Ad imageAd image

ಜಿಲ್ಲೆಯ ಪರಿಶಿಷ್ಟರ ಬೀದಿಗಳಲ್ಲಿ ನಿಲ್ಲದ ಅಕ್ರಮ ಮದ್ಯ ಮಾರಾಟ..

Bharath Vaibhav
ಜಿಲ್ಲೆಯ ಪರಿಶಿಷ್ಟರ ಬೀದಿಗಳಲ್ಲಿ ನಿಲ್ಲದ ಅಕ್ರಮ ಮದ್ಯ ಮಾರಾಟ..
WhatsApp Group Join Now
Telegram Group Join Now

ಚಾಮರಾಜನಗರ : -ಜಿಲ್ಲೆಯ ಪರಿಶಿಷ್ಟರ ಬೀದಿಗಳಲ್ಲಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುವುದು ನಿಂತಿಲ್ಲ. ಒಂದು ತಿಂಗಳ ಹಿಂದೆಯೂ ಇದೇ ದೂರು ನೀಡಿದ್ದರೂ ನಿಯಂತ್ರಣಕ್ಕೆ ಬಂದಿಲ್ಲ ಎಂದು ಪರಿಶಿಷ್ಟ ಮುಖಂಡರು ದೂರಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಸ್ಪಿ ಡಾ.ಬಿ.ಟಿ.ಕವಿತಾ ಅವರ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮುಖಂಡರ ಕುಂದುಕೊರತೆ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಯಿತು.

ಅಗರ-ಮಾಂಬಳ್ಳಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಈಗಲೂ ಮದ್ಯದ ಅಕ್ರಮ ಮಾರಾಟ ನಡೆಯುತ್ತಿದೆ. ಈ ಕುರಿತು ದೂರು ನೀಡುತ್ತಾ ಬಂದರೂ ಪ್ರಯೋಜನವಾಗಿಲ್ಲ. ಈ ಸಭೆಗೆ ಅಬಕಾರಿ ಅಧಿಕಾರಿಗಳನ್ನು ಕರೆಸಬೇಕೆಂದು ಮನವಿ ಮಾಡಲಾಗಿತ್ತು. ಆದರೆ, ಏಕೆ ಹಾಜರಾಗಿಲ್ಲ ಎಂದು ಮುಖಂಡ ರಾಜೇಶ್ ಹಾಗೂ ಇತರರು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಾ.ಬಿ.ಟಿ.ಕವಿತಾ ಅವರು, ಕಳೆದ ಸಭೆಯಲ್ಲಿ ಮುಖಂಡರು ನೀಡಿದ ದೂರಿನಂತೆ ಹಲವು ಕಡೆ ಪೊಲೀಸರು ದಾಳಿ ಮಾಡಿ 28 ಮದ್ಯದ ಅಕ್ರಮ ಪ್ರಕರಣ ಗಳನ್ನು ಪತ್ತೆ ಹಚ್ಚಿ ದೂರು ದಾಖಲಿಸಿದ್ದಾರೆ. ಮದ್ಯ ಪೂರೈಸುತ್ತಿದ್ದಾರೆ ಎಂಬ ದೂರು ಆಧರಿಸಿ 6 ಮದ್ಯದ ಅಂಗಡಿಗಳ ಮೇಲೆ ಪ್ರಕರಣ ದಾಖಲಿಸಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದರು.

ತಾಪಂ ಮಾಜಿ ಸದಸ್ಯ ಆ‌ರ್.ಮಹದೇವ ಮಾತನಾಡಿ, ಹಿಂದಿನಂತೆ ಪೊಲೀಸ್ ಇಲಾಖೆಯಿಂದ ಗ್ರಾಮಸಭೆ ನಡೆಸುತ್ತಿಲ್ಲ. ಇದನ್ನು ಪುನಾರಂಭಿಸಬೇಕು. ಜಿಲ್ಲೆಯಲ್ಲಿ ಎಷ್ಟುದಲಿತರ ಮೇಲಿನ ದೌರ್ಜನ್ಯ ನಡೆದಿವೆ. ಎಷ್ಟು ಪರಿಹಾರ ನೀಡಲಾಗಿದೆ, ನ್ಯಾಯಾಲಯದಲ್ಲಿ ಎಷ್ಟು ಪ್ರಕರಣಗಳಿವೆ, ಎಷ್ಟು ಅಂತರ್ಜಾತಿ ವಿವಾಹಗಳಾಗಿವೆ, ಅವುಗಳಲ್ಲಿ ಪರಿಹಾರ ನೀಡಲಾಗಿದೆಯೇ ಎಂಬುದರ ಮಾಹಿತಿ ನೀಡುವಂತೆ ಮನವಿ ಮಾಡಿದರು.

ವರದಿ : ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!