
ಕಾಯ೯ಕ್ರಮದ ಕುರಿತು ಪ್ರಾಸ್ತಾವಿಕವಾಗಿ ಕನಾ೯ಟಕ ಅಕ್ಸೆಸಬಿಲಿಟಿ ಟಾಸ್ಕ್ ಪೋಸ೯ ಮತ್ತು ಕನಾ೯ಟಕ ರಾಜ್ಯ ಅಂಗವಿಕಲರ ಆರ್ ಪಿ ಡಿ ಟಾಸ್ಕ್ ಪೋಸ೯ ಸಮಿತಿಯ ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಸುರೇಶ ಭಂಡಾರಿಯವರು ದೇಶದಲ್ಲಿನ ಎಲ್ಲ ವರ್ಗದವರಿಗೂ ಸಂವಿಧಾನದಲ್ಲಿ ಸಮಾನವಾದ ಅವಕಾಶ ಕಲ್ಪಿಸಲಾಗಿದೆ. ಸಂವಿಧಾನದಡಿ ಸರ್ಕಾರಗಳು ಜನರಿಗೆ ಹಲವು ಸವಲತ್ತುಗಳನ್ನು ನೀಡುತ್ತಿದ್ದು, ಇದನ್ನು ಪ್ರತಿಯೊಬ್ಬರೂ ಸದ್ಬಳಕೆ ಮಾಡಿಕೊಳ್ಳಬೇಕು. ಆ ಮೂಲಕ ಎಲ್ಲರೂ ಒಂದೇ ಭಾವನೆ ಹೊಂದಬೇಕು’ ಎಂದು ತಿಳಿಸಿದರು.
ಕಾಯ೯ಕ್ರಮದಲ್ಲಿ ಲಿಂಗಸುಗೂರು ಶಿಶು ಅಭಿವೃದ್ಧಿ ಯೋಜನಾ ಧಿಕಾರಿಗಳಾದ ಶ್ರೀ ಗೋಕುಲಸಾಬ. ವಿಕಲಚೇತನರ ತಾಲೂಕ ನೋಡೆಲ್ ಅಧಿಕಾರಿಗಳಾದ ಶ್ರೀಮತಿ ರಾಜೇಶ್ವರಿ ಮುದಗಲ್ ಉಪ ತಹಶೀಲ್ದಾರರಾದ ಶ್ರೀ ತುಳಜಾರಾಮ್ ಸಿಂಗ್ ಮುದಗಲ್ ಪುರಸಭೆ ಸಂಘಟನಾಧಿಕಾರಿಗಳಾದ ಚೆನ್ನಮ್ಮ ದಳವಾಯಿ ಲಿಂಗಸುಗೂರು ವಿವಿದೋದ್ದೇಶ ಕಾಯ೯ಕತ೯ರಾದ ಶ್ರೀ ನಾಗರಾಜ್ ಚೇತನ ಸಂಸ್ಥೆಯ ಅಧ್ಯಕ್ಷರಾದ ಹುಸೇನಬಾಷಾ, ಅಸ್ಕಿಹಾಳ ನಾಗರಾಜ್, ಅಮರೇಶ ಪಾಟೀಲ್ ,ವೀರುಪಾಕ್ಷಯ್ಯ ಹೊಸಮಠ ಹಾಗೂ ವಿಕಲಚೇತನರು ಹಾಗೂ ಪೋಷಕರು ಭಾಗವಹಿಸಿದ್ದರು,
ವರದಿ:-ಮಂಜುನಾಥ ಕುಂಬಾರ

