———–ಮುಂಬರುವ ಜಿಲ್ಲಾ, ತಾಲೂಕು ಮತ್ತು ಗ್ರೇಟರ್ ಬೆಂಗಳೂರು ಎಲ್ಲಾ ಚುನಾವಣೆ
ಬೆಂಗಳೂರು: ಮುಂಬರುವ ಜಿಲ್ಲಾ ತಾಲೂಕು ಮತ್ತು ಗ್ರೇಟರ್ ಬೆಂಗಳೂರು ಚುನಾವಣೆಗೆ ಜನತಾ ಚಳವಳಿ ಭಾರತ ಪಾರ್ಟಿಯಿಂದ ಸ್ಪರ್ಧೆ ಮಾಡಲು ನಮ್ಮ ಪಕ್ಷದ ಪದಾಧಿಕಾರಿಗಳು ಅಭ್ಯರ್ಥಿಗಳು ಚುನಾವಣಾ ಕಣಕ್ಕೆ ಇಳಿಸಲು ಪೂರ್ವ ತಯಾರಿ ಮಾಡಿಕೊಂಡಿದ್ದೇವೆ ಎಂದು ಜನತಾ ಚಳವಳಿ ಭಾರತ ಪಾರ್ಟಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಓಬಳೆಶೇಪ್ಪ ಹೇಳಿದರು.
ಅವರು ಯಲಹಂಕ ವಿಧಾನಸಭಾ ಕ್ಷೇತ್ರದ ಕಚೇರಿಯಲ್ಲಿ ಪದಾಧಿಕಾರಿಗಳ ಸಭೆಯಲ್ಲಿ ಜಿಲ್ಲಾ , ತಾಲೂಕ ಮತ್ತು ವಾರ್ಡ ಮಟ್ಟಕ್ಕೆ ಸಮಿತಿ ಮಾಡಿ ಅವರ ಅವರ ಜವಾಬ್ದಾರಿಯಿಂದ ಜನತಾ ಚಳವಳಿ ಭಾರತ ಪಾರ್ಟಿ ಪ್ರಬಲವಾಗಿ ಸಂಘಟನೆ ಮೂಲಕ ಅಭ್ಯರ್ಥಿ ಗಳಿಗೆ ಕಣಕ್ಕೆ ಇಳಿಸುತ್ತೇವೆ ಎಂದು ಬಿ ವಿ ನ್ಯೂಸ್-5 ಗೆ ಜನತಾ ಚಳವಳಿ ಭಾರತ ಪಾರ್ಟಿ ರಾಜ್ಯಾಧ್ಯಕ್ಷ ಓಬಳೆಶೇಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ಜನತಾ ಚಳವಳಿ ಭಾರತ ಪಾರ್ಟಿ ಮುಖಂಡರಾದ ಈಶ್ವರ್, ಮಲ್ಲಿಕಾರ್ಜುನ್ ಸೇರಿದಂತೆ ಮುಂತಾದವರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್




