ರಾಯಚೂರು: ಕೆಡಿಪಿ ಸಭೆಯ ವೇಳೆ ಅಧಿಕಾರಿಯೊಬ್ಬ ರಮ್ಮಿ ಆಟದಲ್ಲಿ ಬ್ಯುಸಿಯಾಗಿರುವ ಘಟನೆ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್ ಕೆಡಿಪಿ ಸಭೆಯಲ್ಲಿ ನಡೆದಿದೆ.
ರಮ್ಮಿ ಆಟದಲ್ಲಿ ಬ್ಯುಸಿಯಾದ ಅಧಿಕಾರಿಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಎಂದು ಗುರುತಿಸಲಾಗಿದೆ.ಇಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್ ಅವರ ನೇತೃತ್ವದಲ್ಲಿ ಕೆಡಿಪಿ ಸಭೆ ನಡೆದಿತ್ತು.
ಈ ಸಭೆಯಲ್ಲಿ ಆಗು-ಹೋಗುಗಳ ಬಗ್ಗೆ ಭಾರೀ ಚರ್ಚೆ ನಡೆಯುತ್ತಿತ್ತು. ಅಲ್ಲದೇ ಕಾಂಗ್ರೆಸ್ ಶಾಸಕರ ನಡುವೆ ವಾಗ್ವಾದಗಳು ಕೂಡ ನಡೆಯುತ್ತಿತ್ತು. ಆದರೆ ಈ ಬಗ್ಗೆ ಗಮನಹರಿಸದ ಅಧಿಕಾರಿ ರಮ್ಮಿ ಆಟ ಆಡುತ್ತಾ ಸಮಯ ಕಳೆದಿದ್ದಾನೆ.




