ಉದಯನಿಧಿ ಸ್ಟಾಲಿನ್ ಅವರನ್ನ ರಾಜ್ಯದ ಉಪಮುಖ್ಯಮಂತ್ರಿಯನ್ನಾಗಿ ಮಾಡಬಹುದು ಮತ್ತು ಕ್ಯಾಬಿನೆಟ್ ಪುನರ್ರಚನೆಯೂ ಸಾಧ್ಯವಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮಂಗಳವಾರ ಸುಳಿವು ನೀಡಿದ್ದರು.
ಉದಯನಿಧಿ, ಮುಖ್ಯಮಂತ್ರಿ ಹುದ್ದೆಯನ್ನ ಹೊಂದಿರುವ ತಮ್ಮ ತಂದೆಗೆ ಉಪನಾಯಕರಾಗಿ ಸೇವೆ ಸಲ್ಲಿಸಲಿದ್ದಾರೆ. ಭಾನುವಾರ ಮಧ್ಯಾಹ್ನ 3:30 ಕ್ಕೆ ರಾಜಭವನದಲ್ಲಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.

