ಲಕ್ನೋ: ದೆಹಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ 40 ನೇ ಲೀಗ್ ಪಂದ್ಯದಲ್ಲಿ ಲಕ್ನೋ ಸೂಪರ್ ಗೇಂಟ್ಸ್ ತಂಡವನ್ನು 8 ವಿಕೆಟ್ ಗಳಿಂದ ಸುಲಭವಾಗಿ ಮಣಿಸಿತು.
ಇಲ್ಲಿನ ಭಾರತ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಗೇಂಟ್ಸ್ ತಂಡವು ನಿಗದಿತ 20 ಓವರುಗಳಲ್ಲಿ 6 ವಿಕೆಟ್ ಗೆ 159 ರನ್ ಗಳಿಸಿತು. ಸುಲಭದ ಗೆಲುವಿನ ಗುರಿ ಪಡೆದಿದ್ದ ದೆಹಲಿ ಕ್ಯಾಪಿಟಲ್ಸ್ 17.5 ಓವರುಗಳಲ್ಲಿ ಕೇವಲ 2 ವಿಕೆಟ್ ಗಳನ್ನು ಕಳೆದುಕೊಂಡು 161 ರನ್ ಗಳಿಸಿ ಗೆದ್ದಿತು. ಈ ಗೆಲುವಿನೊಂದಿಗೆ 12 ಅಂಕ ಕಲೆ ಹಾಕಿದ ದೆಹಲಿ ಕ್ಯಾಪಿಟಲ್ಸ್ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಮುಂದುವರೆಯಿತು.
ಸ್ಕೋರ್ ವಿವರ
ಲಕ್ನೋ ಸೂಪರ್ ಗೇಂಟ್ಸ್ 20 ಓವರುಗಳಲ್ಲಿ 6 ವಿಕೆಟ್ ಗೆ 159
ಮಾರ್ಕರ್ಮ 52 ( 33 ಎಸೆತ, 2 ಬೌಂಡರಿ, 3 ಸಿಕ್ಸರ್ ), ಮಿಚೆಲ್ ಮಾರ್ಷ 45 ( 36 ಎಸೆತ, 3 ಬೌಂಡರಿ, 1 ಸಿಕ್ಸರ್)
ಅಯುಷ್ ಬದೋನಿ 36 ( 21 ಎಸೆತ, 6 ಬೌಂಡರಿ) ಮುಖೇಶ ಕುಮಾರ 33 ಕ್ಕೆ 4)
ದೆಹಲಿ ಕ್ಯಾಪಿಟಲ್ಸ್ 17.5 ಓವರುಗಳಲ್ಲಿ 2 ವಿಕೆಟ್ ಗೆ 161
ಪೊರೆಲ್ 51 ( 36 ಎಸೆತ, 5 ಬೌಂಡರಿ, 1 ಸಿಕ್ಸರ್), ಕೆ.ಎಲ್. ರಾಹುಲ್ ಅಜೇಯ 57 ( 47 ಎಸೆತ, 3 ಬೌಂಡರಿ, 3 ಸಿಕ್ಸರ್ )
ಅಕ್ಷರ ಪಟೇಲ್ ಅಜೇಯ 34 ( 20 ಎಸೆತ, 1 ಬೌಂಡರಿ, 4 ಸಿಕ್ಸರ್) ಮಾರ್ಕರ್ಮ 30 ಕ್ಕೆ2)
ಪಂದ್ಯ ಶ್ರೇಷ್ಠ: ಮುಖೇಶ ಕುಮಾರ- 33 ಕ್ಕೆ 4