Ad imageAd image

ಶಿಕ್ಷಣದಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ : ಎನ್ ವೈ ಗೋಪಾಲಕೃಷ್ಣ

Bharath Vaibhav
ಶಿಕ್ಷಣದಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ : ಎನ್ ವೈ ಗೋಪಾಲಕೃಷ್ಣ
WhatsApp Group Join Now
Telegram Group Join Now

ಮೊಳಕಾಲ್ಮುರು : ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದ್ದಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ತಿಳಿಸಿದರು. ಪಟ್ಟಣದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನನ್ನ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅತೀ ಹೆಚ್ಚು ಅನುದಾನ ನೀಡಿ ಶಿಕ್ಷಣಕ್ಕೆ ಒತ್ತು ಕೊಡುತ್ತಿದ್ದೇನೆ, ಯಾರೇ ವಿದ್ಯೆ ಕಲಿಸಿದರು ಕೂಡ ಅವರನ್ನು ನಾವು ಗುರುಗಳೆಂದು ಸ್ವೀಕಾರ ಮಾಡಬೇಕು, ಉತ್ತಮ ಸಮಾಜ ನಿರ್ಮಾಣ ಮಾಡಲು ಏನು ಬೇಕೋ ಅದನ್ನು ಮಾತ್ರ ನಾವು ತೆಗೆದುಕೊಂಡು ಕೆಟ್ಟದ್ದನ್ನು ಬಿಟ್ಟುಬಿಡಬೇಕು ಆಗ ಮಾತ್ರ ಸಮಾಜದಲ್ಲಿ ಉನ್ನತ ವ್ಯಕ್ತಿಯಾಗಿ ಬೆಳೆಯಲು ಸಾಧ್ಯವಾಗುತ್ತದೆ.

ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಿರ್ಮಲದೇವಿ ಮಾತನಾಡಿ ಗುರುವೇ ಶ್ರೇಷ್ಠ ಎನ್ನುವ ಭಾವನೆ, ಎಂಬುದನ್ನು ಮಕ್ಕಳು ತಿಳಿದುಕೊಳ್ಳಬೇಕು,ಎಲ್ಲವೂ ಕೇವಲ ಔಪಚಾರಿಕ, ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಮಹತ್ವ ಬದಲಾವಣೆಗಳು ಉಂಟಾಗುತ್ತಿವೆ. ಪ್ರಾರ್ಥಮಿಕ ಅಂತದಿಂದ ಪದವಿ ಅಂತದವರಿಗೂ ತಂತ್ರಜ್ಞಾನ ಬಳಕೆ ಅಗಾಧವಾಗುತ್ತಿದೆ. ಈ ತಾಂತ್ರಿಕತೆಯ ಭರಾಟೆಯಲ್ಲಿ ನೈತಿಕತೆ ಶಿಸ್ತು ಮಾನವೀಯ ಮೌಲ್ಯಗಳು ಮಾಯವಾಗುತ್ತವೆ.

ಪ್ರಸ್ತುತ ಶಿಕ್ಷಕರು ಎದುರಿಸುತ್ತಿರುವ ಸವಾಲುಗಳನ್ನು ಹಲವಾರು ಇರಬಹುದು ನಾವು ಸಮಾಜವನ್ನು ತಿದ್ದುವ ಶಿಕ್ಷಕರ ವೃತ್ತಿಯಾಗಿರುವುದರಿಂದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಬೇಕು ಪ್ರಸ್ತುತವಾಗಿ 5 ಕೋಟಿ ಅನುದಾನವನ್ನು ಮೂಲಭೂತ ಸೌಕರ್ಯಗಳಿಗೆ ಶಾಸಕರು ನೀಡಿದ್ದಾರೆ. ಶಿಕ್ಷಣದಿಂದ ಅಭಿವೃದ್ಧಿಯತ್ತ ಕೊಂಡೊಯ್ಯಲು ಎಲ್ಲಾ ಸಹಕಾರ ನೀಡುತ್ತಿದ್ದಾರೆ, ನಮ್ಮ ಶಾಸಕರು,ಅದಕ್ಕೆ ಉದಾಹರಣೆ ಎಂಬಂತೆ ಕಳೆದ ಸಾಲಿನಲ್ಲಿ ಸರ್ಕಾರಿ ಪ್ರೌಢಶಾಲೆಯ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಜಿಲ್ಲಾ ಪ್ರಥಮ ಸ್ಥಾನ ಪಡೆದಿದ್ದಾರೆ. ತಾಲೂಕಿನ ಪ್ರಥಮ ಸ್ಥಾನವನ್ನು ಅದೇ ಶಾಲೆಯ ವಿದ್ಯಾರ್ಥಿನಿ ಕೂಡ ಪಡೆದಿದ್ದಾರೆ ಈ ಸಾಧನೆ ಮಾಡಿರುವುದಕ್ಕೆ ಎಲ್ಲಾ ಶಿಕ್ಷಕರು ಅವರಿಗೆ ಅಭಿನಂದಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಅತಿ ಹೆಚ್ಚು ಅಂಕ ಗಳಿಸಿದವರಿಗೆ ಲ್ಯಾಪ್ಟಾಪ್ ವಿತರಣೆ ಮಾಡಿ ಸನ್ಮಾನ ಮಾಡಲಾಯಿತು, ಉತ್ತಮ ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು, ನಿವೃತ್ತಿ ಹೊಂದಿದ ಶಿಕ್ಷಕರು ಕೂಡ ಸನ್ಮಾನ ಮಾಡಿ ಗೌರವಿಸಲಾಯಿತು.

ಕಾರ್ಯಕ್ರಮಕ್ಕೆ ಮುಂಚಿತವಾಗಿ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ತಹಸಿಲ್ದಾರ್ ಟಿ ಜಗದೀಶ್ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಲೀಲಾವತಿ ಸಿದ್ದಣ್ಣ, ಪಟ್ಟಣ ಪಂಚಾಯತಿ ಸದಸ್ಯರಾದ ಎಸ್ ಖಾದರ್, ಉಪನ್ಯಾಸಕರಾದ ಯೋಗಾನಂದ ಎಸ್ ಕೆ, ರಾಮಚಂದ್ರಪ್ಪ ಜಿಂಕಾ ಶ್ರೀನಿವಾಸ್, ಜಾಕಿರ್ ಹುಸೇನ್, ಅಬ್ರಹಾಮ್, ಪಾಪಯ್ಯ ಮಮತಾ ಮೂಕಣ್ಣ ಮಲ್ಲಿಕಾರ್ಜುನ್ ಶ್ರೀಧರ, ಕರಿಬಸಪ್ಪ,ನಾಗಭೂಷಣ್ ರೆಡ್ಡಿ ಪ್ರಸನ್ನ ಕುಮಾರ್, ಸಣ್ಣ ಎಲ್ಲಪ್ಪ,ಪ್ರಸನ್ನ ಕುಮಾರ್,ರಾಜಣ್ಣ, ಕಾಜಿ ಮಾಲಿಕ್, ಸುನಿತಾ ಗಂಗಾಧರ್,ಮೋಹನ್ ಜಿಎಸ್ ಅಶೋಕ್, ಪಾತ ಲಿಂಗಪ್ಪ ತಿಪ್ಪೇಸ್ವಾಮಿ, ಶಿಕ್ಷಕರು ಶಿಕ್ಷಕಿಯರು ಇನ್ನು ಹಲವರು ಉಪಸ್ಥಿತರಿದ್ದರು.

ವರದಿ : ಪಿಎಂ ಗಂಗಾಧರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!