ನಿಪ್ಪಾಣಿ:ಬಿ ಸಿ ಟ್ರಸ್ಟ್ ತಾಲ್ಲೂಕು ಮತ್ತು ಆಡಿ ಗ್ರಾಮ ಪಂಚಾಯಿತಿ ಮತ್ತು ಕೆರೆ ಅಭಿವೃದ್ಧಿ ಸಮಿತಿ ಆಡಿ ಇವರ ಸಂಯುಕ್ತ ಆಶ್ರಯದಲ್ಲಿ 2025-26ನೇ ಸಾಲಿನ 884ನೇ “ನಮ್ಮೂರು ನಮ್ಮ ಕೆರೆ” ಕಾರ್ಯಕ್ರಮದಲ್ಲಿ (ಮಾದರಿ ಕೆರೆ) ಕೆರೆ ಹಸ್ತಾಂತರ, ನಾಮಫಲಕ ಉದ್ಘಾಟನೆ ಮತ್ತು ಬಾಗಿನ ಅರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಸೌ ಆಶಾಬಾಯಿ ಪೂತದಾರ್ ಅಧ್ಯಕ್ಷರು ಗ್ರಾಮಪಂಚಾಯಿತಿ ಆಡಿ ಇವರು ಅಧ್ಯಕ್ಷೀಯ ಭಾಷೆಯನ್ನು ನೆರವೇರಿಸಿ ಕೊಟ್ಟರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನಮ್ಮೂರಿನ ಕೆರೆಯನ್ನು ತುಂಬಾ ಅಚ್ಚುಕಟ್ಟಾಗಿ ಪುನರ್ಚೇತನ ಗೊಳಿಸಿದ್ದಾರೆ ಇನ್ನು ಮುಂದೆ ಈ ಕೆರೆಯನ್ನು ನಾವು ಸ್ವಚ್ಛತೆ ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕೆಂದು ತಿಳಿಸಿದರು.

ಮಾ ನಿ ಪ್ರಾ ಸಿದ್ಧೇಶ್ವರ ಮಹಾಸ್ವಾಮಿಗಳು,ಸಿದ್ದೇಶ್ವರ ಮಠ ಆಡಿ , ಶ್ರೀಗಳು ಪೂಜ್ಯರ ಬಗ್ಗೆ ಅವರ ಕಾರ್ಯಕ್ರಮಗಳ ಕುರಿತು ಮಾರ್ಗದರ್ಶನ ನೀಡಿದರು ಹಾಗೂ ಸರ್ಕಾರ ತಲುಪದೇ ಇರುವಂತಹ ಗ್ರಾಮಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ತಲುಪಿದೆ ಇದು ಸಂತೋಷದ ವಿಚಾರವನ್ನು ಎಂದು ಪೂಜ್ಯರಿಗೆ ಗೌರವ ಪೂರಕವಾಗಿ ಧನ್ಯವಾದ ವ್ಯಕ್ತಪಡಿಸಿದರು.

ಉದ್ಘಾಟಕರಾಗಿ ಆಗಮಿಸಿದ ಪಂಕಜ್ ಪಾಟೀಲ್ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರು
ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಉದ್ಘಾಟನಾ ಭಾಷಣ ಮಾಡಿ ಮಾತನಾಡಿದ ಅವರು ಧರ್ಮಸ್ಥಳದ ಧರ್ಮಾಧಿಕಾರಿಗಳು ಸಮಾಜದ ದೊಡ್ಡ ಶಕ್ತಿ ಗ್ರಾಮೀಣ ಮಟ್ಟದಲ್ಲಿ ಬಡವರ ದೀನದಲಿತರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಸಮುದಾಯ ಕಾರ್ಯಕ್ರಮಗಳ ಕುರಿತು ಮಾತನಾಡಿ ಶಿಸುವೇತನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಮಹಿಳಾ ವರ್ಗದವರಿಗೆ ಉತ್ತಮ ಸಂಘಟನೆ ಮಾಡಿ ಸ್ವ ಸಹಾಯ ಸಂಘಗಳನ್ನು ಕಟ್ಟಿಕೊಟ್ಟಿದ್ದಾರೆ ಬ್ಯಾಂಕಿನ ಮೂಲಕ ಸಾಲ ಸೌಲಭ್ಯವನ್ನು ಸಕಾಲದಲ್ಲಿ ಒದಗಿಸುತ್ತಿದ್ದಾರೆ ಈ ನಿಟ್ಟಿನಲ್ಲಿ ಹಳ್ಳಿಯ ಮಹಿಳೆಯರು ಆರ್ಥಿಕವಾಗಿ ಸಬಲರಾಗಿದ್ದಾರೆ ಎಂದು ತಿಳಿಸಿದರು.

ಕೆರೆ ನಾಮಫಲಕ ಅನಾವರಣ ಮತ್ತು ಕೆರೆ ಹಸ್ತಾಂತರ ರಾಜು ಪಾಟೀಲ್ ಮತ್ತು ಶ್ರೀ ದೀಪಕ್ ಶೆವಾಳೆ ಆಡಿ ಗ್ರಾಮದ ಮುಖಂಡರು ನೆರವೇರಿಸಿದರು ನೂತನ ಮಾದರಿ ಕೆರೆಗೆ ಬಾಗಿನ ಅರ್ಪಣೆ ಶ್ರೀಮತಿ ದಯಾಶೀಲ ಪ್ರಾದೇಶಿಕ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಧಾರವಾಡ ಪ್ರಾದೇಶಿಕ ಕಚೇರಿ ನೂತನವಾಗಿ ನಿರ್ಮಾಣಗೊಂಡ ಮಾದರಿ ಕೆರೆಗೆ ಬಾಗಿನ ಅರ್ಪಣೆ ಮಾಡುವ ಮೂಲಕ ಕೆರೆ ಅಭಿವೃದ್ಧಿ ಸಮಿತಿ ಹಾಗೂ ಗ್ರಾಮಸ್ಥರಿಗೆ ಶುಭ ಕೋರಿದರು ಮುಂದಿನ ದಿನಗಳಲ್ಲಿ ಕೆರೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿಕೊಂಡು ಹೋಗಲು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಶ್ರೀಪಾಲ್ ಮುನವಳ್ಳಿ ಸ್ಥಾಪಕ ಅಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ ಚಿಕ್ಕೋಡಿ ಹಾಗೂ ವಿಠ್ಠಲ್ ಸಾಲಿಯಾನ್ ಜಿಲ್ಲಾ ನಿರ್ದೇಶಕರು ಆಗಮಿಸಿದ್ದರು.

ಈ ಸಂದರ್ಭದಲ್ಲಿ ಶ್ರೀ ಸೂರಜ್ ಇಂಗಳೇ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಆಡಿ ಉಮೇಶ್ ಬಾಳಸೋ ಹೆಬ್ಬಳ್ಳಿ ಗೌರವಾಧ್ಯಕ್ಷರು ಕೆರೆ ಅಭಿವೃದ್ಧಿ ಸಮಿತಿ ಆಡಿ ಅಣ್ಣಪ್ಪ ಬೋಸ್ಲೆ ಅಧ್ಯಕ್ಷರು ಕೆರೆಯ ಅಭಿವೃದ್ಧಿ ಸಮಿತಿ ಆಡಿ ಸಚಿನ್ ಪಾಟೀಲ್ ಸದಸ್ಯರು ಕೆರೆ ಅಭಿವೃದ್ಧಿ ಸಮಿತಿ ಸುನಿತಾ ಪವಾರ್ ಒಕ್ಕೂಟದ ಅಧ್ಯಕ್ಷರು ಆಡಿ ಮಹೇಶ್ ಒಕ್ಕೂಟ ಅಧ್ಯಕ್ಷರು ಹಂಚಿನಾಳ ನಿಂಗರಾಜ್ ಮಾಳವಾಡ ಅಭಿಯಂತರರು ಪ್ರಾದೇಶಿಕ ಕಚೇರಿ, ಧಾರವಾಡ ಭಾಸ್ಕರ್ ಜನಜಾಗೃತಿ ಯೋಜನಾಧಿಕಾರಿಯವರು ಧಾರವಾಡ ಮಂಜುನಾಥ್ H ಸರ್ ಕ್ಷೇತ್ರ ಯೋಜನಾಧಿಕಾರಿಯವರು ನಿಪ್ಪಾಣಿ ಸುರೇಶ್ ಹಾಲವರ ಕೃಷಿ ಮೇಲ್ವಿಚಾರಕರು ಶಿವಲೀಲಾ ವಲಯದ ಮೇಲ್ವಿಚಾರಕರು ಅಶ್ವಿನೀ ಸೇವಾ ಪ್ರತಿನಿಧಿ ಊರಿನ ಗ್ರಾಮಸ್ಥರು ಸಂಘದ ಸದಸ್ಯರು ಉಪಸ್ಥಿತರಿದ್ದರು.
ವರದಿ :ರಾಜು ಮುಂಡೆ




