
ಒಳ ಮೀಸಲಾತಿಗೆ ನ್ಯಾಯಾಲಯ ತೀರ್ಪು ನೀಡಿದ ಬಳಿಕ ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿ ಪಟಾಕಿ ಸಿಡಿಸಿ ಪರಸ್ಪರ ಸಿಹಿ ತಿನಿಸಿ ಸಂಭ್ರಮಿಸಿದರು.

ನಂತರ ಪರಮೇಶ್ವರ ಕಾಳಮಂದರಗಿ ಮಾತನಾಡಿ ರಾಜ್ಯ ಸರಕಾರ ಒಳಮೀಸಲು ನೀಡಬಹುದು ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.ಒಳ ಮೀಸಲು ನೀಡುವಂತೆ ಕಳೆದ ಹಲವು ವರ್ಷಗಳಿಂದ ಮಾಡಿದ ಹೋರಾಟ ಫಲವಾಗಿ ಇದೀಗ ತೀರ್ಪು ನೀಡಿದ್ದು ಸಂತೋಷ ತಂದಿದೆ.
ಒಳಮೀಸಲಾತಿ ನೀಡುವಂತೆ ಹಲವು ಬಾರಿ ಕೇಂದ್ರ, ರಾಜ್ಯ ಸರಕಾರಗಳಿಗೆ ಮನವಿ ಸಲ್ಲಿಸಲಾಗಿತ್ತು.ಈ ಬಗ್ಗೆ ದೇಶಾದ್ಯಂತ ಜಾಗೃತಿ ಮೂಡಿಸಲಾಗಿತ್ತು. ಅಂತಿಮವಾಗಿ ಸುಪ್ರೀಂಕೋರ್ಟ್ ಒಳ ಮೀಸಲು ಒದಗಿಸುವ ಮೂಲಕ ಸಾಮಾಜಿಕ ನ್ಯಾಯ ನೀಡಿದೆ.ಇದರ ಶ್ರೇಯಸ್ಸು ಮಂದ ಕೃಷ್ಣ ಮಾದಿಗ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಕಾಳಪ್ಪ ಪಾಟೀಲ,ಸುನೀಲ್ ಮೇಟಿಕರ್,ಅತಿಕ್ರಾಜ, ಪ್ರವೀಣ್ ಹೊಂಬಾಳೆ,ಮಹೇಶ್ ಕಟ್ಟಿಮನಿ,ಯಶ್, ಆಕಾಶ್, ಪವಿತ್ರ್,ಅರುಣ್ ರೋಹನ್, ಶ್ರೀವಾಸ ಕರಣ್ ಲಕ್ಕಿ ಹಾಗೂ ಮಾದಿಗ ಸಮುದಾಯದ ನೂರಾರು ಯುವಕರು ಭಾಗಿಯಾಗಿದ್ದರು.
ವರದಿ:- ಸಜೀಶ ಲಂಬುನೋರ್

