ಮೊಳಕಾಲ್ಮೂರು: ಅತ್ಯಧಿಕ ಉಪಕರಣಗಳ ಸಹಾಯದಿಂದ ನಿಧಿ ಪತ್ತೆಯಲ್ಲಿ ತೊಡಗಿದ್ದ 9 ಜನರನ್ನು ಅರೆಸ್ಟ್ ಮಾಡುವಲ್ಲಿ ಮೊಳಕಾಲ್ಮುರು ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಗ್ಯಾಂಗ್ ಭೂಮಿಯೊಳಗಿನ ವಿಗ್ರಹಗಳನ್ನು ಪತ್ತೆ ಮಾಡಿ ಮಾರಾಟ ಮಾಡುತ್ತಿದ್ದರು, ಬೈರಾಪುರ ಹಿರೇಕರಹಳ್ಳಿ ಗ್ರಾಮದ ಮಧ್ಯ ವಿಭೂತಿ ಗುಡ್ಡದಲ್ಲಿ ರಾತ್ರಿ ವೇಳೆ ಸದ್ದಿಲ್ಲದೆ ನಿಧಿಗಾಗಿ ಹುಡುಕಾಟ ನಡೆಸಿದ್ದಾರೆ. ತಮಿಳುನಾಡು ಆಂಧ್ರ ತೆಲಂಗಾಣ ಕರ್ನಾಟಕ ಸೇರಿ ಸ್ಥಳೀಯರ ಸಹಾಯ ಪಡೆದು ದಂದೆ ನಡೆಸುತ್ತಿದ್ದರು,ತಾಲೂಕಿನ ತಿಮ್ಮರಾಜು ಬೈರಾಪುರ ರಾಮಾಂಜನಿ, ತೆಂಗಿನ ಗೌರಸಮುದ್ರ ಸಣ್ಣಪ್ಪ ಗುಂಡ್ಲುರು, ಮೈಲಾರಪ್ಪ ಬೊಮ್ಮಲಿಂಗನಹಳ್ಳಿ ವೇಣು ಕೃಷ್ಣಗಿರಿ ಮಂಜುನಾಥ್ ಕೃಷ್ಣಗಿರಿ ಆನಂದ ಕೃಷ್ಣಗಿರಿ ಸ್ವಕ ಪುರಂಶ್ರೀನಿವಾಸಲು, ತೆಲಂಗಾಣ ವೆಂಕಟೇಶ್ ರವಿ ತಮಿಳುನಾಡಿನ ವೇಣು ಎಂಬುವರು ಎಸ್ಕೇಪ್ ಎಸ್ಕೇಪ್ ಆಗಿದ್ದಾನೆ ಒಟ್ಟು ಒಂಬತ್ತು ಜನ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.
ಈ ಅಂತರಾಜ ನಿಧಿ ಕಳ್ಳರನ್ನು ಹಿಡಿಯುವಲ್ಲಿ ಮೊಳಕಾಲ್ಮುರು ಪೊಲೀಸ್ ಠಾಣೆಯ ಸಿಪಿಐ ವಸಂತ್ ವಿ ಅಸೋದೆ ಪಿಎಸ್ಐಗಳಾದ ಪಾಂಡುರಂಗಪ್ಪ ಈರೇಶ್, ಮತ್ತು ಸಿಬ್ಬಂದಿಯ ಕಾರ್ಯವನ್ನು ಮೆಚ್ಚಿ ಪೋಲಿಸ್ ಅಧೀಕ್ಷಕರಾದ ರಂಜಿತ್ ಕುಮಾರ್ , ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಿಎಸ್ ಕುಮಾರಸ್ವಾಮಿ, ಡಿ ವೈ ಎಸ್ ಪಿ ರಾಜಣ್ಣ ಸ್ಲಾಗಿಸಿದ್ದಾರೆ. ಘಟನೆಯು ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಒಟ್ಟಿನಲ್ಲಿ ಪೊಲೀಸರ ಕಾರ್ಯಾಚರಣೆಗೆ ತಾಲೂಕಿನ ಜನ ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ವರದಿ :ಪಿಎಂ ಗಂಗಾಧರ