ಇಬ್ಬರು ಹೆಂಡತಿಯರ ಮುದ್ದಿನ ಗಂಡನಾಗಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದ ಅರ್ಮಾನ್ ಮಲಿಕ್ ಕುಟುಂಬ ಇದೀಗ ಮತ್ತೆ ಸುದ್ದಿಯಲ್ಲಿದೆ.
ಇಬ್ಬರು ಹೆಂಡತಿಯರನ್ನು ಜೊತೆಯಾಗಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಅರ್ಮಾನ್ ಮಲಿಕ್ ಸೋಶಿಯಲ್ ಮೀಡಿಯಾ ಕಟೆಂಟ್ ಕ್ರಿಯೆಟರ್ ಆಗಿ ಸಿಕ್ಕಾಪಟ್ಟೆ ವೈರಲ್ ಆಗಿದ್ದರು. ಅರ್ಮಾನ್ ಮಲಿಕ್ ಅದೃಷ್ಟ ಎಲ್ಲಿಯವರೆಗೂ ಚೆನ್ನಾಗಿತ್ತು ಅಂದರೆ ತಮ್ಮ ಸೋಶಿಯಲ್ ಮೀಡಿಯಾ ಜನಪ್ರಿಯತೆಯಿಂದಲೇ ಇಬ್ಬರು ಹೆಂಡತಿಯರ ಜೊತೆ ಬಿಗ್ ಬಾಸ್‌ಗೂ ಕೂಡ ಎಂಟ್ರಿ ಪಡೆದಿದ್ದರು. ಹೌದು ಅರ್ಮಾನ್ ಮಲಿಕ್ ಹಾಗೂ ಇಬ್ಬರು ಹೆಂಡತಿಯರಾದ ಪಾಯಲ್ ಮಲಿಕ್ ಮತ್ತು ಕೃತಿಕಾ ಮಲಿಕ್ ಹಿಂದಿ ಬಿಗ್ಬಾಸ್ ಒಟಿಟಿ ಸೀಸನ್ 3 ಸ್ಪರ್ಧಿಗಳಾಗಿ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದರು.
ಬಳಿಕ ಮನೆಯೊಳಗೆ ನಡೆದ ಕೆಲವು ಬದಲಾವಣೆಗಳಿಂದ ಮೊದಲ ವಾರಕ್ಕೆ ಅರ್ಮಾನ್ ಮಲಿಕ್ ಮೊದಲ ಹೆಂಡತಿ ಪಾಯಲ್ ಮಲಿಕ್ ಶೋನಿಂದ ಎಲಿಮಿನೇಟ್ ಆಗಿದ್ದರು. ವಾರಗಳು ಕಳೆಯುತ್ತಿದ್ದಂತೆ ಅರ್ಮಾನ್ ಮಲಿಕ್ ಹಾಗೂ ಕೃತಿಕಾ ಮಲಿಕ್ ಕೂಡ ಬಿಗ್ ಬಾಸ್ ಮನೆಯಿಂದ ಹೊರಬಂದರು. ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಕೊಂಚ ಸೈಲೈಂಟ್ ಆಗಿದ್ದ ಈ ಜೋಡಿಗಳು ಈ ಮತ್ತೆ ಸುದ್ದಿಯಲ್ಲಿವೆ. ಮೊದಲೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಸಿಹಿ ಸುದ್ದಿಗಳನ್ನೇ ಹಂಚಿಕೊಳ್ಳುತ್ತಿದ್ದ ಅರ್ಮಾನ್ ಮಲಿಕ್ ಹಾಗೂ ಪಾಯಲ್ ಮಲಿಕ್ ಮತ್ತು ಕೃತಿಕಾ ಮಲಿಕ್ ಇದೀಗ ನೋವಿನ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.
ಈ ಕಾರಣಕ್ಕೆ ನೆಲಮಂಗಲ ಬಳಿ ಬೆಂಗಳೂರು ಎರಡನೇ ಏರ್‌ಪೋರ್ಟ್ ನಿರ್ಮಾಣ ಡೌಟ್ ಹೌದು ಅರ್ಮಾನ್ ಮಲಿಕ್ ಹಾಗೂ ಪಾಯಲ್ ಮಲಿಕ್ ಮತ್ತು ಕೃತಿಕಾ ಮಲಿಕ್ ಜೀವನಕ್ಕೆ ಬರಸಿಡಿಲು ಬಡಿದಿದ್ದು, ಬಿಗ್ಬಾಸ್ ಸ್ಪರ್ಧಿ ಅರ್ಮಾನ್ ಮಲಿಕ್ ಅವರ ಎರಡನೇ ಪತ್ನಿ ಕೃತಿಕಾ ಮಲಿಕ್ 2 ವರ್ಷದ ಮಗ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾನೆ ಎಂದು ಹೇಳಿಕೊಂಡಿದ್ದಾರೆ.
ಅರ್ಮಾನ್ ಅವರ ಎರಡನೇ ಪತ್ನಿ ಕೃತಿಕಾ ಮಲಿಕ್ ಅವರ ಎರಡು ವರ್ಷದ ಮಗ ಜೈದ್ ರಿಕೆಟ್ಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾನೆ. ಈ ಬಗ್ಗೆ ಸ್ವತಃ ಕೃತಿಕಾ ಮಲಿಕ್ ಹೇಳಿಕೊಂಡಿದ್ದಾರೆ. ‘ನನ್ನ ಮಗನ ದೇಹದಲ್ಲಿ ವಿಟಮಿನ್ ಡಿ, ಕ್ಯಾಲ್ಸಿಯಂ ರಂಜಕದ ಕೊರತೆಯಿಂದ ಈ ರೋಗ ಕಾಣಿಸಿಕೊಂಡಿದೆ.
ಇದರಿಂದಾಗಿ ಮಗನ ಮೂಳೆಗಳು ದುರ್ಬಲವಾಗುತ್ತಿವೆ. ನಮ್ಮ ಮಗನ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ’ ಎಂದು ಕಣ್ಣೀರು ಹಾಕಿದ್ದಾರೆ. ವಿಡಿಯೋ ಮೂಲಕ ಈ ನೋವಿನ ಸುದ್ದಿ ಹಂಚಿಕೊಂಡಿರುವ ಕೃತಿಕಾ ಮಲಿಕ್ ನನ್ನನ್ನು ದ್ವೇಷಿಸಬೇಡಿ, ನನ್ನ ಮಗನ ಮೇಲೆ ನಿಮ್ಮ ಹಾರೈಕೆ ಇರಲಿ ಎಂದು ಮನವಿ ಮಾಡಿಕೊಂಡಿದ್ದಾರೆ.




