ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐ ಶ್ರೀ ಶಿವರಾಜ್ ನಾಯಕ್ವಾಡಿ ನೇತೃತ್ವದಲ್ಲಿ ಕರ್ತವ್ಯ ನಿರ್ವಹಿಸುತ್ತಾ ಮಾಂಗೂರ ಫಾಟಾದಲ್ಲಿ ಸಂಶಯಾಸ್ಪದ ವಾಹನಗಳನ್ನು ಚೆಕ್ ಮಾಡುತ್ತಿದ್ದಾಗ ಮೂರು ಜನ ‘ಆರೋಪಿತರು ಕಳುವು ಮಾಡಿದ ಒಂದು ಮೋಟರ್ ಸೈಕಲ್ ಮೇಲೆ ಪ್ರಾಣಸುತಿದ್ದಾಗ ಸಿಕ್ಕಿದ್ದು ಸದರಿಯವರನ್ನು ದಸ್ತಗಿರಿ ಮಾಡಿ ಈ ಬಗ್ಗೆ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 57/2024 ಕಲಂ: 35(1)(ಇ), 106 ಬಿಎನ್‌ಎಎಸ್ & 303(2) ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಡಾ: ಭೀಮಾಶಂಕರ ಗುಳೇದ, ಮಾನ್ಯ ಎಸ್.ಪಿ. ಸಾಹೇಬರು ಬೆಳಗಾವಿ, ಶ್ರೀಮತಿ ಶೃತಿ ಕೆ., ಮಾನ್ಯ ಹೆಚ್ಚುವರಿ ಎಸ್. ಪಿ. ಸಾಹೇಬರು ಬೆಳಗಾವಿ, ಶ್ರೀ ಬಸನಗೌಡ ಬಸರಗಿ, ಮಾನ್ಯ ಹೆಚ್ಚುವರಿ ಎಸ್. ಪಿ. ಸಾಹೇಬರು ಬೆಳಗಾವಿ, ಶ್ರೀ ಗೋಪಾಲಕೃಷ್ಣ ಗೌಡರ, ಮಾನ್ಯ ಡಿ.ಎಸ್.ಪಿ. ಸಾಹೇಬರು, ಚಿಕ್ಕೋಡಿ ಉಪವಿಭಾಗ ರವರುಗಳ ಮಾರ್ಗದರ್ಶನದಲ್ಲಿ ಹಾಗೂ ಶ್ರೀ ಬಿ.ಎಸ್. ತಳವಾರ ಮಾನ್ಯ ಸಿ.ಪಿ.ಐ. ನಿಪ್ಪಾಣಿ ರವರ ನೇತೃತ್ವದಲ್ಲಿ ಶ್ರೀ ಶಿವರಾಜ ಬಿ. ನಾಯಿಕವಾಡಿ ಪಿ.ಎಸ್.ಐ. ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆ ರವರು ಠಾಣೆಯ ಸಿಬ್ಬಂದಿ ಜನರಾದ ಶ್ರೀ ಎಸ್. ಎ. ತೊಲಗಿ ಎ.ಎಸ್.ಐ., ಶ್ರೀ ಎಸ್. ಎಸ್. ಕಾಡಗೌಡರ ಸಿಎಚ್‌ಸಿ-1795, ಶ್ರೀ ಆರ್. ಆರ್. ಪಾಟೀಲ ಸಿಎಚ್‌ಸಿ- 2746, ಎಮ್. ಎಫ್. ನದಾಫ ಸಿಪಿಸಿ-3876, ಎ. ವಿ. ಚಂದನಶಿವ ಸಿಪಿಸಿ-3469, ರಾಘವೆಂದ್ರ ವಾಯ್. ಮೇಲ್ಗಡೆ ಸಿಪಿಸಿ-3176, ಪಿ. ಎಲ್. ಕುದರಿ ಸಿಪಿಸಿ-3488, ಪಿ. ಬಿ. ಸಿದ್ದಾಟಗಿಮಠ ಸಿಪಿಸಿ-3627 ಹಾಗೂ ವಿನೋದ ಟಕ್ಕನ್ನವರ ಸಿಪಿಸಿ-3145 ಟೆಕ್ನಿಕಲ್ ಸೆಲ್ ಬೆಳಗಾವಿ ರವರನ್ನು ಒಳಗೊಂಡ ವಿಶೇಷ ತನಿಖಾ ತಂಡ ರಚನೆ ಮಾಡಿ ಆರೋಪಿತರನ್ನು ವಿಚಾರಣೆಗೊಳಪಡಿಸಿ ಕಳೆದ 4 ತಿಂಗಳಿನ ಅವಧಿಯಲ್ಲಿ ಆರೋಪಿತರು ಮಹಾರಾಷ್ಟ್ರ ರಾಜ್ಯದ ವಿವಿಧ ಭಾಗಗಳಲ್ಲಿ ಕಳ್ಳತನ ಮಾಡಿಕೊಂಡು ಬಂದು ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸೌಂದಲಗಾ ಗ್ರಾಮ ಹದ್ದಿಯಲ್ಲಿ ಮುಚ್ಚಿಟ್ಟಿದ್ದ 6 ಲಕ್ಷ 60 ಸಾವಿರ ರೂಪಾಯಿ ಮೌಲ್ಯದ ಒಟ್ಟು 10 ಮೋಟರ ಸೈಕಲ್‌ಗಳನ್ನು ಆರೋಪಿತರ ಕಡೆಯಿಂದ ವಶಪಡಿಸಿಕೊಂಡಿದ್ದು ಇರುತ್ತದೆ.
ಈ ಕಾರ್ಯಾಚರಣೆಯ ಬಗ್ಗೆ ಶ್ರೀ ಡಾ: ಭೀಮಾಶಂಕರ ಗುಳೇದ, ಮಾನ್ಯ ಎಸ್.ಪಿ. ಸಾಹೇಬರು ಬೆಳಗಾವಿ ರವರು ಹಾಗೂ ಶ್ರೀಮತಿ ಶೃತಿ ಕೆ., ಮಾನ್ಯ ಹೆಚ್ಚುವರಿ ಎಸ್. ಪಿ. ಸಾಹೇಬರು, ಬೆಳಗಾವಿ, ಶ್ರೀ ಬಸನಗೌಡ ಬಸರಗಿ, ಮಾನ್ಯ ಹೆಚ್ಚುವರಿ ಎಸ್. ಪಿ. ಸಾಹೇಬರು ಬೆಳಗಾವಿ ರವರು ಪ್ರಶಂಶೆಯನ್ನು ವ್ಯಕ್ತಪಡಿಸಿರುತ್ತಾರೆ.
ವರದಿ ರಾಜು ಮುಂಡೆ