This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

State News

Join The Telegram Join The WhatsApp

ಕೂಡ್ಲಿಗಿ- ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು, ನರಸಿಂಹಗಿರಿ(ಏಳೂರು ಗುಡ್ಡ) ಗ್ರಾಮವಾಸಿಗಳು ಹಾಗೂ ವಾಲ್ಮೀಕಿ ಸಮುದಾಯದ ಹಿರಿಯ ರಾಜಕಾರಣಿ. ಕೂಡ್ಲಿಗಿ ಕ್ಷೇತ್ರ ಕಂಡ ಅಭಿವೃದ್ಧಿಯ ಹರಿಕಾರರು, ಹಾಗೂ ಮಾಜಿ ಶಾಸಕರಾದ ಎನ್.ಟಿ.ಬೊಮ್ಮಣ್ಣ(79) ರವರು ನಿಧನರಾಗಿದ್ದಾರೆ. ಅವರು ಕಾಂಗ್ರೇಸ್ ಪಕ್ಷದಿಂದ ಕೂಡ್ಲಿಗಿ ಕ್ಷೇತ್ರದಿಂದ, 1984-94ರವರೆಗೆ, ಸತತ ಎರೆಡು ಭಾರಿ ಶಾಸಕರಾಗಿ ಬಹುಮತದಿಂದ ಗೆಲುವು ಸಾಧಿಸಿದ್ದರು. ಅವರು ಶಾಸಕರಾಗಿದ್ದ ಕೂಡ್ಲಿಗಿ ಪಟ್ಟಣ ಹಾಗೂ ತಾಲೂಕಿನಾಧ್ಯಂತ, ಜನ ಪ್ರೀಯ ಕಾರ್ಯಗಳನ್ನು ಮಾಡಿದ್ದರು. ಕೂಡ್ಲಿಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ,ಡಿಗ್ರಿಕಾಲೇಜ್, ಅಗ್ನಿಶಾಮಕ ಠಾಣೆ, ಬಸ್ ನಿಲ್ದಾಣ. ಸೇರಿದಂತೆ ಅನೆಕ ಕಚೇರಿಗಳನ್ನು, ವಿವಿದ ಸರ್ಕಾರಿ ಇಲಾಖೆಗಳನ್ನು ಮಂಜೂರು ಮಾಡಿಸಿದ್ದರು. ಅವರು ಅಸಂಖ್ಯಾತ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ತಾಲೂಕಿನಾಧ್ಯಂತ, ಜಿಲ್ಲೆಯಾಧ್ಯಂತ ರಾಜ್ಯಾದ್ಯಂತ ತುಂಬಾ ಹೆಸರು ಮಾಡಿದ್ದರು. ರಾಜ್ಯಕಂಡ ಹಿರಿಯ ರಾಜಕಾರಣಿ ಹಾಗೂ ಜನಪ್ರತಿನಿಧಿಗಳಾಗಿದ್ದರು, ಅನೇಕ ಭಾರಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಪರಾಜಿತರಾಗಿದ್ದರು. ಆದರೆ ಕ್ಷೇತ್ರದ ಜನತೆಯ ಮನಸ್ಸಿನಲ್ಲಿ ತಮ್ಮ ಸಮಾಜ ಸೇವಾ ಕಾರ್ಯಗಳಿಂದ, ಜನ ಮಾನಸದಲ್ಲಿ ನೆಲೆಯೂರಿದ್ದರು. ಅವರು ತಮ್ಮ ಜನಪರ ಕಾಳಜಿಯಿಂದ, ಹಾಗೂ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶತಾಗತಾಯ ನಿರಂತರ ಪ್ರಯತ್ಮ ನಡೆಸಿದ್ದರು ಮತ್ತು ಪ್ರಸ್ಥುತ ಈ ನಿಟ್ಟಿನಲ್ಲಿ ನಿರತರಾಗಿದ್ದರು. ಅವರು ಸಧ್ಯ ಜೆಡಿಎಸ್ ಪಕ್ಷದಿಂದ ಗುರುತಿಸಿಕೊಂಡಿದ್ದರು, ಈ ಹಿಂದೆ ಕಾಂಗ್ರೇಸ್ ಹಾಗೂ ಬಿಜೆಪಿ ಸೇರಿದಂತೆ ವಿವಿದ ಪಕ್ಷಗಳಲ್ಲಿ ಪ್ರಮುಖ ಸ್ಥಾನಮಾನ ಹೊಂದಿದ್ದರು. ಎನ್.ಟಿ.ಬೊಮ್ಮಣ್ಣರವರು ಮಡದಿ, ದ್ವಿತೀಯ ಪತ್ರರು ಹಾಗೂ ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗ, ಅಸಂಖ್ಯಾತ ರಾಜೀಯ ಸ್ನೇಹಿತರನ್ನು, ಅಪಾರ ಶಿಷ್ಯವರ್ಗವನ್ನು ಅಗಲಿದ್ದಾರೆ. ಸಂತಾಪ:- ಇಹಲೋಕ ಅಗಲಿದ ಮಾಜಿ ಶಾಸಕ ಎನ್.ಟಿ.ಬೊಮ್ಮಣ್ಣವರ ಅಗಲಿಕೆ, ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ಸಮಸ್ತ ಜನತೆ. ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕು, ಜಿಲ್ಲೆ,ರಾಜ್ಯದ ಸಮಸ್ತ ವಾಲ್ಮೀಕಿ ಸಮಾಜದ ಬಂಧುಗಳು. ವಿವಿದ ಸಮುದಾಯಗಳ ಬಾಂಧವರು,ವಿವಿದ ಜನಪ್ರತಿನಿಧಿಗಳು, ವಿವಿದ ಪಕ್ಷಿಗಳ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು. ಕಾರ್ಮಿಕರು, ರೈತರು, ಮಹಿಳಾ ಸಂಘಗಳು, ಯುವಕರು, ಕಲಾವಿದರು,ಗಣ್ಯಮಾನ್ಯರು, ಕಲಾವಿದರು, ವಿವಿದ ಅಧಿಕಾರಿಗಳು ವಿವಿದ ಸಿಬ್ಬಂದಿಯವರು ತೀವ್ರಸಂತಾಪವ್ಯಕ್ತ  ವಿ.ಜಿ.ವೃಷಭೇಂದ್ರ


Join The Telegram Join The WhatsApp
Bharath Vaibhav
the authorBharath Vaibhav

Leave a Reply