
ಬಳಿಕ ನೂತನ ಅಧ್ಯಕ್ಷ ಮಾತನಾಡಿ ಗ್ರಾಮದ ಅಭಿವೃದ್ಧಿಗೆ ಹಾಗೂ ಮೂಲ ಸೌಕರ್ಯ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.ಉಪಾಧ್ಯಕ್ಷ ಮಾತನಾಡಿ,ನನ್ನನ್ನು ಒಳಗೊಂಡು ಎಲ್ಲ ಸದಸ್ಯರು ಬೆಂಬಲ ನೀಡಿ ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡಲಾಗುತ್ತದೆ ಎಂದು ಹೇಳಿದರು.
ನಂತರ ಗ್ರಾಮಸ್ಥರು ಅಧ್ಯಕ್ಷ ಉಪಾಧ್ಯಕ್ಷರ ಮೆರವಣಿಗೆ ಮಾಡಿದರು.ಈ ಸಂದರ್ಭದಲ್ಲಿ ಪಿಡಿಒ ಸಂಗಮೇಶ,ಸದಸ್ಯರಾದ ಶಿಲ್ಪಾ ಶಿವಪ್ಪಾ,ಸುವರ್ಣ, ಶಂಕರರಾವ,ಶಾರದಾಬಾಯಿ, ಹಣಮಂತ,ಕಾಶಮ್ಮಾ,ಸರಸ್ವತಿ,ವೈಜಿನಾಥ, ಶೋಭಾವತಿ,ಕವಿತಾ,ರಾಜಪ್ಪಾ,ಝರೆಪ್ಪಾ, ಸುಜಾತಾ,ರಾಮಶೆಟ್ಟಿ,
ಪ್ರಮುಖರಾದ ಬೀರಪ್ಪ ಮಾರ್ಥಂಡ,ಸಂಗಪ್ಪ,ವೀರಪ್ಪ ,ಶಿವಪುತ್ರ,ಸಚಿನ್ ಸೇರಿದಂತೆ ಅನೇಕರು ಇದ್ದರು.
ವರದಿ:-ಸಜೀಶ ಲಂಬುನೋರ್

