Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಟಿಕೆಟ್ ಇಲ್ಲದ ಮಹಿಳೆಯರನ್ನು ರೈಲ್ವೆಯಿಂದ ಇಳಿಸುವಂತಿಲ್ಲ : ಮಹತ್ವದ ಆದೇಶ 

Advertisement
ನವದೆಹಲಿ : ಪ್ರತಿದಿನ ಸಾವಿರಾರು ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ, ಅದರಲ್ಲಿ ಮಹಿಳೆಯರೂ ಸೇರಿದ್ದಾರೆ. ಅದಕ್ಕಾಗಿಯೇ ರೈಲ್ವೆ ಇಲಾಖೆಯು ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹೊಸ ಕಾನೂನುಗಳನ್ನು ಮಾಡಿದೆ. ರೈಲಿನಲ್ಲಿ ಒಬ್ಬಂಟಿಯಾಗಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಕಾನೂನುಗಳನ್ನು ವಿಶೇಷವಾಗಿ ಮಾಡಲಾಗಿದೆ.

ಭಾರತೀಯ ರೈಲ್ವೆ ಕಾಯ್ದೆ 1981 ರ ಸೆಕ್ಷನ್ 139 ರ ಪ್ರಕಾರ, ಟಿಕೆಟ್ ಇಲ್ಲದೆ ಪ್ರಯಾಣಿಸುವ ಮಹಿಳೆಯರನ್ನು ಟಿಕೆಟ್ ಪರೀಕ್ಷಕರು ಬಲವಂತವಾಗಿ ಇಳಿಸುವ ಹಾಗಿಲ್ಲ. ದಂಡ ಪಾವತಿಸುವ ಮೂಲಕ ಪ್ರಯಾಣ ಮುಂದುವರಿಸಬಹುದು. ಮಹಿಳೆಯನ್ನು ಇಳಿಸಬೇಕಾದರೆ ಮಹಿಳಾ ಪೊಲೀಸ್ ಅಧಿಕಾರಿ ಇರಬೇಕು.

12 ವರ್ಷದೊಳಗಿನ ಹುಡುಗ, ತಾಯಿಯೊಂದಿಗೆ ಮಹಿಳಾ ವರ್ಗದಲ್ಲಿ ಪ್ರಯಾಣಿಸಬಹುದು. ಸೇನಾ ಸಿಬ್ಬಂದಿಗೆ ಮಹಿಳಾ ವರ್ಗಕ್ಕೆ ಪ್ರವೇಶವಿಲ್ಲ. ದೂರದ ಪ್ರಯಾಣದಲ್ಲಿ ಸ್ಲೀಪರ್ ಮತ್ತು ಎಸಿ ಮೂರನೇ ವರ್ಗದಲ್ಲಿ 6 ಆಸನಗಳನ್ನು ಕಾಯ್ದಿರಿಸಬೇಕು.

ಮಹಿಳೆಯರ ಸುರಕ್ಷತೆಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕಿರುಕುಳ ನೀಡಿದರೆ ದೂರು ಸಂಖ್ಯೆಗೆ ಕರೆ ಮಾಡಬಹುದು ಅಥವಾ ಸಾಮಾಜಿಕ ಮಾಧ್ಯಮದಲ್ಲಿ ದೂರು ನೀಡಬಹುದು.

ರೈಲು ನಿಲ್ದಾಣಗಳಲ್ಲಿಯೂ ಮಹಿಳೆಯರ ಮೇಲೆ ಅನೇಕ ರೀತಿಯ ಕಿರುಕುಳ, ದೌರ್ಜನ್ಯ ನಡೆಯುತ್ತವೆ. ಹೀಗಾಗಿ, ಸರಿಯಾದ ದೀಪದ ವ್ಯವಸ್ಥೆ, ಕಾಯಲು ಸೂಕ್ತ ಸ್ಥಳ, ಉತ್ತಮ ಶೌಚಾಲಯಗಳ ವ್ಯವಸ್ಥೆ ಜತೆ ಇವೆಲ್ಲದರ ಬಗ್ಗೆ ಗಮನಹರಿಸಲು ‍ಪೊಲೀಸರು, ರೈಲ್ವೆ ಸಿಬ್ಬಂದಿ ಇರುವುದು ಅವಶ್ಯಕ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ