Ad imageAd image

ರಾಯಬಾಗ ಠಾಣೆಗೆ ಉತ್ತರ ವಲಯ ಐಜಿಪಿ ಧಿಡಿರ್ ಭೇಟಿ

Bharath Vaibhav
ರಾಯಬಾಗ ಠಾಣೆಗೆ ಉತ್ತರ ವಲಯ ಐಜಿಪಿ ಧಿಡಿರ್ ಭೇಟಿ
WhatsApp Group Join Now
Telegram Group Join Now

ರಾಯಬಾಗ:ಬೆಳಗಾವಿ ಜಿಲ್ಲೆಯ ರಾಯಬಾಗ ಪೊಲೀಸ್ ಠಾಣೆಗೆ ಉತ್ತರ ವಲಯ ಐಜಿಪಿ ಚೇತನಸಿಂಗ್ ರಾಠೋರ ಅವರು ಅಚ್ಚರಿ ಪರಿಶೀಲನಾ ಭೇಟಿ ನೀಡಿದರು.

ಸುಮಾರು ಮೂರು ಗಂಟೆಗಳ ಕಾಲ ಪೊಲೀಸ್ ಠಾಣೆಯ ವಿವಿಧ ವಿಭಾಗಗಳನ್ನು ಪರಿಶೀಲಿಸಿದ ಐಜಿಪಿ, ದಾಖಲೆಗಳು, ಪ್ರಕರಣಗಳ ಪ್ರಗತಿ, ಸಿಬ್ಬಂದಿಗಳ ಕಾರ್ಯಪದ್ಧತಿ ಸೇರಿದಂತೆ ಹಲವು ವಿಚಾರಗಳನ್ನು ವಿಮರ್ಶಿಸಿದರು.

ಭೇಟಿಯ ಸಂದರ್ಭದಲ್ಲಿ ಠಾಣೆಯ ಕಾರ್ಯವೈಖರಿ, ಕಾನೂನು ಸುವ್ಯವಸ್ಥೆಯ ಪರಿಸ್ಥಿತಿ ಹಾಗೂ ಸಾರ್ವಜನಿಕ ಸೇವೆಯ ಗುಣಮಟ್ಟ ಕುರಿತು ಅಧಿಕಾರಿಗಳೊಂದಿಗೆ ಐಜಿಪಿ ಚರ್ಚೆ ನಡೆಸಿದರು.

ಠಾಣೆಯ ಶಿಷ್ಟಾಚಾರ, ಶಿಸ್ತು ಮತ್ತು ಸೌಕರ್ಯಗಳ ಕುರಿತು ಮಾರ್ಗದರ್ಶನ ನೀಡಿದ ಅವರು, ಉತ್ತಮ ಪೊಲೀಸ್ ಸೇವೆ ನೀಡುವಂತೆ ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದಾರೆ.

ಹಲವು ಕಡತಗಳನ್ನ ಪರಿಶೀಲನೆ ಮಾಡಿರುವ ಅವರು ಹಳೆಯ ವಾಹನ, ಗಡಿಯಲ್ಲಿ ಕಳುವು, ಕ್ರೈಮ್ ವಿಚಾರ ಹಾಗೂ ಅಕ್ರಮ ವಹಿವಾಟುಗಳ ಮೇಲೆ ಹದ್ದಿನ ಕಣ್ಣು ಇಡಲು ಸೂಚನೆ ನೀಡಿದ್ದಾರೆ.
ವರದಿ : ಭರತ ಮೂರಗುಂಡೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!