Ad imageAd image

ಎನ್ ಆರ್ ಎಲ್ ಎಮ್ ಯೋಜನೆ ದುರುಪಯೋಗ( ಕಾ ನಿ ಪ) ಧ್ವನಿ ಸಂಘಟನೆಯಿಂದ ದೂರು.

Bharath Vaibhav
ಎನ್ ಆರ್ ಎಲ್ ಎಮ್ ಯೋಜನೆ ದುರುಪಯೋಗ( ಕಾ ನಿ ಪ) ಧ್ವನಿ ಸಂಘಟನೆಯಿಂದ ದೂರು.
WhatsApp Group Join Now
Telegram Group Join Now

ಅಥಣಿ : 22/09/2025 ರಂದು ಬೆಳಗ್ಗೆ ಅಥಣಿಯ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿವಾನಂದ್ ಕಲ್ಲಾಪುರ್ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತ ಧ್ವನಿ ಸಂಘಟನೆಯಿಂದ ದೂರನ್ನು ಸಲ್ಲಿಸಲಾಯಿತು.

ದೂರ ಅನ್ವಯ ಅಥಣಿ ತಾಲೂಕಿನ ಕೆಲವು ಸ್ವಸಹಾಯ ಸಂಘಗಳು/ ಸಂಸ್ಥೆಗಳು ಅಥವಾ ಕಾರ್ಯನಿರ್ವಾಹಕರು ಎನ್ ಆರ್ ಎಲ್ ಎಮ್ (NRLM) ಯೋಜನೆ ಅಡಿಯಲ್ಲಿ ದೊರಕಿರುವ ಅನುದಾನವನ್ನು ನಿಗದಿತ ಉದ್ದೇಶಕ್ಕಾಗಿ ಬಳಸದೆ, ಅಕ್ರಮವಾಗಿ ಉಳಿಸಿಕೊಂಡು ಅಥವಾ ವೈಯಕ್ತಿಕ ಉದ್ದೇಶಕ್ಕಾಗಿ ದುರುಪಯೋಗಪಡಿಸಿಕೊಂಡಿರುವ ಸ್ಥಳೀಯ ಮಾಹಿತಿಗಳು ಮತ್ತು ಸಾಕ್ಷಿಗಳು ಲಭ್ಯವಾಗಿರುತ್ತವೆ.

ಈ ಎಲ್ಲಾ ವಿಷಯಗಳ ಬಗ್ಗೆ ಸೂಕ್ತವಾದ ತನಿಖೆ ನಡೆಸಿ, ತ್ವರಿತವಾಗಿ ಅವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಕಾರ್ಯನಿರ್ತ ಪತ್ರಕರ್ತರ ಧ್ವನಿ ಸಂಘಟನೆ ಅಥಣಿ ಘಟಕದಿಂದ ಮನವಿಯನ್ನು ಕಾರ್ಯನಿರ್ವಕ ಅಧಿಕಾರಿಗಳಿಗೆ ಸಲ್ಲಿಸಲಾಯಿತು.

ಇದೇ ವೇಳೆ ಮಾತನಾಡಿದ ಅಥಣಿ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿವಾನಂದ್ ಕಲ್ಲಾಪುರ್ ಅವರು ಮನವಿಯನ್ನು ಸ್ವೀಕರಿಸಿ ನಾನು ತಕ್ಷಣದಿಂದಲೇ ಈ ಯೋಜನೆಯ ಸಂಬಂಧಪಟ್ಟ ಎಲ್ಲ ಮಾಹಿತಿಗಳನ್ನು ತೆಗೆದುಕೊಂಡು ಅದನ್ನು ಪರಿಶೀಲನೆ ಮಾಡಿ ಮೇಲಾಧಿಕಾರಿಗಳಿಗೆ ತಿಳಿಸಿ ಅವರ ಮೇಲೆ ಶಿಸ್ತಿನ ಕ್ರಮ ಜರುಗಿಸುತ್ತೇನೆ ಎಂದು ಹೇಳಿದರು.

ಇದೇ ವೇಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಅಥಣಿ ಘಟಕದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಈ ಸಂಘಟನೆಯ ಸದಸ್ಯರು ಎಲ್ಲರೂ ಸೇರಿ ಮನವಿಯನ್ನು ಸಲ್ಲಿಸಿದರು.

ವರದಿ  : ಅಜಯ ಕಾಂಬಳೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!