
ಬೈಕ ರ್‍ಯಾಲಿಯ ರಾಮದುರ್ಗ ಪಟ್ಟಣದ ಪ್ರಮುಖ ಸ್ಥಳಗಳಾದ ಲಕ್ಷ್ಮಮಿ ನಗರ, ಮಹಾಂತೇಶ ನಗರ ,ಹೋಸಬಸ್ಸ ನಿಲ್ದಾಣ,ಹಾಗೂ ಹರಳಯ್ಯ ಸರ್ಕಲ್, ತೇರ ಬಜಾರ, ನೇವಿಪೇಠಿ, ಸರ್ಕಾರಿ ಆಸ್ಪತ್ರೆ ಸರ್ಕಲ್ ವರಿಗೂ ಸಂಚರಿಸಿಲಾಯಿತು.

ಈ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆ ವೃತ್ತದಲ್ಲಿ ಮಾತನಾಡಿದ ಮಾನ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಬಸವರಾಜ ಐನಾಪೂರ ಮಾತನಾಡಿ ರಾಮದುರ್ಗ ಕ್ಷೇತ್ರದಲ್ಲಿ ವಿವಿದ ಜಾಗೃತಿಗಳ ಮುಖಾಂತರ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. ಮೇ 7 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರು ಬಾಗವಹಿಸಿ ಮತದಾನ ಚಲಾಯಿಸಿ ಪ್ರಜಾಪ್ರಭುತ್ವ ಹಬ್ಬವನ್ನು ಯಶಸ್ವಿಗೊಳಿಸೋಣ ಎಂದರು.
ಬೈಕ ರ್‍ಯಾಲಿಯ ಮೂಲಕ ಮರಳಿ ತಾಲೂಕ ಪಂಚಾಯತಿ ಕಾರ್ಯಲಯಕ್ಕೆ ಬಂದು ತಾಲೂಕ ಪಂಚಾಯತಿ ಆವರಣದಲ್ಲಿ ಮಾನವ ಸರಪಳಿ ಮತದಾನ ಪ್ರತಿಜ಼ಾ ಬೋದನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾನ್ಯ ಸಹಾಯಕ ನಿರ್ದೇಶಕರು (ಪಂ ರಾ) ಅಪ್ಪಯ್ಯಪ್ಪ ಕುಂಬಾರ ಹಾಗೂ ತಾಲೂಕಿನ ವಿವಿದ ಇಲಾಖೆ ಅದಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ತಾಲೂಕ ಪಂಚಾಯತಿ ಸಿಬ್ಬಂದಿ ವರ್ಗ ಉಪಸ್ಥಿತಿರಿದ್ದರು.
ವರದಿ:-ಮಂಜುನಾಥ ಕಲಾದಗಿ

