Ad imageAd image

ನಿಪ್ಪಾಣಿ ಮಂಡಲ್ ಪೊಲೀಸರಿಂದ 14 ಲಕ್ಷ ರೂ ಮೌಲ್ಯದ 92 ಮೊಬೈಲ್ ವಶಕ್ಕೆಪಡೆದು ವಂಚಿತರಿಗೆ ಮರಳಿ ಹಸ್ತಾಂತರ 

Bharath Vaibhav
ನಿಪ್ಪಾಣಿ ಮಂಡಲ್ ಪೊಲೀಸರಿಂದ 14 ಲಕ್ಷ ರೂ ಮೌಲ್ಯದ 92 ಮೊಬೈಲ್ ವಶಕ್ಕೆಪಡೆದು ವಂಚಿತರಿಗೆ ಮರಳಿ ಹಸ್ತಾಂತರ 
WhatsApp Group Join Now
Telegram Group Join Now

ನಿಪ್ಪಾಣಿ ಶಹರ ಗ್ರಾಮೀಣ ಹಾಗೂ ಬಸವೇಶ್ವರ ಚೌಕ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದುಕೊಂಡಿದ್ದ 14 ಲಕ್ಷ ರೂಪಾಯಿಗಳ ಮೌಲ್ಯದ 92 ಮೊಬೈಲ್ ಗಳನ್ನು ಪೊಲೀಸರು ಜತ್ತಿ ಮಾಡಿ ಮೊಬೈಲ್ ಕಳೆದುಕೊಂಡವರಿಗೆ ಶುಕ್ರವಾರ ಹಸ್ತಾಂತರಿಸಿದರು. ಚಿಕ್ಕೋಡಿಯ ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಡಲ್ ಪೊಲೀಸ್ ನಿರೀಕ್ಷಕ ಬಿ ಎಸ್ ತಳವಾರ್ ಹಾಗೂ ಪೊಲೀಸ್ ಉಪನಿರೀಕ್ಷಕರ ಹಸ್ತದಿಂದ ಸಂಬಂಧಿಸಿದವರಿಗೆ ಮೊಬೈಲ್ ಗಳನ್ನು ಹಸ್ತಾಂತರಿಸಲಾಯಿತು. ಮೊಬೈಲ್ ಕಳೆದುಕೊಂಡ ವಂಚಿತರಿಗೆ ಮರಳಿ ಸಿಕ್ಕಿದ್ದರಿಂದ ಪಡೆದುಕೊಂಡವರ ಮುಖದಲ್ಲಿ ಸಮಾಧಾನದ ನಿಟ್ಟುಸಿರೊಂದಿಗೆ ನಗೆ ಮೂಡಿತ್ತು.

ಕಳೆದ ಎರಡು ವರ್ಷಗಳಿಂದ ನಿಪ್ಪಾಣಿ ನಗರದಲ್ಲಿಯ 3 ಪೋಲಿಸ ಠಾಣೆಗಳ ವ್ಯಾಪ್ತಿಯಲ್ಲಿಯ ಕೇಂದ್ರ ಬಸ್ ನಿಲ್ದಾಣ, ಮಾರುಕಟ್ಟೆ ರಸ್ತೆ, ಕಿತ್ತೂರು ಚನ್ನಮ್ಮ ವೃತ್ತ ಸೇರಿ ಜನಬಿಡದೀ ಪ್ರದೇಶಗಳಲ್ಲಿ ಮೊಬೈಲ್ ಕಳೆದುಕೊಂಡವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು ಅದರಂತೆ ಪೊಲೀಸರು ಕಾರ್ಯಕರ್ತರರಾಗಿ 92 ಮೊಬೈಲ್ ಗಳನ್ನು ಶಕ್ತಿ ಮಾಡಿದ್ದರು ನಿಪ್ಪಾಣಿ ಶಹರ್ ಪೊಲೀಸ್ ಠಾಣೆಯಿಂದ 11ಲಕ್ಷ 92, ಸಾವಿರ ರೂಪಾಯಿ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಿಂದ 1 ಲಕ್ಷ 22ಸಾವಿರ ಮೌಲ್ಯದ,ಹಾಗೂ ನಿಪ್ಪಾಣಿ ಬಸವೇಶ್ವರ ಪೋಲಿಸ್ ಠಾಣೆಯಿಂದ 1ಲಕ್ಷ 9 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಗಳನ್ನು ಜಪ್ತಿ ಮಾಡಿದ್ದರು. ಇದು ಅಲ್ಲದೆ ಚಿಕ್ಕೋಡಿ ಪಟ್ಟಣದಲ್ಲಿಯ ನೂರಕ್ಕೂ ಅಧಿಕ ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದು ಇದರ ಕುರಿತು ಮಾಹಿತಿ ಪಡೆದು ಆದಷ್ಟು ಬೇಗ ಮೊಬೈಲ್ ವಂಚಿತರಿಗೆ ಹಸ್ತಾಂತರಿಸಲಾಗುವುದೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಂಡಲ್ ಪೊಲೀಸ್ ನಿರೀಕ್ಷಕ ಬಿ ಎಸ್ ತಳವಾರ್ ಮಾತನಾಡಿ ಮೊಬೈಲ್ ಕಳ್ಳರಿಂದ ಜಾಗೃತರಾಗಿರಬೇಕು ಹಾಗೂ ಕಳೆದುಕೊಂಡ ಮೊಬೈಲ್ ಕುರಿತು ಸಂಬಂಧಿಸಿದ ಪೊಲೀಸ್ ಠಾಣಾ ವ್ಯಾಪ್ತಿಗಳಿಗೆ ದೂರು ನೀಡಬೇಕೆಂದರು. ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ್ ಅವರ ನೇತೃತ್ವದಲ್ಲಿ ಮಂಡಲ್ ಪೊಲೀಸ್ ನಿರೀಕ್ಷಕ ಬಿ.ಎಸ್ ತಳವಾರ್ ಪೊಲೀಸ್ ಠಾಣೆಯ ಉಪನಿರೀಕ್ಷಕ ಶಿವಾನಂದ ಕಾರಿಜೋಳ ಪೊಲೀಸ್ ಉಪನಿರೀಕ್ಷಕ ಶಿವರಾಜ್ ನಾಯಕವಾಡಿ ಬಸವೇಶ್ವರ ಚೌಕ ಪೊಲೀಸ್ ಠಾಣೆ ಉಪನಿರೀಕ್ಷಕ ರಮೇಶ್ ಪವಾರ್ ಇವರ ಮಾರ್ಗದರ್ಶನದಲ್ಲಿ ಎಂ ಕಲಾ ವಂತ್, ಯು ಆರ್ ಮಾಳಿಗೆ ಎಂ ಎ ತೇರದಾಳ ಎ ಎಸ್ ಕುಂಬಾರ ಎಸ್ ಎ ಮುಲ್ಲಾ ತಪಾಸನೆ ತಂಡದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಪೊಲೀಸ್ ಪ್ರಮುಖರು ಸದರಿ ತಂಡವನ್ನು ಅಭಿಮಂಡಿಸಿದ್ದಾರೆ.

ವರದಿ:ಮಹಾವೀರ ಚಿಂಚಣೆ 

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!