Ad imageAd image

ಮತಗಳ್ಳತನದಿಂದ ಬಿಜೆಪಿಗೆ ಹೆಚ್ಚು ಮತ: ಎನ್. ವೈ. ಗೋಪಾಲಕೃಷ್ಣ

Bharath Vaibhav
ಮತಗಳ್ಳತನದಿಂದ ಬಿಜೆಪಿಗೆ ಹೆಚ್ಚು ಮತ: ಎನ್. ವೈ. ಗೋಪಾಲಕೃಷ್ಣ
WhatsApp Group Join Now
Telegram Group Join Now

ಮೊಳಕಾಲ್ಮೂರು : ಕಳೆದ ಲೋಕಸಭಾ ಮತ್ತು ಇತರೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದವರು ಮತ ಕಳ್ಳತನದ ಮೂಲಕ ಅವರವರ ಕ್ಷೇತ್ರಗಳಲ್ಲಿ ಹೆಚ್ಚಿನ ಮತಗಳನ್ನು ಗಳಿಸಿದ್ದಾರೆ ಎಂದು ಶಾಸಕರಾದ ಎನ್ ವೈ ಗೋಪಾಲಕೃಷ್ಣರವರು ಬಿಜೆಪಿ ವಿರುದ್ಧ ಆಕ್ರೋಶ ಅವರ ಹಾಕಿದರು.

ಪಟ್ಟಣದಲ್ಲಿ ಗುರುವಾರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಾಗೂ ಮೊಳಕಾಲ್ಮೂರು, ತಳಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮತದಾರರ ಹಕ್ಕುಗಳಗಾಗಿ ಸಹಿ ಸಂಗ್ರಹಿಸಿ ಜನಾದೇಶದ ಕಗ್ಗೊಲೆ ನಿಲ್ಲಿಸಬೇಕು ಎಂಬ ಕಾರ್ಯಕ್ರಮದಲ್ಲಿ ಸಹಿ ಸಂಗ್ರಹಣೆ ಮಾಡಿ ಅವರು ಮಾತನಾಡಿದರು.

ಈ ದಿನ ಇಡೀ ದೇಶಾದ್ಯಂತ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷರಾದ ಖರ್ಗೆಯವರು ಇನ್ನ ಅನೇಕ ಮುಖಂಡರು ಮತ್ತು ಹಿರಿಯರು ಮತ್ತು ಕಿರಿಯರು ಬಿಜೆಪಿಯವರ ಮತ ಕಳ್ಳತನದ ವಿರುದ್ಧ ಎಲ್ಲ ಮತದಾರರು ಜಾಗೃತಾಗಬೇಕು ಮತ್ತು ಎಲ್ಲಾ ಮತದಾರರು ಜಾಗೃತಿಗೊಳಿಸಬೇಕು ಎಂಬ ಸಂದೇಶವನ್ನು ಹೊರಡಿಸಿದ್ದಾರೆ ಆದ್ದರಿಂದ ಎಲ್ಲಾ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಕಳ್ಳರಿದ್ದಾರೆ ಎಚ್ಚರಿಕೆ ಎಂಬ ಆಂದೋಲನವನ್ನು ಮಾಡುತ್ತಿದ್ದೇವೆ ಎಲ್ಲ ಮತದಾರರು ಸಹಿ ಸಂಗ್ರಹಣೆ ಮಾಡಿ ಜಾಗೃತಿ ವಹಿಸಬೇಕು. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರುಗಳನ್ನು ಬಿಟ್ಟು ಹೋದಲ್ಲಿ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು, ಇಲ್ಲವಾದಲ್ಲಿ ನಮ್ಮ ಗಮನಕ್ಕೆ ತರಬೇಕು ನಾವು ಸ್ಟೇಟ್ ಎಲೆಕ್ಷನ್ ಕಮಿಷನ್ ಅಧಿಕಾರಿಗಳಿಗೆ ತಿಳಿಸಿ ಸರಿಪಡಿಸುತ್ತೇವೆ ಎಂದರು.

ಆದ್ದರಿಂದ ಮತದಾರರು ಜಾಗೃತರಾಗಬೇಕು ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಲೀಮುಲ್ಲಾ ತಳಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗೇಶ್ ರೆಡ್ಡಿ ಮುಖಂಡರಾದ ನಾಗಭೂಷಣ್ ಹೆಜ್ಜೇನಳ್ಳಿ ನಾಗರಾಜ್, ಕಾಂಗ್ರೆಸ್ ಮುಖಂಡರಾದ ದೇವಯ್ಯ, ಸುಧಾ ದೇವಯ್ಯ, ಬಿ ವಿಜಯ್, ಭೀಮಣ್ಣ, ಕರುನಾಡ ಜಿಯಾವುಲ್ಲ, ಇನ್ನು ಅನೇಕ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ವರದಿ : ಪಿಎಂ ಗಂಗಾಧರ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!