Ad imageAd image

ಗೋದ್ರೇಜ್ ಕಂಪನಿಯ ₹30 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡಿಸಿಕೊಂಡ ನಿಡಗುಂದಿ ಪೊಲೀಸ

Bharath Vaibhav
ಗೋದ್ರೇಜ್ ಕಂಪನಿಯ ₹30 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡಿಸಿಕೊಂಡ ನಿಡಗುಂದಿ ಪೊಲೀಸ
WhatsApp Group Join Now
Telegram Group Join Now

ನಿಡಗುಂದಿ : ಗೋದ್ರೇಜ್ ಕಂಪನಿಯ ವಿವಿಧ ವಸ್ತುಗಳಿದ್ದ ಸುಮಾರು ₹30 ಲಕ್ಷ ಮೌಲ್ಯದ ವಸ್ತುಗಳಿದ್ದ 525 ಬಾಕ್ಸ್ ಗಳನ್ನು ವಶಕ್ಕೆ ಪಡಿಸಿಕೊಂಡ ನಿಡಗುಂದಿ ಪೊಲೀಸ.

ಮಹಾರಾಷ್ಟ್ರದಿಂದ ಹೊರಟ್ಟಿದ್ದ ಶುಭಂ ಟ್ರಾನ್ಸಪೋರ್ಟ್‌ಗೆ ‌ ‌ ಸಂಬಂಧಿಸಿದ ‌ ಕಂಟೇನ‌ರ್ ‌ ಟ್ರಕ್‌ನಲ್ಲಿ ‌ ಆಲಮಟ್ಟಿಯ ಬಳಿ 525 ಬಾಕ್ಸ್ ಗಳನ್ನು ‌ ಕಳವು ದೂರು ಬಂದ ಕೂಡಲೇ ನಿಡಗುಂದಿ ಪೊಲೀಸ್ ರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದರು.

ಸಿಪಿಐ ಶರಣಗೌಡ ಗೌಡರ ಅವರ ನೇತೃತ್ವದಲ್ಲಿ ಪೊಲೀಸ್ ತಂಡ ಚುರುಕಿನ ಕಾರ್ಯಾಚರಣೆ ನಡೆಸಿತು. ಜ. 21 ರಂದು ಕಳವು ಆರೋಪಿ ರಾಜಸ್ಥಾನ ಮೂಲದ ಪಾಲರಾಮ ತಂದೆ ತೇಜಾರಾಮ (32) ನನ್ನು ವಶಕ್ಕೆ ಪಡೆದು ಆತನಿಂದ ಕಳುವಾಗಿದ್ದ ಗೋದ್ರೇಜ್ ಕಂಪನಿಯ ವಿವಿಧ ವಸ್ತುಗಳಿದ್ದ ಸುಮಾರು ₹30 ಲಕ್ಷ ಮೌಲ್ಯದ ವಸ್ತುಗಳಿದ್ದ 525 ಬಾಕ್ಸ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಯನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿದ ಡಿವೈಎಸ್‌ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಶರಣಗೌಡ ಗೌಡರ, ಪಿಎಸ್‌ಐಗಳಾದ ಶಿವಾನಂದ ಪಾಟೀಲ, ಎ.ಕೆ. ಸೊನ್ನದ ಹಾಗೂ ಸಿಬ್ಬಂದಿ ಜನರಾದ-ಎ.ಸಿ ಪಾಟೀಲ, ಬಿ.ಸಿ ಪಾಟೀಲ, ಶಿವಯ್ಯ ಮಠಪತಿ, ವೀರೇಶ ಭಗವತಿ. ವೀರೇಶ.ಎಸ್. ಪಿ.ಎಸ್ ಕುಂಬಾರ, ಸಂಗಮೇಶ ಹಡಲಗೇರಿ: ಚಿದಾನಂದ ತೋಳಮಟ್ಟಿ, ಬಿ.ಎಸ್ ಹಿರೇಮಠ, ಎಮ್.ಎ ಬೋಳರೆಡ್ಡಿ, ಎಸ್.ಎಸ್ ಅಂಗಡಗೇರಿ, ಎಮ್.ವಿ ಮಠ, ವಿ.ಎಸ್ ಹಿರೇಮಠ, ಎಮ್.ಎಸ್ ಪಾಟೀಲ, ಎಸ್.ಎಸ್ ಮ್ಯಾಗೇರಿ, ವಿ.ಡಿ ಕಕ್ಕಳಮೇಲಿ ಹಾಗೂ ಜಿಲ್ಲಾ ಗಣಕಯಂತ್ರ ಘಟಕದ ಸಿಬ್ಬಂದಿ ಜನರಾದ ಸುನೀಲ ಗೌಳಿ, ಗುಂಡು ಗಿರಣಿವಡ್ಡರ, ಎಮ್.ಎ ಬಗವಾನ. ಜಬ್ಬರ ಇಲಕಲ್ ಇವರ ಕಾರ್ಯವನ್ನು ಶ್ಲಾಘಿಸಿ ಬಹುಮಾನ ಘೋಷಣೆ ಮಾಡಲಾಗಿದೆ.

ಎಲ್ಲ ಸಿಬ್ಬಂದಿಯ ಜಿಲ್ಲಾ ಪೊಲೀಸ್ ಕಾರ್ಯವನ್ನು ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ ಎಂದು ಡಿವೈಎಸ್‌ಪಿ ಬಲ್ಲಪ್ಪ ನಂದಗಾವಿ ತಿಳಿಸಿದ್ದಾರೆ.

ವರದಿ : ಅಲಿ ಮಕಾನದಾರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!