Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸದ್ಯದಲ್ಲೇ ಇಳಿಕೆಯಾಗಲಿದೆ ಟಿವಿ, ಪ್ರಿಡ್ಜ್, ಮೊಬೈಲ್ ದರ 

Advertisement
ನವದೆಹಲಿ : ಮತ್ತೊಮ್ಮೆ ಅಮೆರಿಕ ಅಧ್ಯಕ್ಷರಾದ ಬಳಿಕ ಡೊನಾಲ್ಡ್ ಟ್ರಂಪ್ ವಿಶ್ವಕ್ಕೆ ಸುಂಕ ಸಮರ ಸಾರಿದ್ದು, ಅದರಲ್ಲೂ ಚೀನಾದಿಂದ ಅಮೆರಿಕಾಗೆ ಆಮದಾಗುವ ಎಲ್ಲಾ ವಸ್ತುಗಳ ಮೇಲಿನ ಸುಂಕದ ಸಮರದಿಂದ ಚೀನಾ ಕಂಗಾಲಾಗಿದೆ.

ಚೀನಾದ ವಸ್ತುಗಳ ಮೇಲೆ ಶೇ.125 ತೆರಿಗೆ ಹಾಕಿರುವ ಅಮೆರಿಕಾದ ಸಹವಾಸವೇ ಬೇಡ ಎಂಬಂತೆ,ಈ ನಿಟ್ಟಿನಲ್ಲಿ ಹಲವಾರು ಚೀನಾ ಎಲೆಕ್ಟ್ರಾನಿಕ್ ಘಟಕ ತಯಾರಕರು ಭಾರತೀಯ ಕಂಪನಿಗಳಿಗೆ ಶೇ.5ರಷ್ಟು ರಿಯಾಯಿತಿಗಳನ್ನು ನೀಡಲು ಆರಂಭಿಸಿದ್ದಾರೆ ಎಂದು ವರದಿಯಾಗಿದೆ.

ಹೀಗಾಗಿ ಮುಂದಿನ ದಿನಗಳಲ್ಲಿ ಮೊಬೈಲ್‌, ಟಿವಿ, ಫ್ರಿಡ್ಜ್‌ ಸೇರಿದಂತೆ ಚೀನಾದಿಂದ ಬರುವ ಬಹುತೇಕ ಎಲೆಕ್ಟ್ರಾನಿಕ್ಸ್‌ ವಸ್ತುಗಳ ಬೆಲೆಯು ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಚೀನಾ-ಅಮೆರಿಕ ನುಡುವಿನ ಸುಂಕದ ಸಮರದಿಂದ ಚೀನಾಗೆ ವ್ಯಾಪಾರ ಉದ್ವಿಗ್ನತೆ ಎದುರಾಗಿದೆ. ಹೀಗಾಗಿ ರಿಯಾಯಿತಿ ದರದಲ್ಲಿ ಭಾರತಕ್ಕೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಸರಬರಾಜು ಮಾಡಲು ಚೀನಾ ಮುಂದಾಗಿದೆಯಂತೆ.

ಆರಂಭದಲ್ಲಿ ಚೀನಾವು ಅಮೆರಿಕದ ವಸ್ತುಗಳಿಗೆ ಶೇ.67 ತೆರಿಗೆ ಹಾಕಿತ್ತು. ಈ ಕಾರಣಕ್ಕೆ ಟ್ರಂಪ್‌ ಕಳೆದ ಏ.2 ರಂದು ಚೀನಾ ವಸ್ತುಗಳಿಗೆ ಶೇ. 34 ಸುಂಕ ವಿಧಿಸುವುದಾಗಿ ಘೋಷಣೆ ಮಾಡಿದ್ದರು. ಹೀಗೆ ಜಿದ್ದಾಜಿದ್ದಿನಂತೆ ಸುಂಕದ ಸಮರ ಮುಂದುವರಿಯಿತು.

ಇತ್ತ ಸಿಟ್ಟಾದ ಚೀನಾ, ಅಮೆರಿಕದ ವಸ್ತುಗಳ ಮೇಲೆ ಶೇ.84 ಸುಂಕ ಘೋಷಿಸಿತು. ಇದಕ್ಕೆ ಸಿಡಿದೆದ್ದ ಟ್ರಂಪ್ ಮತ್ತೆ ಚೀನಾದ ವಸ್ತುಗಳ ಮೇಲೆ ಶೇ.125 ತೆರಿಗೆ ಹಾಕಿದರು. ಹೀಗಾಗಿ ಅಮೆರಿಕಾದ ಸುಂಕ ಸಮರಕ್ಕೆ ಹೆದರಿದ ಚೀನಾ, ಭಾರತಕ್ಕೆ ರಿಯಾತಿ ದರದಲ್ಲಿ ತನ್ನ ಎಲೆಕ್ಟ್ರಾನಿಕ್ಸ್​​ ವಸ್ತುಗಳನ್ನು ಮಾರಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ