Ad imageAd image

ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ವತಿಯಿಂದ ನರ್ಸರಿ ಪ್ಲಾಂಟೇಶನ್ ತರಬೇತಿ ಕಾರ್ಯಕ್ರಮ

Bharath Vaibhav
ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ವತಿಯಿಂದ ನರ್ಸರಿ ಪ್ಲಾಂಟೇಶನ್ ತರಬೇತಿ ಕಾರ್ಯಕ್ರಮ
WhatsApp Group Join Now
Telegram Group Join Now

ಜೊಯಿಡಾ: ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಹಳಿಯಾಳ ವಿಸ್ತರಣಾ ಶಾಖೆ ಜೋಯಿಡಾ ವತಿಯಿಂದ ಬಾಳೆ ಸಸಿ ಮತ್ತು ಮಾವಿನ ಸಸಿ ನರ್ಸರಿ ಪ್ಲಾಂಟೇಶನ್ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ವಿಜಯ ಪಂಡಿತ್ ಉಪಾಧ್ಯಕ್ಷರು ಆಸು ಗ್ರಾಮ ಪಂಚಾಯತ್ ಇವರು ತೋಟಗಾರಿಕೆ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದು ಶುಭ ಹಾರೈಸಿದರು .

ಮಾರುತಿ ಪಾಟೀಲ್ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಜೋಯಿಡಾ ಇವರು ಫಲಾನುಭವಿಗಳಿಗೆ ಸರ್ಕಾರದ ಇಲಾಖೆ ಸಹಾಯಧನವನ್ನು ಪಡೆದುಕೊಳ್ಳಿ ಎಂದು ಹೇಳಿದರು ಅಬ್ದುಲ್ ದಳವಾಯಿ ಸಹಾಯಕ ತೋಟಗಾರಿಕೆ ಅಧಿಕಾರಿಗಳು ಬಾಳೆ ಸಸಿ ಮತ್ತು ಮಾವಿನ ಸಸಿ ನರ್ಸರಿ ಪ್ಲಾಂಟೇಶನ್ ಮಾಡುವ ವಿಧಾನವನ್ನು ತರಬೇತಿಯಲ್ಲಿ ತಿಳಿಸಿದರು ಅಲ್ಲದೆ ಅಡಿಕೆ ಸಸಿ, ದಾಲ್ಚಿನ್ನಿ, ಕಾಳುಮೆಣಸು ಇತರೆ ತೋಟಗಾರಿಕೆ ಬೆಳೆಗಳಿಗೆ ಸಿಗುವ ಸೌಲಭ್ಯಗಳು ಮಾಹಿತಿ ನೀಡಿದರು ಪ್ರಾಸ್ತವಿಕವಾಗಿ ಅಶೋಕ್ ಸೂರ್ಯವಂಶಿ ಯೋಜನಾಧಿಕಾರಿಗಳು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ವಿಸ್ತರಣಾ ಶಾಖೆ ಜೋಯಿಡಾ ಮಾತನಾಡಿದರು ಶ್ರೀ ಮನೋಹರ್ ಚವರಿಯವರ್ ಕ್ಷೇತ್ರ ಮೇಲ್ವಿಚಾರಕರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ವಿಸ್ತರಣಾ ಶಾಖೆ ಜೋಯಿಡಾ ಕಾರ್ಯಕ್ರಮವನ್ನು ಆಯೋಜಿಸಿ ವಂದಿಸಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!