Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅದ್ದೂರಿಯಾಗಿ ಆಚರಣೆ ಮಾಡಬೇಕಿದ್ದ ವಾಲ್ಮೀಕಿ ಜಯಂತಿ ಕೇವಲ ಸರ್ಕಾರಿ ಕಾರ್ಯಕ್ರಮಕ್ಕೆ ಸೀಮಿತ.

Advertisement
ಮೊಳಕಾಲ್ಮುರು :- ಭಾರತದ ಎರಡು ಮಹಾನ್ ಕಾವ್ಯಗಳಲ್ಲಿ ಒಂದಾದ ರಾಮಾಯಣ ಕೃತಿಯನ್ನು ರಚಿಸಿದ ಆದಿ ಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಪ್ರತಿ ವರ್ಷವೂ ಆಚರಿಸಲಾಗುವುದು ವಾಲ್ಮೀಕಿ ರಾಮಾಯಣ ಕಲ್ಪವೃಕ್ಷವಿದ್ದಂತೆ ಮನುಕುಲಕ್ಕೆ ಬೇಕಾದ ಆದರ್ಶಗಳು ಸಾಮಾಜಿಕ ಮೌಲ್ಯಗಳು ಈ ಮಹಾ ಕಾವ್ಯದಲ್ಲಿವೆ ಎಂದು ಶಾಸಕರಾದ ಎನ್ ವೈ ಗೋಪಾಲಕೃಷ್ಣರವರು ತಿಳಿಸಿದರು.



ಪಟ್ಟಣದಲ್ಲಿ ಗುರುವಾರ ಆಡಳಿತ ಸೌಧ ಆವರಣದಲ್ಲಿ ವಾಲ್ಮೀಕಿ ಜಯಂತಿಯ ಹಿನ್ನೆಲೆಯಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.ಭರತ ಖಂಡದ ಆದಿ ಕವಿ ಎಂದೇ ಪ್ರಸಿದ್ಧವಾದ ರಾಮಾಯಣ ವಾಲ್ಮೀಕಿ ಮನುಕುಲದ ವಿಕಾಸವನ್ನು ತನ್ನ ಒಡಲೊಳಗೆ ಇಟ್ಟು ಮನುಷ್ಯ ಚರಿತ್ರೆಯನ್ನು ರೂಪಗಳಲ್ಲಿ ಜಗತ್ತಿಗೆ ಸಾರಿದ ಮಹಾನ್ ಸಂತ ವಾಲ್ಮೀಕಿ ಎಂದರು ಇಂತಹ ಮಹಾನ್ ದಾರ್ಶಾನಿಕ ಜಯಂತಿಯನ್ನು ಪಾಲ್ಗೊಂಡು ಆಚರಿಸುತ್ತಿರುವುದು ನಮ್ಮೆಲ್ಲರ ಪುಣ್ಯ ಎಂದರು. ಮುಂದಿನ ದಿನಗಳಲ್ಲಿ ವಾಲ್ಮೀಕಿ ಭವನವನ್ನು ಉದ್ಘಾಟನೆ ಮಾಡಿ ಅದ್ದೂರಿ ಕಾರ್ಯಕ್ರಮವನ್ನು ಮಾಡೋಣ ಎಂದು ತಿಳಿಸಿದರು.



ಈ ಸಂದರ್ಭದಲ್ಲಿ ತಹಸೀಲ್ದಾರರಾದ ಜಗದೀಶ್ ವಾಲ್ಮೀಕಿ ಮಹಾ ಕವಿ ಬಗ್ಗೆ ತಮ್ಮ ಅನಿಸಿಕೆಗಳನ್ನು ತಿಳಿಸಿದರು.ಒಟ್ಟಿನಲ್ಲಿ ವಾಲ್ಮೀಕಿ ಜಯಂತಿ ಇಡೀ ತಾಲೂಕಿನಾದ್ಯಂತ ವಿಜೃಂಭಣೆಯಿಂದ ಡೊಳ್ಳು ವಾದ್ಯ ಕುಣಿತಗಳೊಂದಿಗೆ ಆಚರಿಸುತ್ತಿದ್ದ ಜಯಂತಿಯು ಕೇವಲ ಸರ್ಕಾರಿ ಕಾರ್ಯಕ್ರಮ ವಾಗಿರುವುದು ದುರಂತವೇ ಸರಿ ತಾಲೂಕಿನಲ್ಲಿ ಅತಿ ಹೆಚ್ಚು ವಾಲ್ಮೀಕಿ ಸಮಾಜದವರಿದ್ದು ಕೂಡ ಕೇವಲ ಬೆರಳೆಣಿಕೆಯಷ್ಟು ಸಮಾಜದ ಮುಖಂಡರು ವಾಲ್ಮೀಕಿ ಜಯಂತಿ ಆಚರಣೆ ಮಾಡಿರುವುದು ಬೇಸರದ ಸಂಗತಿಯಾಗಿದೆ.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಲೀಲಾವತಿ ಸಿದ್ದಣ್ಣ, ವಾಲ್ಮೀಕಿ ಮುಖಂಡರಾದ ಮಾರ್ನಾಯಕ ಜಗಳೂರಯ್ಯ ದೇವಯ್ಯ ಮುರಳಿಧರ ನಾಯಕ ನಾಗಸಮುದ್ರ ಗೋವಿಂದಪ್ಪ ಬಡೋ ಬಯ್ಯ ಅಬ್ದುಲ್ಲ ಪಟೇಲ್ ಜಿ ಪಾಪು ನಾಯಕ್ ಜಿಪಿ ಸುರೇಶ್ ನಾಯಕ ಸಮಾಜದ ಯುವ ಮುಖಂಡರಾದ ಬಿ ವಿಜಯ್, ಭೀಮಣ್ಣ, ಗಂಗಾಧರ, ಸಿದ್ದಣ್ಣ ಇನ್ನು ಹಲವರು ಉಪಸ್ಥಿತರಿದ್ದರು.

ವರದಿ- ಪಿಎಂ ಗಂಗಾಧರ

 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ