Ad imageAd image

ನೂಡಲ್ಸ್ ಪ್ರಿಯರೇ.. ಬ್ಯಾಕ್ಟಿರೀಯಾಗಳಿರುತ್ತವೆ ಎಚ್ಚರ.!

Bharath Vaibhav
ನೂಡಲ್ಸ್ ಪ್ರಿಯರೇ.. ಬ್ಯಾಕ್ಟಿರೀಯಾಗಳಿರುತ್ತವೆ ಎಚ್ಚರ.!
WhatsApp Group Join Now
Telegram Group Join Now

ಬ್ಯಾಚುಲರ್ಸ್‌ಗಳ ಫೇವರಿಟ್‌. ಕೆಲವೇ ನಿಮಿಷದಲ್ಲಿ ತಯಾರಾಗುವ ನೂಡಲ್ಸ್‌ನಿಂದ ಸಾಕಷ್ಟು ಆರೋಗ್ಯದ ಅಪಾಯಗಳಿವೆ.

ಹಸಿದಾಗ ಸುಲಭದಲ್ಲಿ ತಕ್ಷಣಕ್ಕೆ ಮಾಡಿಕೊಳ್ಳಲು ಸಾಧ್ಯವಾಗುವ ಆಹಾರವೆಂದರೆ ನೂಡಲ್ಸ್‌. ಅದರಲ್ಲೂ ಬ್ಯಾಚುಲರ್ಸ್‌ಗಳಿಗೆ ಅತ್ಯಂತ ಇಷ್ಟಕರ. ನೂಡಲ್ಸ್‌ನಿಂದ ಸಾಕಷ್ಟು ಆರೋಗ್ಯದ ಅಪಾಯಗಳಿವೆ ಎಂದು ನಿಮಗೆ ತಿಳಿದಿದೆಯಾ. ಇತ್ತೀಚಿಗೆ ಮೈಕ್ರೋಸ್ಕೋಪಿಕ್‌ ಟೆಸ್ಟ್‌ ಮೂಲಕ ನೂಡಲ್ಸ್‌ನಲ್ಲಿ ಸೂಕ್ಷ್ಮ ಜೀವಿಗಳು ಕಂಡುಬಂದ ವಿಡಿಯೋ ವೈರಲ್ ಆಗುತ್ತಿದೆ.

ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಸೈಟ್‌ @cooltechtipz ಎಂಬ ಖಾತೆಯೊಂದರಲ್ಲಿ ಹಂಚಿಕೊಳ್ಳಲಾಗಿದೆ. ಸೂಕ್ಷ್ಮದರ್ಶಕದಲ್ಲಿ ನೂಡಲ್ಸ್‌ ಸೆಟ್‌ನ್ನು ಇರಿಸಿ, ನಂತರ ಮೈಕ್ರೋಸ್ಕೋಪ್‌ನಲ್ಲಿ ಝೂಮ್ ಮಾಡಿ ನೋಡಿದಾದ ಸೂಕ್ಷ್ಮ ಜೀವಿ ಕಾಣುತ್ತದೆ.

ಸಂಶೋಧಕರು ಮೈಕ್ರೋಸ್ಕೋಪಿಕ್ ಜೂಮ್ ಅಡಿಯಲ್ಲಿ ಟ್ವೀಜರ್ ಅನ್ನು ಇರಿಸುತ್ತಾರೆ. ಆ ಸೂಕ್ಷ್ಮ ಜೀವಿ ಲೋಹದ ಉಪಕರಣಕ್ಕೆ ಅಂಟಿಕೊಂಡಿರುತ್ತದೆ.

ನೆಟ್ಟಿಗರು ಈ ಪೋಸ್ಟ್‌ಗೆ ಅನೇಕ ರೀತಿಯ ಕಾಮೆಂಟ್ ಮಾಡಿದ್ದಾರೆ. ಕೆಲವರು ಈ ಬ್ಯಾಕ್ಟಿರೀಯಾಗಳನ್ನು ಕೊಲ್ಲಲು ಪರಿಹಾರಗಳನ್ನು ಹೇಳಿದರೆ, ಇನ್ನೂ ಕೆಲವರು ಈ ಬ್ಯಾಕ್ಟಿರೀಯಾಗಳು ಬೇಯಿಸಿದ ನಂತರ ಸಾಯುತ್ತವೆ. ಹಣ್ಣುಗಳು ಮತ್ತು ತರಕಾರಿಗಳಲ್ಲಿಯೂ ಇದು ಕಂಡು ಬರುತ್ತದೆ ಎಂದಿದ್ದಾರೆ.

ಅಡುಗೆಯು ಬಹಳಷ್ಟು ಸೂಕ್ಷ್ಮಜೀವಿಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ ಎಂದು ಹೀಗೆ ಕೆಲವು ವಿಭಿನ್ನ ಕಮೆಂಟ್ ಗಳು ಬಂದಿವೆ.

https://x.com/cooltechtipz/status/1793118692462772730

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!