Ad imageAd image

ಉತ್ತರ ಕರ್ನಾಟಕ ಮ್ಯಾಕ್ಸಿ ಕ್ಯಾಬ್,ಮೋಟಾರ್ ಕ್ಯಾಬ್ ಚಾಲಕರ.ಮಾಲೀಕರ ಒಕ್ಕೂಟ ಜಿಲ್ಲಾಧಿಕಾರಿಗಳಿಗೆ ಮನವಿ.

Bharath Vaibhav
ಉತ್ತರ ಕರ್ನಾಟಕ ಮ್ಯಾಕ್ಸಿ ಕ್ಯಾಬ್,ಮೋಟಾರ್ ಕ್ಯಾಬ್ ಚಾಲಕರ.ಮಾಲೀಕರ ಒಕ್ಕೂಟ ಜಿಲ್ಲಾಧಿಕಾರಿಗಳಿಗೆ ಮನವಿ.
WhatsApp Group Join Now
Telegram Group Join Now

ಧಾರವಾಡ :-ಕೇಂದ್ರ ಸಾರಿಗೆ ಇಲಾಖೆ ಆದೇಶದಂತೆ ರಾಜ್ಯ ಸರ್ಕಾರ ಸಾರಿಗೆ ಇಲಾಖೆಯು ನೀಡಿರುವ ಮ್ಯಾಕ್ಸಿ ಕ್ಯಾಬ್ ಮತ್ತು ಮೋಟಾರ್ ಕ್ಯಾಬ್ ವಾಣಿಜ್ಯ ವಾಹನಗಳಿಗೆ ಫ್ಯಾನಿಕ್ ಬಟನ್ ಜಿಪಿಎಸ್ ಎಂಬ ಅವೈಜ್ಞಾನಿಕ ಸಾಧನೆಗಳನ್ನು ಅಳವಡಿಸುವ ಆದೇಶ ನೀಡಿರುವುದು ತುಂಬಾ ದುಷ್ಟವಾದದ್ದು.

ರಾಜ್ಯದ ಎಲ್ಲಾ ಮ್ಯಾಕ್ಸಿ ಕ್ಯಾಬ್ ಮತ್ತು ಮೋಟಾರ್ ಕ್ಯಾಬ್ ವಾಣಿಜ್ಯ ವಾಹನಗಳ ಚಾಲಕ ಮಾಲೀಕರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.ಇದರಿಂದ ರಾಜ್ಯದ ಎಲ್ಲಾ ಮ್ಯಾಕ್ಸಿಕ್ಯಾಬ್ ಮತ್ತು ಮೋಟಾರ್ ಕ್ಯಾಬ್ ಚಾಲಕ ಮಾಲೀಕರು ತುಂಬಾ ಅಸಹಾಯಕರವಾಗಿದ್ದಾರೆ.

ಇದಕ್ಕೆ ಅಳವಡಿಸಿದ ಕೇಂದ್ರ ಸರಕಾರದ ಹಣ ತೆಗೆದುಕೊಳ್ಳಲಾಗದೆ ರಾಜ್ಯ ಸರ್ಕಾರದಲ್ಲಿ ಆಯ್ಕೆಯಾದ ಕಂಪನಿಗಳು ಹೆಚ್ಚಿಗೆ ಹಣ ವಸೂಲಿ ಮೂಲಕ ತೆಗೆದುಕೊಳ್ಳುತ್ತಿದ್ದಾರೆ.ಈ ರೀತಿ ರಾಜ್ಯ ಸರ್ಕಾರ ಬೇಕಾದ ಕಂಪನಿಗಳಿಗೆ ಲೈಸೆನ್ಸ್ ನೀಡಿ ಅವರು ಹೆಚ್ಚಿಗೆ ಹಣ ತೆಗೆದುಕೊಳ್ಳುವುದರಿಂದ ಎಸ್ಟೋ ವಾಹನ ಚಾಲಕರು ಆತ್ಮಹತ್ಯೆ ಮಾಡಿಕೊಳ್ಳಲು ಶರಣಾಗುತ್ತಿರುವುದು ಕಾರಣ ಬಯಸಿದೆ.

ಆದ್ದರಿಂದ ಈ ಕೂಡಲೇ ಕೇಂದ್ರ ಸರ್ಕಾರ ಒದಗಿಸಿದ ಮೊತ್ತವನ್ನು ರಾಜ್ಯ ಸರ್ಕಾರವು ಅನುಮೋದಸುವಂತೆ ರಾಜ್ಯ ಸರ್ಕಾರದ ಮಾನ್ಯ ಶ್ರೀ ರಾಮಲಿಂಗಾರೆಡ್ಡಿ ಸಾರಿಗೆ ಸಚಿವರು ಕರ್ನಾಟಕ ಸರ್ಕಾರ ಇವರಿಗೆ ಉತ್ತರ ಕರ್ನಾಟಕ ಮ್ಯಾಕ್ಸಿ ಕ್ಯಾಬ್ ಮತ್ತು ಮೋಟರ್ ಕ್ಯಾಬ್ ಹಾಗೂ ಚಾಲಕರ ಒಕ್ಕೂಟದಿಂದ ಧಾರವಾಡ ಜಿಲ್ಲಾಧಿಕಾರಿಗಳ ಮೂಲಕ ಮನವಿ ಮಾಡಿದರು.ಸಂಧರ್ಭದಲ್ಲಿ 500 ಕ್ಕೂ ಹೆಚ್ಚು ಉತ್ತರ ಕರ್ನಾಟಕ ಮ್ಯಾಕ್ಸಿ ಕ್ಯಾಬ್ ಹಾಗೂ ಮೋಟಾರ್ ಕ್ಯಾಬ್ ಮಾಲೀಕರು ಮತ್ತು ಚಾಲಕರು ಭಾಗವಹಿಸಿದ್ದರು.

ವರದಿ:-ವಿನಾಯಕ ಗುಡ್ಡದಕೇರಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!