ವಿಜಯಪುರ: ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ವರಸೆ ತೆಗೆದಿದ್ದಾರೆ. ಪ್ರಸಕ್ತ ರಾಜಕೀಯದ ಬಗ್ಗೆ ಮಾತನಾಡುತ್ತಾ ಮುಂದಿನ ಬಾರಿ ನಾನೇ ಸಿಎಂ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ನನ್ನದು ಏಕಾಂಗಿ ಹೋರಾಟ, ಏಕಾಂಗಿಯಾಗಿ ಸಿಎಂ ಆಗುತ್ತೇನೆ. ಅದು ಹೊಸ ಪಕ್ಷದಿಂದ ಆಗಬಹುದು. ಬಿಜೆಪಿ ಬೆಂಬಲದಿಂದಲೂ ಆಗಬಹುದು.
ನಾಳೆ ನನಗೆ ಬೆಂಬಲ ಕೊಡುವ ಅನಿವಾರ್ಯತೆ ಬರಬಹುದು. ಅವರೇ ನನಗೆ ಬೆಂಬಲ ಕೊಟ್ಟು ಸಿಎಂ ಮಾಡ್ತಾರೆ ಎಂದು ಯತ್ನಾಳ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರ ವೈಫಲ್ಯದ ಬಗ್ಗೆ ಮಾತಾಡಿದ ಯತ್ನಾಳ್, ಸಿಎಂ, ಡಿಸಿಎಂ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಸ್ಥಿತಿ ಚಿಂತಾಜನಕ ಸ್ಥಿತಿಯಲ್ಲಿದೆ ಎಂದ್ರು.
ಮುಂದಿನ ಬಾರಿ ನಾನೇ ಸಿಎಂ ಆಗಲಿದ್ದು, ನನಗೆ ಬಿಜೆಪಿ ಬೆಂಬಲವೂ ಸಿಗಬಹುದು ಎಂದು ಯತ್ನಾಳ್ ಹೊಸ ವರಸೆ ತೆಗೆದಿದ್ದಾರೆ.