ಸಿಂಧನೂರು : ಜೂ.೧೨, ತಹಸಿಲ್ ಕಾರ್ಯಾಲಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ಅರ್ಜಿದಾರರಾದ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ರವಿ ಹಿರೇಮಠ ತಂದೆ ನಾಗಯ್ಯ ಹಿರೇಮಠ ಸಾಕಿನ್ ಪಟೇಲ್ ವಾಡಿ ಸಿಂಧನೂರು ಇವರು ಬೇಡ ಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದು ಈ ಅರ್ಜಿ ಕುರಿತು ಕರ್ನಾಟಕ ಅನುಚಿತ ಜಾತಿಗಳು/ ಅನುಚಿತ ಬುಡಕಟ್ಟುಗಳು ಹಾಗೂ ಇತರೆ ಹಿಂದುಳಿದ ವರ್ಗಗಳ ನೇಮಕಾತಿ ಮುಂತಾದವುಗಳು ಮೀಸಲಾತಿ ನಿಯಮಗಳು ೧೯೯೨ರ ನಿಯಮ 3 (ಎ) ರನ್ವಯ ವಿಚಾರಣೆ ಕೈಗೊಂಡಿದ್ದು ಸದರಿ ಅರ್ಜಿಯ ಜಾತಿ ಕುರಿತು ಅಕ್ಷೇಪಣೆ ಸಲ್ಲಿಸಲಾಯಿತು ಅರ್ಜಿದಾರ ರವಿ ಹಿರೇಮಠ ತಂದೆ ನಾಗಯ್ಯ ಹಿರೇಮಠ ಇವರು ಬೇಡ ಜಂಗಮ ಪ. ಜಾತಿ ಎಂದು ಸುಳ್ಳು ಮಾಹಿತಿಯನ್ನು ನೀಡಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಪಡೆಯಲು ಪ್ರಯತ್ನಿಸುತ್ತಿದ್ದು ಇದಕ್ಕೆ ಆಕ್ಷೇಪಣೆ ಯನ್ನು ಸಲ್ಲಿಸಲಾಯಿತು.
ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಅರ್ಜಿದಾರರು ಎಸ್ಸಿ ಪಟ್ಟಿಯಲ್ಲಿ ಬರುವ, ಬೇಡ ಜಂಗಮ ಜಾತಿಗೆ ಅರ್ಜಿ ಸಲ್ಲಿಸಿದ್ದು ಸಮಾಜ ಕಲ್ಯಾಣ ಇಲಾಖೆಯ ಕಾಲಕಾಲಕ್ಕೆ ಹೊರಡಿಸಿರುವ ಆದೇಶದ ಅನ್ವಯ ಎಸ್ಸಿ ೧೦೧ ಜಾತಿಗಳಲ್ಲಿ ಬೇಡ ಜಂಗಮ /ಬುಡ್ಗ ಜಂಗಮ ನಿಜವಾದ ಅಲೆಮಾರಿ ಎಸ್ಸಿ ಸಮುದಾಯವಾಗಿದ್ದು ಇದನ್ನು ಕಬಳಿಸುವ ಹುನ್ನಾರ ಅವರದಾಗಿದ್ದು ಅರ್ಜಿದಾರರು ಸಮಾಜದಲ್ಲಿ ಆರ್ಥಿಕವಾಗಿ ಸದೃಢವಾಗಿದ್ದು ಯಾವುದೇ ರೀತಿಯಲ್ಲೂ ಶೋಷಣೆಗೆ ಮತ್ತು ಬಹಿಷ್ಕಾರಕ್ಕೆ ಒಳಪಟ್ಟಿರುವುದಿಲ್ಲ ಇವರು ಹಾಕಿದ ಅರ್ಜಿ ತಿರಸ್ಕರಿಸಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇವೆ ಎಂದು ಮಾನ್ಯ ತಹಶೀಲ್ದಾರಲ್ಲಿ ಮನವಿ ಮಾಡಿ ಒಂದು ವೇಳೆ ಆಕ್ರಮವಾಗಿ ಬೇಡ ಜಂಗಮ ಪ್ರಮಾಣ ಪತ್ರ ಪಡೆದಲ್ಲಿ ಮತ್ತು ನೀಡದಲ್ಲಿ ದಲಿತ ಪ್ರಗತಿಪರ ಮತ್ತು ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ವತಿಯಿಂದ ರಾಜ್ಯದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ತಿಳಿಸಿದರು.
ಈ ಸಂದರ್ಭದಲ್ಲಿ, ಅಂಬ್ರುಸ್ ಕೊಡ್ಲಿ. ಅಲ್ಲಮಪ್ರಭು ಪೂಜಾರ್. ಚಿನ್ನಪ್ಪ ಮೋತಿ. ಹುಸೇನಪ್ಪ ವಿಭೂತಿ. ಹನುಮಂತ ಗೋನವಾರ. ಶೇಖರಪ್ಪ ಧುಮುತಿ ವಕೀಲರು. ನರಸಪ್ಪ ಕಟ್ಟಿಮನಿ. ಅಮರೇಶ್ ಗಿರಿಜಾರಿ. ಗುರುರಾಜ ಮುಕ್ಕುಂದ. ಹನುಮಂತ ಹಂಪನಾಳ. ಇನ್ನು ಅನೇಕರಿದ್ದರು
ವರದಿ : ಬಸವರಾಜ ಬುಕ್ಕನಹಟ್ಟಿ