ಬುಧವಾರ ನಡೆದ ಐಪಿಎಲ್ 2025 ರ 14ನೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಗುಜರಾತ್ ಟೈಟಾನ್ಸ್ 13 ಎಸೆತಗಳು ಬಾಕಿ ಇರುವಾಗಲೇ 8 ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯದ ವೇಳೆ,
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಫೀಲ್ಡೀಂಗ್ ಮಾಡುವಾಗ ಗಾಯಗೊಂಡಾಗ ಅಭಿಮಾನಿಗಳಲ್ಲಿ ಆತಂಕದ ಅಲೆ ಹರಡಿತು.
ಡೀಪ್ ಮಿಡ್-ವಿಕೆಟ್‌ನಲ್ಲಿ ಫೀಲ್ಡೀಂಗ್ ಮಾಡುವಾಗ ವಿರಾಟ್ ಕೊಹ್ಲಿ ಬೆರಳಿಗೆ ಗಾಯವಾಯಿತು. ಗುಜರಾತ್ ಟೈಟಾನ್ಸ್ ಇನ್ನಿಂಗ್ಸ್ನನ 12 ನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿತು.ಗುಜರಾತ್ ಟೈಟಾನ್ಸ್ ತಂಡದ ಇನ್ನಿಂಗ್ಸ್‌ನ 12ನೇ ಓವರ್‌ನಲ್ಲಿ ಕೃನಾಲ್ ಪಾಂಡ್ಯ ಎಸೆತದಲ್ಲಿ ಸಾಯಿ ಸುದರ್ಶನ್ ಬಲವಾಗಿ ಸ್ವೀಪ್ ಮಾಡಿದರು. ವಿರಾಟ್ ಕೊಹ್ಲಿ ಡೀಪ್ ಮಿಡ್-ವಿಕೆಟ್‌ನಲ್ಲಿ ಫೀಲ್ಡೀಂಗ್ ಮಾಡುವಾಗ ಚೆಂಡನ್ನು ತಡೆಯಲು ಪ್ರಯತ್ನಿಸಿದರು. ಆದರೆ ಚೆಂಡು ವಿಚಿತ್ರವಾಗಿ ಜಾರಿ ಅವರ ಬಲಗೈಗೆ ಬಡಿದು ಬೌಂಡರಿಯ ಆಚೆ ಹೋಯಿತು.
ಇದಾದ ನಂತರ, ವಿರಾಟ್ ಕೊಹ್ಲಿ ತಕ್ಷಣ ಮೊಣಕಾಲುಗಳ ಮೇಲೆ ಕುಳಿತು ಗಾಯಗೊಂಡ ಬೆರಳನ್ನು ಹಿಡಿದುಕೊಂಡರು. ಕ್ರೀಡಾಂಗಣದಲ್ಲಿ ಸ್ವಲ್ಪ ಸಮಯದವರೆಗೆ ಮೌನ ಆವರಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೈದ್ಯಕೀಯ ಸಿಬ್ಬಂದಿ ಮೈದಾನಕ್ಕೆ ಬಂದು ವಿರಾಟ್ ಕೊಹ್ಲಿ ಅವರ ಬೆರಳನ್ನು ಪರೀಕ್ಷಿಸಿತು. ವಿರಾಟ್ ಕೊಹ್ಲಿ ನೋವಿನಿಂದ ನರಳುತ್ತಿದ್ದರೂ, ಆಟ ಮುಂದುವರಿಸಲು ಸಾಧ್ಯವಾಯಿತು. ಈ ವೇಳೆ ವಿರಾಟ್ ಕೊಹ್ಲಿ ಮತ್ತೆ ಮತ್ತೆ ಬೆರಳುಗಳನ್ನು ಬಗ್ಗಿಸುತ್ತಿದ್ದರು. ವಿರಾಟ್ ಕೊಹ್ಲಿ ಗಾಯದ ತೀವ್ರತೆ ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಅಭಿಮಾನಿಗಳು ಅವರು ಚೇತರಿಸಿಕೊಳ್ಳುತ್ತಾರೆ ಎಂದು ಆಶಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ಗಾಯವು ಟೂರ್ನಿಯ ಉಳಿದ ಪಂದ್ಯಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ವರದಿಗಳು ಹೇಳಿವೆ. ಆದರೆ ತಂಡದಿಂದ ಯಾವುದೇ ಮಾಹಿತಿ ಹೊರ ಬಂದಿಲ್ಲ.