ಚಿಕ್ಕೋಡಿ: ಬೆಳಗಾವಿಯ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಖಡಕಲಾಟ್ ಕ್ರಾಸ್ ಬಳಿ ಇರುವ ಏಳು ಮುಖ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಕಮೀಟಿ ಹಾಗೂ ಶಿಕ್ಷಣ ಪ್ರೇಮಿಗಳ ವತಿಯಿಂದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ 2024-25 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಾಧನೆ ಮಾಡಿರುವ ವಿದ್ಯಾರ್ಥಿನಿ ನಿಕಿತಾ ಪ್ರಮೇಶ ಬಿಂದ ಇವರಿಗೆ ಶಾಲು ಹಾಕಿ, ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಶ್ರೀ ಕಲ್ಮೇಶ್ವರ ಶಿಕ್ಷಣ ಸಂಸ್ಥೆ ಎನ್ ವೈ ಕಿವಡ್ ಇಂಗ್ಲೀಷ್ ಮೀಡಿಯಮ್ ಹೈಸ್ಕೂಲ್ ಚಿಕ್ಕೋಡಿ ಯಲ್ಲಿ ವ್ಯಾಸಂಗ ಮಾಡುತ್ತಿದ್ದ ಚಿಕ್ಕೋಡಿ ಶಹರ್ ನಿವಾಸಿ ನಿಕಿತಾ ಪ್ರಮೇಶ್ ಬಿಂದ 523 ಅಂಕಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿದ್ಯಾರ್ಥಿನಿ ತಂದೆ ತಾಯಿಯ ಸಹಕಾರ, ಪ್ರೋತ್ಸಾಹ, ಶಾಲೆಯಲ್ಲಿ ಶಿಕ್ಷಕರು ನೀಡಿದ ಮಾರ್ಗದರ್ಶನದ ಫಲವಾಗಿ ನಾವಿಂದು ಎಸ್ ಎಸ್ ಎಲ್ ಸಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸಲು ಸಾಧ್ಯವಾಯಿತೆಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರೊ. ಬಾಪುಸಾಹೇಬ ವಾಘಮೋಡೆ, ಪತ್ರಕರ್ತರಾದ ರಾಜು ಮುಂಡೆ ವಿದ್ಯಾರ್ಥಿಗಳ ಸಾಧನೆ ಕುರಿತು ಮಾತನಾಡಿ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಜೀವನ ಚೆನ್ನಾಗಿರಲಿ ಎಂದು ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿಸುನೀಲ್ ಅಣ್ಣಾಸೋ ಸಟಾಲೆ ಪ್ರೊ. ಬಾಪುಸಾಹೇಬ ಬಾಳು ವಾಘಮೋಡೆ ಸರ ಖಡಕಲಾಟ
ವಿನಾಯಕ ತುಕಾರಾಮ ಶಿಂಧೆ indian army ಚಿಕ್ಕಲವಾಳ ಮಹೇಶ್ ತುಕರಾಂ ಪವಾರ್ ಚಿಕ್ಕಲವಾಳ ,
ಡಾ. ಶಿವಾನಂದ ದೇಸಾಯಿ ಖಡಕಲಾಟ ಗೋಪಾಲ ವಾಘಮೋಡೆ ಖಡಕಲಾಟ ಸುಶಾಂತ್ ಸುನೀಲ್ ಸಟಾಲೆ
ಗಣೇಶ್ ಬಣ್ಣೆ ಪಟ್ಟಣಕುಡಿ,ರಾಜು ಮುಂಡೆ, ಕುಮಾರ್ ಪಾಟೀಲ, ರವಿ ಕೋಟಬಾಗಿ, ಸದಾಶಿವ ದೊಡಮನಿ, ಹಾಗೂ ವಿದ್ಯಾರ್ಥಿನಿ ತಂದೆ ಪ್ರಮೇಶ್ ಬಿಂದ, ತಾಯಿ ಸುಧಾ ಪ್ರಮೆಶ್ ಬಿಂದ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ




