಿ : ಸಿಲಿಂಡರ್ ಹೊರಗಿಡಿ ಉಪಲೋಕಾಯುಕ್ತರ ಎಚ್ಚರಿಕೆ