ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಯಾವುದೇ ಜಗಳ ಕಲಹ ಇಲ್ಲದೆ, “ನೋ ಸೌಂಡ್ ನೋ ಅವಾಜ್” ಶಾಂತಿಯುತವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ.
ಅಧ್ಯಕ್ಷ ಸ್ಥಾನ (ಎಸ್ಸಿ) ಹಾಗೂ ಉಪಾಧ್ಯಕ್ಷ ಸ್ಥಾನ (ಹಿಂದುಳಿದ ಅ ವರ್ಗಕ್ಕೆ) ಮೀಸಲಾತಿ ಪ್ರಕಟವಾಗಿತ್ತು. ಮೀಸಲಾತಿ ಕೋಟಾದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಏಕೈಕ ಮಹಿಳೆ “ಜಂಬಕ್ಕ ಲಕ್ಷ್ಮಣ್ ವಿಭೂತಿ(ದೇಸಾಯಿ)”, ಉಪಾಧ್ಯಕ್ಷರ “ಗೌರಮ್ಮ ನಾರಾಯಣ ಹುಗ್ಗಿ” ಆಯ್ಕೆಯಾಗಿದ್ದಾರೆ. ಒಟ್ಟು 16 ಸದಸ್ಯ ಬಲದ ಪ.ಪಂನಲ್ಲಿ 9 ಕಾಂಗ್ರೆಸ್,
6 ಬಿಜೆಪಿ ಹಾಗೂ ಓರ್ವ ಪಕ್ಷೇತರ ಮಹಿಳಾ ಸದಸ್ಯೆ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿಯ ಎದುರುಗಡೆ ಎಲ್ಲ ಸದಸ್ಯರು ಊರಗಣ್ಯರು ವಿವಿಧ ಸಂಘಟನೆಯವರು ಪಟಾಕಿಯನ್ನು ಸಿಡಿಸುವುದರ ಮೂಲಕ ಸಿಹಿ ಹಂಚಿ ಸಂಭ್ರಮಿಸಿದರು.
ವರದಿ :ಅಲಿ ಮಕಾನದಾರ.