Ad imageAd image

ಅತ್ಯುತ್ತಮ ತಾಲೂಕು ಪಂಚಾಯತಿ ಪುರಸ್ಕಾರಕ್ಕೆ ನಿಡಗುಂದಿ ತಾಪಂ ಆಯ್ಕೆ

Bharath Vaibhav
ಅತ್ಯುತ್ತಮ ತಾಲೂಕು ಪಂಚಾಯತಿ ಪುರಸ್ಕಾರಕ್ಕೆ ನಿಡಗುಂದಿ ತಾಪಂ ಆಯ್ಕೆ
WhatsApp Group Join Now
Telegram Group Join Now

ನಿಡಗುಂದಿ:ಅತ್ಯುತ್ತಮ ತಾಲೂಕು ಪಂಚಾಯತಿ ಪುರಸ್ಕಾರಕ್ಕೆ ನಿಡಗುಂದಿ ತಾಪಂ ಆಯ್ಕೆ
ನಿಡಗುಂದಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ 2023-24ನೇ ಸಾಲಿನಲ್ಲಿ ಬೆಳಗಾವಿ ವಿಭಾಗೀಯ ಮಟ್ಟದಲ್ಲಿ ನಿಡಗುಂದಿ ತಾಲೂಕು ಪಂಚಾಯತಿ ಅತ್ಯುತ್ತಮ ತಾಲೂಕು ಪಂಚಾಯತಿ ಪುರಸ್ಕಾರಕ್ಕೆ ಆಯ್ಕೆಯಾಗಿದೆ.

ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಮೆಮೋರಿಯಲ್ ಟ್ರಸ್ಟ್ ಸಭಾಂಗಣದಲ್ಲಿ ಫೆ.5 ರಂದು ಜರುಗುವ ನರೇಗಾ ಹಬ್ಬ-2025 ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ವಂದಾಲ ಅವರು ತಿಳಿಸಿದ್ದಾರೆ.

ತಾಲೂಕು ಪಂಚಾಯತಿಯಿಂದ ಗುರಿಗಿಂತ 2 ಲಕ್ಷಕ್ಕೂ ಅಧಿಕ ಮಾನವ ದಿನಗಳನ್ನು ಸೃಜಿಸಲಾಗಿ,ನೆಡುತೋಪು ನಿರ್ಮಾಣ, ಕೆರೆ, ಕಾಲುವೆ, ಬಸಿಗಾಲುವೆ, ಚೆಕ್ ಡ್ಯಾಮ್, ಬಾಂದಾರ್ ಹೂಳೆತ್ತಿದ್ದರಿಂದ ಬರಗಾಲ ನಿರ್ವಹಣೆಗೆ ಹಾಗೂ ವಲಸೆ ಪ್ರಮಾಣ ತಡೆಗಟ್ಟಲು ಅನುಕೂಲವಾಗಿದೆ.

ವರದಿ :ಅಲಿ ಮಕಾನದಾರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!