ಗೋಕಾಕ:ಆಪರೇಷನ್ ಸಿಂದೂರ ಮೂಲಕ ಜಗತ್ತಿಗೆ ಪಾಪಿ ಪಾಕಿಸ್ತಾನದ ಬಗ್ಗೆ ಮಾಹಿತಿ ನೀಡಿದ ಕೊಣ್ಣೂರಿನ ಹೆಮ್ನೆಯ ಸೊಸೆ ಲೆಪ್ಟಿನೆಂಟ್ ಕರ್ನಲ್ ಸೋಫಿಯಾ ಕರೊಶಿ ಯವರ ಪತಿಯ ಕರ್ನಲ್ ತಾಜುದ್ದೀನ ಬಾಗೆವಾಡಿ ಮನೆಯಲ್ಲಿ ಇವತ್ತು ಸಡಗರದ ಸಂಭ್ರಮ, ಮನೆಯ ಮುಂದೆ ಸೋಫಿಯಾ ಮೆಡಮ್ ತುಮ್ ಆಗೆ ಬಡೊ ದೇಶ ತುಮ್ಹಾರೆ ಸಾಥ ಹೈ, ಜೈಕಾರದ ಘೋಷಣೆ.
ಹೌದು ,ಪಾಕಿಸ್ತಾನ ವಿರುದ್ಧ ಭಾರತೀಯ ಸೇನೆ ಏರಸ್ಟ್ರೈಕ್ ಹಿನ್ನೆಲೆ ಪ್ರಥಮವಾಗಿ ಸೇನಾ ಕಾರ್ಯಾಚರಣೆ ಬಗ್ಗೆ ಮಾಹಿತಿಯನ್ನು ದೇಶಕ್ಕೆ ಕೊಟ್ಟಿದ್ದ ಗೋಕಾಕ ತಾಲೂಕಿನ ಕೊಣ್ಣೂರಿನ ಸೊಸೆ ಸೋಫಿಯಾ ಖುರೇಶಿಯಿಂದ ಇವತ್ತು ಕೇವಲ ಗ್ರಾಮಕ್ಕೆ ಅಷ್ಟೆ ಅಲ್ಲ ಕರ್ನಾಟಕಕ್ಕೂ ಕೂಡ ಹೆಮ್ಮೆಯ ವಿಷಯ ಹಾಗೂ ಗೌರವ,

ಕೊಣ್ಣೂರಿನ ಕರ್ನಲ್ ತಾಜುದ್ದೀನ ಗೌಸಸಾಬ ಬಾಗೆವಾಡಿ ಇವರನ್ನು 2015 ರಲ್ಲಿ ಗುಜರಾತಿನ ವಡೊದರಾದಲ್ಲಿ ಮದುವೆಯಾದ ಸೋಫೀಯಾ ಪತಿಯ ಮನೆಗೆ ಬಂದಿದ್ದು ಕೇವಲ ಮೂರು ಬಾರಿ ಮಾತ್ರ,
ನಂತರ ರಂಜಾನಗೆ ಬರಬೇಕಾಗಿದ್ದ ಲೆಪ್ಟಿನೆಂಡ್ ಕರ್ನಲ್ ಸೋಪಿಯಾ ತಾಜುದ್ದೀನ ಕರೋಶಿ ಬೇಸಿಗೆಯಲ್ಲಿ ರಜೆ ಸಿಗದ ಕಾರಣ ಬರಲಿಕ್ಕೆ ಆಗಲಿಲ್ಲ ಎಂದು ಮಾವ ಗೌಸಸಾಬ ಬಾಗೆವಾಡಿ ತಿಳಿಸಿದ್ದಾರೆ.
ಇನ್ನು ಕೊಣ್ಣೂರಿಗಷ್ಟೆ ಅಲ್ಲದೆ ನಾಡಿಗೆ ಕೀರ್ತಿ ತಂದಿರುವ ಸೊಸೆಯ ಬಗ್ಗೆ ಮಾವ ಗೌಸಸಾಬ ಬಾಗೆವಾಡಿ ಇವರು ನಾನು ಟಿವಿಯಲ್ಲಿ ದಾಳಿಯ ಬಗ್ಗೆ ನಮ್ಮ ಸೊಸೆ ಹೇಳುತ್ತಿರುವದನ್ನು ನೋಡಿ ಖುಷಿಯಾಗಿತ್ತು.
ನಮ್ಮ ಸೊಸೆ ತನ್ನ ಸಾಧನೆಯಿಂದ ನಮ್ಮ ಊರು ಕರ್ನಾಟಕದ ಗೌರವ ಹೆಚ್ಚಿಸಿದ್ದಾರೆ, ಅದಕ್ಕಾಗಿ
ದೇಶ ಸಲುವಾಗಿ ದುಡಿಯಿರಿ ಅಂತಾ ಮಕ್ಕಳಿಗೆ ಹೇಳಿದ್ದೆ,ಅದರಂತೆ ಮಕ್ಕಳ ದೇಶ ಸೇವೆ ಸಲ್ಲಿಸುತ್ತಿದ್ದಾರೆ.ಈ ದಾಳಿಯ ನಂತರ ಸೊಸೆ ಜೊತೆಗೆ ಮಾತನಾಡಿಲ್ಲ, ಮಗನ ಜೊತೆಗೆ ಮಾತನಾಡಿದ್ದು ಹಬ್ಬದ ಸಂಭ್ರಮದಂತೆ ಆಗಿದೆ ಎಂದು ತಿಳಿಸಿದ್ದೇನೆ ಎಂದರು.

ಇನ್ನು ನಮ್ಮ ಸೊಸೆಯ ಕಾರಣದಿಂದ ಇವತ್ತು ನಮ್ಮ ಮನೆಗೆ ಸ್ವಾಮೀಜಿಗಳು, ಜನರು ಎಲ್ಲರೂ ನಮಗೆ ಗೌರವ ಸಲ್ಲಿಸುತ್ತಿದ್ದಾರೆ
ಅಷ್ಟೆ ಅಲ್ಲ ಪಾಕಿಸ್ತಾನ ಹೇಡಿಯ ಹಾಗೆ ಹಿಂದಿನಿಂದ ದಾಳಿ ಮಾಡ್ತಿದೆ, ಅವರಿಗೆ ನಮ್ಮ ಸೈನಿಕರು ತಕ್ಕ ಪಾಠ ಕಲಿಸಿದ್ದಾರೆ, ಪಾಕಿಸ್ತಾನದವರಂತ ಮೂರ್ಖರು ಯಾರು ಇಲ್ಲ,
ಸೊಸೆ ಮಗ ಮನೆಗೆ ಬಂದಾಗ ಬಹಳ ಫ್ರೀ ಇರ್ತಾರೆ, ಲವಲವಿಕೆಯಿಂದ ಇರ್ತಾರೆ ಸೊಸೆಗೆ ಜವಾರಿ (ನಾಟಿ) ಕೋಳಿ, ರೊಟ್ಟಿ, ಕಬ್ಬು ಅಂದರೆ ಬಹಳ ಇಷ್ಟ ಎಂದು ಹೇಳಿ ನಿಮ್ಮೂರು ಚಲೋ ಐತಿ, ನಮ್ದು ಗೋದಿ ನಾಡು, ನಿಮ್ಮೂರು ನಾಚುರಲ್ ಇದೆ ಅಂತಾ ಸೊಸೆ ಹೇಳ್ತಾಳೆ ಎಂದರು.
ನನಗೆ ಮೂರು ಗಂಡು ಮಕ್ಕಳು, ಅದರಲ್ಲಿ ಓರ್ವ ಮಗ ಅಗ್ನಿಶಾಮಕದಲ್ಲಿ ಸೇವೆ ಸಲ್ಲಿಸುತ್ತಾನೆ, ಕೊಣ್ಣೂರನಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಮಾಡಿದ್ದಾರೆ ನಂತರ ಕಮಾಂಡ್ ಟ್ರೇನಿಂಗ್ ನಲ್ಲಿ ಫಾಸ್ ಆಗಿದ್ದಾರೆ, ಇಬ್ಬರು ಕರ್ನಲ್ ಆಗಿ ಸೇವೆ ಸಲ್ಲಿಸುತಿದ್ದಾರೆ,ವರ್ಷದಲ್ಲಿ ನಾನು ಎರಡು ಸಲ ಮಗನ ಹತ್ತಿರ ಹೋಗುತ್ತೇನೆ ಎಂದರು.
ಈ ಸುದ್ದಿ ಹರಡುತಿದ್ದಂತೆ ಸೊಪಿಯಾ ಕರೋಸಿ ಅವರ ಮಾವನ ಮುಂದೆ ಪಟಾಕಿ ಹಚ್ಚಿ ಸಂಭ್ರಮಿಸಿದರು. ಮನೆಗೆ ಬಂದು ಸಾರ್ವಜನಿಕರು ಗೌಸಸಾಬ ಇವರಿಗೆ ಕೈ ಕುಲಿಕಿ ಅಂತಹ ಸೊಸೆಯನ್ನ ಪಡೆದಿದ್ದಕ್ಕೆ ಧನ್ಯವಾದದ ಜೊತೆಯಲ್ಲಿ ಅಭಿನಂದನೆಗಳನ್ನು ಸಲ್ಲಿಸಿದರು.
ವರದಿ :ಮನೋಹರ ಮೇಗೇರಿ




