ಮೊಳಕಾಲ್ಮೂರು :-ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಶಾಸಕ ಎನ್ ವೈ ಗೋಪಾಲಕೃಷ್ಣ.
ಮೊಳಕಾಲ್ಮುರು:-ಸ್ಪರ್ಧಾತ್ಮಕ ಕ್ರೀಡೆ ಎಂದರೆ ಗೆಲುವು-ಸೋಲು, ದಾಖಲೆ, ಶ್ರೇಷ್ಠತೆ, ತಂತ್ರ ಹಾಗೂ ನಿಯಮಗಳಿಗೆ ಒತ್ತು ನೀಡುವ ಕ್ರೀಡೆಗಳು. ಇವುಗಳಲ್ಲಿ ಆಟಗಾರರು ಅಥವಾ ತಂಡಗಳು ಪರಸ್ಪರ ಪೈಪೋಟಿ ನಡೆಸಿ ಜಯ ಸಾಧಿಸಲು ಪ್ರಯತ್ನಿಸುತ್ತಾರೆ ಪ್ರತಿಯೊಬ್ಬರು ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು
ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ತಿಳಿಸಿದರು.
ಪಟ್ಟಣದ ಜ್ಯೂನಿಯರ್ ಕಾಲೇಜು ಆವರಣದಲ್ಲಿ ಸೋಮವಾರ ಜಿಪಂ, ತಾಪಂ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ, ಗಾಯಿತ್ರಿ ಹಿರಿಯ ಪ್ರಾಥಮಿಕ ಶಾಲೆ,ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘಗಳಿಂದ ಏರ್ಪಡಿಸಿದ್ದ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಯಲ್ಲಿ ಸೋಲು-ಗೆಲುವು ಸರ್ವೇ ಸಾಮಾನ್ಯ. ಅದನ್ನು ಸಮನಾಗಿ ಸ್ವೀಕರಿಸಿ ವಿದ್ಯಾರ್ಥಿಗಳು ಆಸಕ್ತಿಯಿಂದ ಆಡಬೇಕು ಮತ್ತು ಶಾರೀರಿಕ ಸದೃಢತೆಗೆ ಆಟ-ಪಾಠಗಳು ಮಹತ್ವ.ಈಗಾಗಲೇ ಕ್ರೀಡಾಂಗಣ ನಿರ್ಮಾಣಕ್ಕಾಗಿ 1.50 ಕೋಟಿ ರೂ ಅನುದಾನ ಮುಂಜೂರಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಿರ್ಮಲದೇವಿಯವರು ಮಾತನಾಡಿದರು. ಅದೇ ರೀತಿ ಮಹಿಳಾ ಸೇವಾ ಸಮಾಜದ ಕಾರ್ಯದರ್ಶಿ ಚಂದ್ರಿಕಾ ಗೌಡ ತಮ್ಮ ಅನಿಸಿಕೆಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳು ಕ್ರೀಡಾ ಜ್ಯೋತಿಯನ್ನು ಸ್ವಾಗತಿಸಿಕೊಂಡು ಧ್ವಜ ವಂದನೆ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಟಿ.ಜಗದೀಶ್,ಬಿಇಓ ನಿರ್ಮಲದೇವಿ, ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ಸಾವಿತ್ರಿ ಬಾಯಿ, ಕಾರ್ಯದರ್ಶಿ ಎಂ.ಬಿ.ಚಂದ್ರಿಕಾಗೌಡ, ಪಶು ಸಂಗೋಪನಾ ಇಲಾಖೆ ಎಇಇ ಡಾ.ಎಚ್.ರಂಗಪ್ಪ, ಪಪಂ ಸದಸ್ಯರಾದ ಎಸ್.ಖಾದರ್, ಎಂ.ಅಬ್ದುಲ್ಲಾ, ನಬೀಲ್ ಅನ್ಸಾರಿ, ಕಸಾಪ ಅಧ್ಯಕ್ಷ ಜಿಂಕಾ ಶ್ರೀನಿವಾಸ್ ಮುಖಂಡರಾದ ವಿ.ಮಾರನಾಯಕ, ಬಡೋಬಯ್ಯ, ಅಪಿಮಲ್ಲಿ, ಜಿಯಾವುಲ್ಲಾ, ಐಯಣ್ಣ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ.ಪ್ರಸನ್ನ, ಪ್ರರಭಾರ ದೈಹಿಕ ಪರಿವೀಕ್ಷಕ ಅಬ್ರಾಹಂ, ಪ್ರಾಚಾರ್ಯ ಗೋವಿಂದಪ್ಪ, ಮುಖ್ಯ ಶಿಕ್ಷಕರಾದ ಬಿ.ಓಬಣ್ಣ, ಡಿ.ಕೆ.ಮಂಜುನಾಥ್, ಬೋರೇಶ್, ಶಿಕ್ಷಕರಾದ ಎಸ್.ಕೆ.ಗಂಗಾಧರ್, ಜಾಕೀರ್ ಹುಸೇನ್, ಮುಜಾಮಿಲ್ ಇದ್ದರು.
ವರದಿ :ಪಿಎಂ ಗಂಗಾಧರ




