ಬೆಂಗಳೂರು : ಶ್ರೀರಾಮ ಚಂದ್ರನು ಮನುಷ್ಯನ ರೂಪದಲ್ಲಿ ಭೂಮಿಗೆ ಬಂದರು ಜೊತೆಗೆ ರಾಮ ವಿಷ್ಣುವಿನ ಏಳನೇ ಅವತಾರವಾಗಿರುವುದರಿಂದ ಶ್ರೀರಾಮ ಸನಾತನ ಹಿಂದೂ ಧರ್ಮಕ್ಕೆ ಪವಿತ್ರ ದಿನಾವನ್ನಾಗಿ ಶ್ರೀರಾಮ ನವಮಿ ಹಬ್ಬ ಎಂದು ಆಚರಿಸುತ್ತೇವೆ ಎಂದು ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ರಾಜ್ಯಾಧ್ಯಕ್ಷ ವಿ. ಆನಂದ್ ಹೇಳಿದರು.
ಅವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಪೀಣ್ಯ 2ನೇ ಹಂತದಲ್ಲಿ ಇರುವ ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ಪ್ರದಾನ ಕಚೇರಿ ಮುಂಭಾಗ ಆಯೋಜಿಸಿದ್ದ ಶ್ರೀರಾಮ ನವಮಿ ಅಂಗವಾಗಿ ಬೃಹತ್ ಆಕಾರದ ಶ್ರೀರಾಮ ಮೂರ್ತಿ ಸ್ಥಾಪಿಸಿ ವೇದ ಘೋಷಗಳಿಂದ ಶಾಸ್ತ್ರೋಕ್ತವಾಗಿ ವಿಷೇಶ ಪೂಜೆ ಪುನಸ್ಕಾರ ಮಹಾಮಂಗಳಾರತಿ ಜರುಗಿದವು ನಂತರ ಪಾನಕಾ, ಮೇಜಿಗೆ ಮತ್ತು ಕೊತಂಬರಿ ವಿತರಿಸಿ ನಂತರ ಅವರು ಮಾತನಾಡಿದ ಚೈತ್ರ ಶುದ್ಧ ನವಮಿಯಂದು ಶ್ರೀಮನ್ನಾರಾಯಣನು ತ್ರೆತಾಯುಗದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನಾಗಿ ಜನಿಸಿದ ದಿನ ಅಂದರೆ ಪ್ರಯುಕ್ತ ಶ್ರೀ ರಾಮ ನವಮಿ ಹಿಂದೂ ಧರ್ಮದವರಿಗೆ ಪವಿತ್ರ ಹಬ್ಬ ಎಂದು ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ರಾಜ್ಯಾಧ್ಯಕ್ಷ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಕೆ ಡಬ್ಲ್ಯೂ ಲೇಔಟ್ನಿ ರವೀಂದ್ರ ಕುಮಾರ್, ಗೋವೀಂದರಾಜು, ಜಿಲ್ಲಾಧ್ಯಕ್ಷ ಸುಂದರ್ ರಾಜನ್, ಶ್ರೀಕಾಂತ್, ಮುಖಂಡರಾದ ಗ್ಯಾಸ್ ಶಂಕರ್, ವಿಜಿ, ಸಿದ್ಧಲಿಂಗಯ್ಯ, ಸಂದೀಪ್, ಕಾಂತರಾಜು, ಶ್ರೀಕಾಂತ್,ನಾಗು, ಮಲ್ಲಿಕಾರ್ಜುನ್ ಮಹಿಳಾ ಮುಖ್ಯಸ್ಥೆ ಲತಾ ಸೇರಿದಂತೆ ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ಪದಾಧಿಕಾರಿಗಳು ಸಮಸ್ತ ನಾಗರಿಕರು ಮಹಿಳೆಯರು ಕಾರ್ಯಕರ್ತರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್