Ad imageAd image

ನರ್ಸಿಂಗ್ ವಿದ್ಯಾರ್ಥಿಗಳಿಂದ ಪ್ರಮಾಣವಚನ ಸ್ವೀಕಾರ

Bharath Vaibhav
ನರ್ಸಿಂಗ್ ವಿದ್ಯಾರ್ಥಿಗಳಿಂದ ಪ್ರಮಾಣವಚನ ಸ್ವೀಕಾರ
WhatsApp Group Join Now
Telegram Group Join Now

ಅಥಣಿ: ಪ್ರಾಮಾಣಿಕವಾಗಿ ರೋಗಿಯ ಸೇವೆಗೆ ಶ್ರಮಿಸುತ್ತೆವೆ ಎಂದು ಡಾ. ಎ.ಎಸ್ ಪಾಂಗಿ ಟ್ರಸ್ಟ್‌ ನ ಪೂಜ್ಯ ಅನ್ನಪೂರ್ಣ ನರ್ಸಿಂಗ್ ಮಹಾವಿದ್ಯಾಲಯದ 2ನೇ ಬ್ಯಾಚಿನ್ ವಿದ್ಯಾರ್ಥಿಗಳ ಪ್ರಮಾಣವಚನ ಕಾರ್ಯಕ್ರಮ ಇತ್ತೀಚಿಗೆ ಜರುಗಿತು.

ಪಟ್ಟಣದ ಪೂಜ್ಯ ಅನ್ನಪೂರ್ಣ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಅಥಣಿ ತಾಲೂಕಿನ ವೈದ್ಯಾಧಿಕಾರಿ ಡಾ: ಬಸಗೌಡ ಕಾಗೆ ಮಾತನಾಡಿ, ನರ್ಸಿಂಗ್ ಅನ್ನುವುದು ಬಹಳ ಮಹತ್ವದ ಕೋರ್ಸು. ಇದರ ಉಪಯೋಗವನ್ನು ಎಲ್ಲ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಪ್ರಾಮಾಣಿಕವಾಗಿ ರೋಗಿಯ ಸೇವೆ ಮಾಡಬೆಕು ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷ ಡಾ. ಎ.ಎ. ಪಾಂಗಿ ಮಾತನಾಡಿ, ರೋಗಿ ಗುಣಮುಖವಾಗಲು ವೈದ್ಯರು ಅಷ್ಟೆ ಅಲ್ಲ ಶುಶ್ರೂಷರ ಆರೈಕೆಯು ಸಹ ಬಹು ಮುಖ್ಯ. ವೈದ್ಯರ ಮಾರ್ಗದರ್ಶನದಂತೆ ರೋಗಿಯನ್ನು ಉಪಚರಿಸಬೇಕು.
ಎಂದು ನರ್ಸಿಗ್ ನ ಮಹತ್ವದ ಕುರಿತು ತಿಳಿಸಿದರು.

ಸಂಸ್ಥೆಯ ಡಾ: ರವಿ ಪಾಂಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಸಂಸ್ಥೆಯು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸವಲತ್ತುಗಳನ್ನು ಬಳಸಿಕೊಂಡು ಸಂಪೂರ್ಣ ಜ್ಞಾನವನ್ನು ಪಡೆಯಬೇಕು. ರೋಗಿಗಳ ಆರೈಕೆಯ ಕುರಿತು ಸಂಪೂರ್ಣ ವಾಗಿ ಅರಿತರೆ ರೋಗಿಯನ್ನು ಗುಣಮುಖ ಪಡಿಸಲು ಸಹಕಾರಿಯಾಗುತ್ತದೆ. ರೋಗಿಯಜೊತೆ ಹೆಚ್ಚು ಸಂಪರ್ಕದಲ್ಲಿ ನರ್ಸ್ ಗಳು ಇರುವುದರಿಂದ ರೋಗಿಯು ಗುಣಮುಖವಾಗಲು ನರ್ಸ್ ಗಳು ಶ್ರಮಿಸಬೆಕಾಗುತ್ತದೆ ಎಂದರು.
ಸಂಸ್ಥೆಯ ಸಂಸ್ಥಾಪಕರು, ಪ್ರಾಂಶುಪಾಲರು,ಎಲ್ಲ ಸಿಬ್ಬಂದಿ ವರ್ಗದವರು, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!