ನಿಪ್ಪಾಣಿ : ಗಣೇಶ ಹಬ್ಬ ಬಂದಾಕ್ಷಣ ಯುವಕರಲ್ಲಿ ಎಲ್ಲಿಲ್ಲದ ಉತ್ಸಾಹ ಡಿಜೆ ಸೌಂಡ ಜೊತೆಗೆ ಕುನಿದು ಕುಪ್ಪಳಿಸುವ ಹಂಬಲ ಆದರೆ ಕಳೆದ ಮೂರು ದಶಕಗಳಿಂದ ಡಾಲ್ಬಿ ಶಬ್ದ ಇಲ್ಲಿ ಸ್ತಬ್ಧ ಚಿಕ್ಕ ಮಕ್ಕಳು,ವೃದ್ದರು, ಗರ್ಭಿಣಿಯರು, ಹಾಗೂ ಬಾಣಂತಿಯರಿಗೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ಚಿಕ್ಕೋಡಿ ತಾಲೂಕಿನ ಧರ್ಮ ನಗರ ಶಮನೇವಾಡಿಯ ಜೈ ಹಿಂದ್ ಗಣೇಶ ಮಂಡಳ ಕಾರ್ಯಕರ್ತರು ಶಾಂತಿ ಸೌಹಾರ್ದತೆ ಕಾಯ್ದುಕೊಂಡು ಸಂಪೂರ್ಣ ಗಣೇಶನ ಭಕ್ತಿ ಗೀತೆ ಪೂಜೆಯೊಂದಿಗೆ ನೈವೇದ್ಯ ಅರ್ಪಿಸಿ ಕೊನೆಯ ದಿನ ಪ್ರಸಾದ ದೊಂದಿಗೆ ವಿದಾಯ ಹೇಳುವ ಜೈ ಹಿಂದ್ ಗಣೇಶ ಮಂಡಳ, ಹಾಗೂ ಕಲ್ಪವ್ರಕ್ಷ ಗಣೇಶ ಯುವಕ ಮಂಡಳ, ಗಡಿಭಾಗ ದಲ್ಲಿಯೇ ತಮ್ಮ ಆದರ್ಶತೆ ಯನ್ನು ಕಾಯ್ದುಕೊಂಡು ಬಂದಿವೆ.
ಹಾಗಾದರೆ ಬನ್ನಿ ಶುಕ್ರವಾರ ಶಮಣೆವಾಡಿ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದ ಸಭಾ ಗ್ರಹದಲ್ಲಿ ಜೈ ಹಿಂದ್ ಗಣೇಶ ಮಂಡಳದ ವತಿಯಿಂದ ಹಾಗೂ ಗಾಂಧಿ ಚೌಕ್ ಕಲ್ಪವೃಕ್ಷ ಗಣೇಶ ಯುವಕ ಮಂಡಳದ ವತಿಯಿಂದ ಅತ್ಯಂತ ಶಿಸ್ತು ಬದ್ದ, ಸರದಿಯಲ್ಲಿ ಬರೋಬ್ಬರಿ 5000 ಭಕ್ತರು ಮಹಾಪ್ರಸಾದ ಸ್ವೀಕರಿಸಿದರು. ವೀಕ್ಷಕರೆ ನೀವೂ ನೋಡಿ….ಶಿಸ್ತು, ಸಂಯಮ, ಭಕ್ತಿ ಪೂರ್ವಕ, ಗಣೇಶನನ್ನು ವಿಸರ್ಜಿಸಿ ಸಮಾಜಕ್ಕೆ, ಯುವ ಜನಾಂಗಕ್ಕೆ, ಮಾದರಿಯಾಗಿ!!
ವರದಿ : ಮಹಾವೀರ ಚಿಂಚಣೆ




