ಪೊಲೀಸ್ ಇನ್ಸ್ಪೆಕ್ಟರ್ ಹೊಸಕೇರಪ್ಪ ಕೆ ನೇತೃತ್ವದಲ್ಲಿ ನಡೆದ ಸಭೆ
ಲಿಂಗಸ್ಗೂರು : ಹಟ್ಟಿ ಚಿನ್ನದ ಗಣಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಹೊಸಕೇರಪ್ಪ ಕೆ ಇವರ ನೇತೃತ್ವದ ಇಂದು ಹಟ್ಟಿ ಪಟ್ಟಣದ ಎಲ್ಲಾ ಅಂಗಡಿ ಮಾಲೀಕರನ್ನು ಕರೆಸಿ ಅವರ ಜೊತೆ ಸಿ ಸಿ ಕ್ಯಾಮೆರಾ ಅಳವಡಿಕೆ ಬಗ್ಗೆ ಚರ್ಚೆ ಮಾಡಲಾಯಿತು.
ಹಟ್ಟಿ ಚಿನ್ನದ ಗಣಿ ಪಟ್ಟಣದಲ್ಲಿ ದರುಡೆ ಪ್ರಕರಣ ಮತ್ತು ಅನುಮಾನಾಸ್ಪದ ವ್ಯಕ್ತಿಗಳಿದ ಸುರಕ್ಷತೆಗೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ಅಂಗಡಿ ಮಾಲೀಕರ ಜವಾಬ್ದಾರಿ ಹೆಚ್ಚಾಗಿದ್ದು ದರುಡೆಕೋರರು ತಮ್ಮ ಅಂಗಡಿಗಳನ್ನು ದರೋಡೆ ಮಾಡುವುದನ್ನು ತಪ್ಪಿಸುವುದಕ್ಕಾಗಿ ಮತ್ತು ಪಟ್ಟಣದಲ್ಲಿ ಅನುಮಾನಾಸ್ಪದ ವ್ಯಕ್ತಿಗಳಿಂದ ಸುರಕ್ಷತೆಗಾಗಿ, ಹಟ್ಟಿ ಚಿನ್ನದ ಗಣಿ ಪಟ್ಟಣದಲ್ಲಿ ಎಲ್ಲಾ ಸಮಾಜದ ಎಲ್ಲಾ ಧರ್ಮದ ಜನರು ವಾಸ ಮಾಡುವುದರಿಂದ ಮತ್ತು ಈ ದಿನದ ಪರಿಸ್ಥಿತಿ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಪ್ರಾರಂಭವಾಗಿದ್ದು ಪರಿಸ್ಥಿತಿ ಗಂಭೀರವಾಗಿದೆ.
ಆದರಿಂದ ಹಟ್ಟಿ ಪಟ್ಟಣದ ಎಲ್ಲಾ ಅಂಗಡಿ ಮಾಲೀಕರಿಗೆ ಕಡ್ಡಾಯವಾಗಿ ತಮ್ಮ ಅಂಗಡಿಯ ಮುಂಭಾಗದಲ್ಲಿ ರಸ್ತೆಯ ಮಾರ್ಗಕ್ಕೆ ಸಿ ಸಿ ಕ್ಯಾಮೆರಾ ವನ್ನು ಅಳವಡಿಸಿಕೊಳ್ಳಿ ಎಂದು ಈ ಸಂದರ್ಭದಲ್ಲಿ ಮನವಿ ಮಾಡಿದರು
ಇದಕ್ಕೆ ಹಟ್ಟಿ ಪಟ್ಟಣದ ಎಲ್ಲಾ ಅಂಗಡಿ ಮಾಲೀಕರು ಒಪ್ಪಿಗೆ ಸೂಚಿಸಿದ್ದು ಮುಂದಿನ ದಿನಮಾನಗಳಲ್ಲಿ ಸಿ ಸಿ ಕ್ಯಾಮೆರಾ ಕಡ್ಡಾಯವಾಗಿ ಅಳವಡಿಸುವದಾಗಿ ತಿಳಿಸಿದರು
ಹಟ್ಟಿ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಯದ ಜಗನ್ನಾಥ್ ಅವರ ನಿರ್ಲಕ್ಷ್ಯ ತನದಿಂದ ಗ್ರಾಮ ಪಂಚಾಯತ ಇರುವಾಗ ಮುಖ್ಯ ರಸ್ತೆಗೆ ಅಳವಡಿಸಿದ ಸಿಸಿ ಕ್ಯಾಮೆರಾ ವನ್ನು ದುರಸ್ತಿ ಮಾಡದೆ ಮತ್ತು ಹೊಸ ಸಿಸಿ ಕ್ಯಾಮೆರಾವನ್ನು ಅಳವಡಿಸದೆ ಹಟ್ಟಿ ಪಟ್ಟಣ ಮತ್ತು ಇಲ್ಲಿ ವಾಸ ಮಾಡುವ ಜನರು ಹಾಳಾದರೇನಂತೆ, ಅದಕ್ಕೂ ನನಗೂ ಸಂಬಂಧವಿಲ್ಲ ಅನ್ನುವ ರೀತಿಯಲ್ಲಿ ಇದ್ದಾರೆ. ಒಬ್ಬ ಜವಾಬ್ದಾರಿಯುತ ಅಧಿಕಾರಿಯಾಗಿ ಪಟ್ಟಣದಲ್ಲಿ ಪ್ರತಿಯೊಂದು ಕೆಲಸಕ್ಕೂ ಜವಾಬ್ದಾರಿಯಿಂದ ಮಾಡುವುದನ್ನು ಬಿಟ್ಟು ನಿರ್ಲಕ್ಷ ಮಾಡುವುದು ನೋಡಿದರೆ, ಮುಂದೇನಾದರೂ ಘಟನೆಗಳು ನಡೆದರೆ ಅದಕ್ಕೆ ನೇರವಣೆ ಹಟ್ಟಿ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಗಳಾಗಿರುತ್ತಾರೆಂದು ಇಲ್ಲಿಯ ಕರವೇ ಮುಖಂಡರಾದ ಮೌನೇಶ್ ಕಾಕಾ ನಗರ ತಿಳಿಸಿದರು
ಈ ಸಂದರ್ಭದಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿಯ ಭದ್ರತಾ ಸಿಬ್ಬಂದಿ ಏನ್ ಸ್ವಾಮಿ ನಾಯ್ಕೋಡಿ, ಬಾಲಪ್ಪ ನಾಯಕ್, ಶಾಂತಪ್ಪ ಆನ್ವರಿ, ಆಂಜನೇಯ ಗೌಡ ಗುರಿಕಾರ್, ಪ್ರಶಾಂತ್ ಸೇರಿದಂತೆ ಅಂಗಡಿ ಮಾಲೀಕರು ಇದ್ದರು.
ವರದಿ : ಶ್ರೀನಿವಾಸ ಮಧುಶ್ರೀ