Ad imageAd image

ದಕ್ಷಿಣ ಕಾಶಿ ಎಂದು ಪ್ರಸಿದ್ಧಿಯಾದ ನುಂಕಿಮಲೆ ಸಿದ್ದೇಶ್ವರ ಜಾತ್ರೆ

Bharath Vaibhav
ದಕ್ಷಿಣ ಕಾಶಿ ಎಂದು ಪ್ರಸಿದ್ಧಿಯಾದ ನುಂಕಿಮಲೆ ಸಿದ್ದೇಶ್ವರ ಜಾತ್ರೆ
WhatsApp Group Join Now
Telegram Group Join Now

ಮೊಳಕಾಲ್ಮುರು: ಪಟ್ಟಣದಲ್ಲಿ ದಕ್ಷಿಣ ಕಾಶಿ ಎಂದು ಪ್ರಸಿದ್ಧಿಯಾಗಿರುವ “ನುಂಕಿಮಲೆ ಸಿದ್ದೇಶ್ವರ” ಜಾತ್ರೆಯು ಭಾನುವಾರದಿಂದ ಬುದುವಾರದವರೆಗೂ ಅದ್ದೂರಿಯಾಗಿ ನಡೆಯಲಿದೆ.

ಮೊಳಕಾಲ್ಮೂರು :- ಪಟ್ಟಣ ಸೇರಿದಂತೆ ತಾಲೂಕಿನ 33 ಹಳ್ಳಿಗಳ ಆರಾಧ್ಯ ದೈವ ಶ್ರೀ ನುಂಕಿಮಲೆ ಸಿದ್ದೇಶ್ವರನ ಜಾತ್ರೆಗೆ ಕಳೆದ ಕೆಲ ದಿನಗಳಿಂದ ಸಿದ್ಧತೆ ಮಾಡಿಕೊಂಡು ಈ ದಿನ ಭಾನುವಾರ ದೇವರನ್ನು ಪಟ್ಟಣಕ್ಕೆ ಡೊಳ್ಳು ವಾದ್ಯಗಳೊಂದಿಗೆ ಬರಮಾಡಿಕೊಂಡರು.

ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಗೆ ಮುಖಂಡರು ದೇವರನ್ನು ಹೂವಿನ ಅಪ್ಪಣೆ ಕೇಳುವ ಮೂಲಕ ದಿನಾ ನಿಗದಿಪಡಿಸುತ್ತಾರೆ ಇದರಿಂದ ಬೆಟ್ಟದಲ್ಲಿರುವ ನುಂಕಿಮಲೆ ಸಿದ್ದೇಶ್ವರ ದೇವಸ್ಥಾನಕ್ಕೆ ಹೋಗಿ ಸ್ವಾಮಿ ಅನುಮತಿ ಪಡೆದು ಜಾತ್ರೆ ನಿಗದಿ ಮಾಡಲಾಗಿತ್ತು. ದಕ್ಷಿಣ ಕಾಶಿ ಎಂದೇ ಹೆಸರಾಗಿರುವ ಈ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ.

ಅದರಂತೆ ಭಾನುವಾರ ಸ್ವಾಮಿಯ ಪಲ್ಲಕ್ಕಿ ಮೆರವಣಿಗೆಯು ಮುಖ್ಯಬೀದಿಗಳಲ್ಲಿ ನಡೆಯಲಿದ್ದು ಬಳಿಕ ಕೋಟೆ ಬಡಾವಣೆಯಲ್ಲಿರುವ ಸ್ವಾಮಿ ಕಟ್ಟೆ ಮೇಲೆ ಪ್ರತಿಷ್ಠಾಪನೆ ಮಾಡಲಾಗುವುದು ಇದರ ಜೊತೆ ನಿರಂತರವಾಗಿ ಅನ್ನಸಂತರ್ಪಣೆ ನಡೆಯಲಿದೆ.

ಸೋಮವಾರ ಮತ್ತು ಮಂಗಳವಾರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ರು ಬೀದಿ ನಾಟಕ ಪ್ರದರ್ಶನ ಯಕ್ಷಗಾನ ಪ್ರದರ್ಶನ ಸಾಮಾಜಿಕ ಪೌರಾಣಿಕ ನಾಟಕಗಳು ಪ್ರದರ್ಶನ ಕೋಲಾಟ ಹಮ್ಮಿಕೊಳ್ಳಲಾಗಿದೆ.

ದಿನಾಂಕ 4 ರಂದು ಬುದುವಾರ ಬೆಳಿಗ್ಗೆ ಮಹಾ ಮಂಗಳಾರತಿ ನಂತರ ಸ್ವಾಮಿ ಕಟ್ಟೆಯಿಂದ ಮೇಲೆ ಹೇಳುವನು ಬುಡಕಟ್ಟು ಸಂಸ್ಕೃತಿಯಂತೆ ದೊಡ್ಡಪೇಟೆ ರಸ್ತೆಯಲ್ಲಿರುವ ಕೆಲ ಮನೆಗಳ ಕಟ್ಟೆ ಮೇಲೆ ಕುಳಿತು ನಂತರ ಮಧ್ಯಾಹ್ನ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಗೂಡು ತುಂಬಿಸುವ ಮೂಲಕ ಜಾತ್ರೆಗೆ ತೆರೆ ಬೀಳಲಿದೆ ಎಂದು ಜಾತ್ರೆಯ ಸಮಿತಿಯವರು ತಿಳಿಸಿದ್ದಾರೆ.

ಮೊಳಕಾಲ್ಮೂರು ಪಟ್ಟಣ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ ಅಭಿಮಾನಿಗಳು ನೂರಾರು ಫ್ಲೆಕ್ಸಿಗಳನ್ನು ಹಾಕಿ ಜಾತ್ರೆಗೆ ಸ್ವಾಗತ ಕೋರುತ್ತಿರುವುದು ಎಲ್ಲರ ಗಮನ ಸೆಳೆದಿದೆ ಬರುವ ಭಕ್ತರಿಗೆ ಎಲ್ಲಾ ಮೂಲ ಸೌಕರ್ಯ ವ್ಯವಸ್ಥೆ ಮಾಡಲಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಿನಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯು ವಿಶಿಷ್ಟ ಮತ್ತು ವಿಭಿನ್ನವಾಗಿ ನಡೆಯುತ್ತದೆ.
ವರದಿ: ಪಿಎಂ ಗಂಗಾಧರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!