Ad imageAd image

ರಾಜ್ಯಾಧ್ಯಕ್ಷರಾಗಿ ಯಾವುದೇ ಬದಲಾವಣೆ ಇಲ್ಲ : ಆರ್ ಅಶೋಕ್ 

Bharath Vaibhav
ರಾಜ್ಯಾಧ್ಯಕ್ಷರಾಗಿ ಯಾವುದೇ ಬದಲಾವಣೆ ಇಲ್ಲ : ಆರ್ ಅಶೋಕ್ 
R ASHOK
WhatsApp Group Join Now
Telegram Group Join Now

ನವದೆಹಲಿ : ಕಳೆದ ಕೆಲವು ದಿನಗಳಿಂದ ರಾಜ್ಯ ಬಿಜೆಪಿಯಲ್ಲಿ ಹಲವು ಆಂತರಿಕ ಬದಲಾವಣೆಗಳು ಆಗುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೂತನ ಅಧ್ಯಕ್ಷರ ನೇಮಕ ಮಾಡಲಾಗುತ್ತಿದೆ ಎಂದು ಸುದ್ದಿ ಹರಿದಾಡುತ್ತಿದೆ. ಅಲ್ಲದೆ ಇತ್ತ ರೆಬೆಲ್ ನಾಯಕರು ಸಾಲು ಸಾಲು ಸಭೆ ಮಾಡುತ್ತಿದ್ದಾರೆ.

ಇದರ ಮಧ್ಯ ವಿಪಕ್ಷ ನಾಯಕ ಆರ್ ಅಶೋಕ್ ದೆಹಲಿಗೆ ತೆರಳಿದ್ದು ಹೈಕಮಾಂಡ್ ಅವರನ್ನು ಭೇಟಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ನವದೆಹಲಿಯಲ್ಲಿ ಹೈಕಮಾಂಡ್ ಅವರನ್ನು ಭೇಟಿಯಾದ ಬಳಿಕ ಆರ್ ಅಶೋಕ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಇಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಕುರಿತಂತೆ ಯಾವುದೇ ರೀತಿಯಾಗಿ ಚರ್ಚೆ ನಡೆದಿಲ್ಲ. ಯಾವುದೇ ಬದಲಾವಣೆ ಸಹ ಇಲ್ಲ. ರಾಜ್ಯಾಧ್ಯಕ್ಷರ ಬದಲಾವಣೆ ಮಾಧ್ಯಮದಲ್ಲಿ ಬರುತ್ತಿದೆ ಅಷ್ಟೇ. ಆದರೆ ಇಲ್ಲಿ ಯಾವುದೇ ರೀತಿಯ ಬದಲಾವಣೆಯ ಚರ್ಚೆ ನಡೆದೇ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ನಮಗೆ ಏನಿದ್ದರೂ ಕೇಂದ್ರದ ನಾಯಕರ ನಿರ್ಧಾರವೇ ಅಂತಿಮವಾಗಿದೆ ಕೇವಲ ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿ ಎಲ್ಲ ರಾಜ್ಯಗಳ ಅಧ್ಯಕ್ಷರ ನೇಮಕ ಆಗುತ್ತಿದ್ದು ವಿಜಯೇಂದ್ರ ಅವರ ವಿರುದ್ಧ ಕಂಪ್ಲೇಂಟ್ ಕೊಡಲು ಯಾವುದೇ ರೀತಿಯ ಅವಕಾಶ ಇಲ್ಲ. ಏನೇ ಮಾಡಬೇಕೆಂದರೂ ಕೇಂದ್ರದ ನಾಯಕರು ನಿರ್ಧರಿಸುತ್ತಾರೆ.

ನನಗೆ ಮೂರು ತಿಂಗಳಿಗೆ ಒಂದು ಸಾರಿ ಬಂದು ವರದಿ ಕೊಡೋದಕ್ಕೆ ತಿಳಿದರೆ ನಾನು ಅದಷ್ಟೇ ಮಾಡುತ್ತೇನೆ ಉಳಿದ ವಿಷಯ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!