Ad imageAd image

ನಿಡಗುಂದಿ ಎ. ವಲಯ ಪ್ರೌಢ ಶಾಲೆಗಳ ಕ್ರೀಡಾಕೂಟ 2024-25.

Bharath Vaibhav
ನಿಡಗುಂದಿ ಎ. ವಲಯ ಪ್ರೌಢ ಶಾಲೆಗಳ ಕ್ರೀಡಾಕೂಟ 2024-25.
WhatsApp Group Join Now
Telegram Group Join Now

 ನಿಡಗುಂದಿ:-ಬನಶಂಕರಿ ಪಬ್ಲಿಕ್ ಸ್ಕೂಲ್ & ಪಿ. ಯು. ಕಾಲೇಜ, ನಿಡಗುಂದಿ ಇವರ ಸಂಯುಕ್ತ ಆಶ್ರಯದಲ್ಲಿ ನಿಡಗುಂದಿ ಎ. ವಲಯ ಪ್ರೌಢ ಶಾಲೆಗಳ ಕ್ರೀಡಾಕೂಟ 2024-25.

ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನಲ್ಲಿ ಎ.ವಲಯ ಪ್ರೌಢಶಾಲಾ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು, ಸರಕಾರಿ ಅನುದಾನಿತ ಅನುದಾನ ರಹಿತ ಶಾಲಾ ಮಕ್ಕಳು ಕ್ರೀಡೆಯಲ್ಲಿ ಪಾಲ್ಗೊಂಡು ಕ್ರೀಡಾ ಧ್ವಜಾರೋಹಣವನ್ನು ಗುರು ಕೃಪಾ ಸಂಸ್ಥೆಯ ಅಧ್ಯಕ್ಷರು ಸತೀಶ್ ಪಾಟೀಲ್ ನೆರವೇರಿಸಿದರು.

ಕ್ರೀಡಾ ಜ್ಯೋತಿ ಚಾಲನೆಯನ್ನು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರು ಸುರೇಶ್ ಗಲಗಲಿ ಹಾಗೂ ಇ, ಸಿ, ಓ, ಯು ವಾಯ್ ಬಶೆಟ್ಟಿ ಮತ್ತು ಸಿ ಆರ್ ಸಿ ಭಾಷಾಸಾಬ್ ಮನಗೂಳಿ ನೆರವೇರಿಸಿದರು. ಪ್ರತಿಜ್ಞಾವಿಧಿ ಶಿವರಾಜ್ ಲೋಕಾಪುರ್, ಹಾಗೂ ನಿರೂಪಣೆಯನ್ನು ಬನಶಂಕರಿ ಶಾಲೆಯ ಶಿಕ್ಷಕಿ ಸಾವಿತ್ರಿ ದೇಸಾಯಿ ಅವರು ನೆರವೇರಿಸಿದರು.

ಎಲ್ಲಾ ಶಾಲೆ ವಿದ್ಯಾರ್ಥಿಗಳ ಅತ್ಯುತ್ತಮವಾದಂತಹ ಕ್ರೀಡೆ ಪ್ರತಿಭೆಯನ್ನು ಹೊರ ಹಾಕಿದರೆ.ಗುಂಪು ಆಟ ವೈಯಕ್ತಿಕ ಆಟಗಳನ್ನು ಮಳೆಯ ಅಭಾವದಿಂದ ಎರಡು ದಿನಗಳ ಕಾಲ ಕ್ರೀಡೆ ನಡೆಸಲಾಯಿತು.
ಪ್ರಥಮ ದ್ವಿತೀಯ ಸ್ಥಾನವನ್ನು ಗಳಿಸಿದ ತಂಡಗಳಿಗೆ ಬಹುಮಾನ ವಿತರಿಸಲಾಯಿತು.ಸರಕಾರಿ,ಅನುದಾನಿತ, ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಕರು ತಮ್ಮ ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ನೆರವೇರಿಸಿದರು.

ಗಂಗಾಧರ ಹಿರೇಮಠ, ರಾಜೇಶ್ವರಿ ಶಿಲವಂತ, ಹಿರಿಯ ದೈಹಿಕ ಶಿಕ್ಷಕ ನಾಗಣಿ, ಪಿ ವಾಯ್ ಗುಂಡಿನಪಲ್ಲೆ, ಅಶೋಕ್ ಚಲವಾದಿ, ಮಂಜುನಾಥ್ ನಿಗರಿ, ದಾನಪ್ಪನವರ, ವ್ಹಿ ಎಸ್ ಕುಲಕರ್ಣಿ ಇನ್ನು ಅನೇಕ ದೈಹಿಕ ಶಿಕ್ಷಕರು ಕ್ರೀಡಾಕೂಟದ ಯಶಸ್ಸಿಗೆ ಕಾರಣರಾದರು.

ವರದಿ :ಅಲಿ ಮಕಾನದಾರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!