ಚಿಟಗುಪ್ಪ : ರಾಸಾಯಿನಿಕ ಅಂಗಡಿ ಮೇಲೆ ತಹಶೀಲ್ದಾರ್ ಮಂಜುನಾಥ್ ಪಂಚಾಳ್ ದಾಳಿ ಮಾಡಿ ಪರಿಶೀಲನೆ ನಡೆಸಿದ ಘಟನೆ ಒಂದು ಜರುಗಿದೆ.
ಚಿಟಗುಪ್ಪ ಪಟ್ಟಣದ ಎಪಿಎಂಸಿ ಆವರಣದಲ್ಲಿನ ನಮ್ಮ ಗ್ರೋಮೋರ್ ರಾಸಾಯಿನಿಕ ಅಂಗಡಿಯ ವಿರುದ್ಧ ದೂರಿನ ಮೆರೆಗೆ ಶುಕ್ರವಾರ ತಹಶೀಲ್ದಾರ್ ಮಂಜುನಾಥ್ ಪಂಚಾಳ್ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಬಳಿಕ ಮಾತನಾಡಿ ಅವರು,ನಮ್ಮ ಗ್ರೋಮರ್ ಅಂಗಡಿ ಅವರು ಯೂರಿಯಾ ರಸಗೊಬ್ಬರ ದಾಸ್ತಾನು ಇದ್ದರು ಸಹ ರೈತರಿಗೆ ವಿತರಣೆ ಮಾಡುತ್ತಿಲ್ಲ ಎಂಬ ಆರೋಪ ಹಿನ್ನಲೆ ದಾಳಿ ನಡೆಸಲಾಗಿದೆ. ಸುಮಾರು 140ಕ್ಕೂ ಅಧಿಕ ಚೀಲ ಯೂರಿಯಾ ಗೊಬ್ಬರ ಅಂಗಡಿಯಲ್ಲಿ ದಾಸ್ತಾನು ಇದ್ದರು ಸಹ ರೈತರಿಗೆ ನೀಡಿರಲಿಲ್ಲ.ಅಂಗಡಿ ಎದುರು ನೆರದಿದ್ದ
ರೈತರಿಗೆ ಕೂಡಲೇ ಯೂರಿಯಾ ಗೊಬ್ಬರ ವಿತರಣೆ ಕೂಡ ನಮಿಂದ ಮಾಡಿಸಲಾಗಿದೆ.
ರೈತರಿಗೆ ತಾರತಮ್ಯ ಮಡುತ್ತಿರುವ ಈ ಅಂಗಡಿ ಮಾಲೀಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ವರದಿ : ಸಜೀಶ ಲಂಬುನೋರ




