ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಧಿಕಾರಕ್ಕೆ ಬಂದರೆ ಎಲ್ಲ ಪಾಲುದಾರರ ಜತೆ ಸಮಾಲೋಚನೆಯ ಮಾಡಿ ನಂತರ ಚುನಾವಣಾ ಬಾಂಡ್ ಯೋಜನೆಯನ್ನು ಮರಳಿ ತರುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದಾರೆ.
ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡಿದ ಅವರು, “ನಾವು ಪಾಲುದಾರರ ಜತೆ ಸಾಕಷ್ಟು ಸಮಾಲೋಚನೆ ನಡೆಸಬೇಕಾಗಿದೆ ಮತ್ತು ಎಲ್ಲರಿಗೂ ಸ್ವೀಕಾರಾರ್ಹವಾದ ಚೌಕಟ್ಟನ್ನು ರಚಿಸಲು ಅಥವಾ ತರಲು ನಾವು ಏನು ಮಾಡಬೇಕು ಎಂಬುದನ್ನು ನೋಡಬೇಕಾಗಿದೆ, ಮುಖ್ಯವಾಗಿ ಪಾರದರ್ಶಕತೆಯ ಮಟ್ಟವನ್ನು ಉಳಿಸಿಕೊಳ್ಳಬೇಕು ಮತ್ತು ಕಪ್ಪು ಹಣವು ಇದರಲ್ಲಿ ಪ್ರವೇಶಿಸುವ ಸಾಧ್ಯತೆಯನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು” ಎಂದು ಹೇಳಿದರು.
ಆದಾಗ್ಯೂ, ಸುಪ್ರೀಂ ಕೋರ್ಟ್ (ಎಸ್ಸಿ) ನೀಡಿದ ತೀರ್ಪನ್ನು ಮರುಪರಿಶೀಲಿಸಬೇಕೆ ಎಂದು ಕೇಂದ್ರ ಸರ್ಕಾರ ಇನ್ನೂ ನಿರ್ಧರಿಸಿಲ್ಲ ಎಂದು ಅವರು ಹೇಳಿದರು.