ಸೆಡಂ : ತಾಲೂಕಿನ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಅತಿಯಾದ ಮಳೆಯಿಂದಾಗಿ ರೈತ ಸಮುದಾಯವು ಭಾರಿ ಆರ್ಥಿಕ ನಷ್ಟ ಅನುಭವಿಸಿದೆ. ಹಂಗಾಮಿನ ಬೆಳೆಗಳು ನಾಶವಾಗಿ, ಬಿತ್ತನೆಗೆ ಹಾಕಿದ ಶ್ರಮ ಮತ್ತು ವೆಚ್ಚ ವ್ಯರ್ಥವಾಗಿದೆ. ಹೆಸರು, ಉದ್ದು ಹಾಗೂ ಇತರೆ ಹಂಗಾಮಿನ ಬೆಳೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ.
ರೈತರು ಈಗ ಬೆಳೆ ಕಟಾವು ಸಮಯದಲ್ಲಿ ನಿರಾಶೆ ಮತ್ತು ಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರವು ತಕ್ಷಣ ರೈತರ ಪರವಾಗಿ ನಿಂತು ಪರಿಹಾರ ಕ್ರಮ ಕೈಗೊಳ್ಳುವುದು ಅತೀ ಅಗತ್ಯವಾಗಿದೆ.
ಸೆಡಂ ತಾಲೂಕಿನ ರೈತರಿಗೆ ತಕ್ಷಣ ಪ್ರತಿ ಎಕರೆಗೆ ರೂ. 2,500 ಬೆಳೆ ಪರಿಹಾರ ನೀಡಬೇಕು. ಹಾನಿಗೊಂಡ ರೈತರ ಪಟ್ಟಿಯನ್ನು ತ್ವರಿತವಾಗಿ ಸಿದ್ಧಗೊಳಿಸಿ, ಯಾವುದೇ ವಿಳಂಬವಿಲ್ಲದೆ ಪರಿಹಾರ ವಿತರಣೆ ಪ್ರಕ್ರಿಯೆ ಆರಂಭಿಸಬೇಕು. ಈ ಮನವಿಗೆ ಸ್ಪಂದಿಸಿ, ರೈತರ ಬದುಕುಳಿಸುವ ಕಾರ್ಯದಲ್ಲಿ ಕೈಜೋಡಿಸುವಂತೆ ನಿಮ್ಮನ್ನು ಹೃತ್ಪೂರ್ವಕವಾಗಿ ವಿನಂತಿಸುತ್ತೇವೆ ಎಂದು ಸಾಮಾಜಿಕ ಹೋರಾಟಗಾರ ನಿರಂಜನ್ ಬೊಂಬಾಯಿ ಅವರು ಸರಕಾರಕ್ಕೆ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




