ಚಿಕ್ಕಬಳ್ಳಾಪುರ: ತಾಲ್ಲೂಕಿನಲ್ಲಿ ಇಂದು ಯಶ್ವಂತ್ ಅಕಾಡೆಮಿ ಆಫ್ ಕಲ್ಚರಲ್ ಫಿಲಂ ಸೈನ್ಸಸ್ ಅಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ (ರಿ ) ವತಿಯಿಂದ ಇನಮಿಂಚೇಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ಸ್ ಪುಸ್ತಕ ಹಾಗೂ ಪರಿಕರಗಳ ವಿತರಣೆ ಹಾಗೂ ಇದೇ ಶಾಲೆಯ ಪೋಷಕರಿಗೆ ಮತ್ತು (ವಯೋವೃದ್ಧಲಗೆ ) ಬೆಡ್ ಶೀಟ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು,
ಈ ಸಂದರ್ಭದಲ್ಲಿ ಉಮೇಶ್ ರವರು ಮಕ್ಕಳು ಒಳ್ಳೆಯ ವಿದ್ಯಾವಂತರಾಗ ಬೇಕು ಹಾಗೂ ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಬೇಕು, ಉತ್ತಮ ಪ್ರಜೆಯಾಗಿ ಬಾಳಬೇಕು, ನಾವು ಯಾರಿಗೆ ಅಗಲಿ ತೊಂದರೆ ಉಂಟುಮಾಡಬಾರದು, ಎಂದು ವಿದ್ಯಾರ್ಥಿಗಳಿಗೆ ಒಳ್ಳೆಯ ರೀತಿಯಲ್ಲಿ ಓದಿ ಪ್ರತಿಭಾವಂತರಗಬೇಕು, ನಾವು ಗುರುಗಳಿಗೆ ತಂದೆ -ತಾಯಿಗೆ ಗೌರವಿಸಬೇಕು ಎಂದು ವಿದ್ಯಾರ್ಥಿಗಳಲ್ಲಿ ಹಿತ -ನುಡಿಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಮುರಳಿ ರಾಜ್ಯ ಕಾರ್ಯಧ್ಯಕ್ಷರು ಪ್ರಜಾ ವಿಮೋಚನಾ ಚಳುವಳಿ, ರಾಜ್ಯ ಮುಖಂಡರು ತಿಪ್ಪೆನಹಳ್ಳಿ ನಾರಾಯಣ ಸ್ವಾಮಿ ಕರ್ನಾಟಕ ರಕ್ಷಣಾ ಸಮಿತಿ, ಉಪನ್ಯಾಸಕರು ಹಾಗೂ ವರ್ಣ ಸೇವಾ ಅಧ್ಯಕ್ಷರು ಉಮೇಶ್ ರವರು, ಯಶವಂತ್ ಅಕಾಡೆಮಿ ಸಂಸ್ಥೆ ಅಧ್ಯಕ್ಷರು ಮಂಚಣಬಲೆ ಡಾನ್ಸ್ ಶ್ರೀನಿವಾಸ್, ವಕೀಲರು ನರಸಿಂಹಮೂರ್ತಿ ಶ್ರೀರಾಂಪುರ, ವೆಂಕಟೇಶಪ್ಪ ಮುಖ್ಯ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇನಮಿಂಚೇನಹಳ್ಳಿ, ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು..
ವರದಿ :ಯಾರಬ್. ಎಂ.




