ಸೇಡಂ: ತಾಲೂಕಿನ ಶೀಲಾರಕೋಟ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹರಿಜನವಾಡ ಶಾಲೆಯ ಸುತ್ತಮುತ್ತ ಕೂಡ ಸ್ವಚತೆಯಿಲ್ಲದೆ ಮುಳ್ಳು ತಂಟೆ ಬೆಳೆದು ಸಣ್ಣ ಮಕ್ಕಳಿಗೆ ತೊಂದರೆ ಆಗುತ್ತಿದೆ ಅಷ್ಟೇ ಅಲ್ಲದೆ ಅದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿ ಡೆಂಗ್ಯೂ ನಂತಹ ರೋಗಗಳು ಬರುತ್ತಿವೆ, ಅಷ್ಟೇ ಅಲ್ಲದೆ ಈ ಶಾಲೆಯ ಆವರಣದಲ್ಲಿ ಶೌಚಾಲಯವು ಸಂಪೂರ್ಣ ಹದೆಗೆಟ್ಟಿರುತ್ತದೆ, ನಿರ್ಮಾಣ ಮಾಡಬೇಕು ಎಂದು ಮೆದಕ್ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಅದೆಷ್ಟೋ ಬಾರಿ ಮನವಿ ಮಾಡಿದಾಗ ಕೇವಲ ಬಂದು ಬೇಟಿಕೊಡುತ್ತರೆ ಹೊರತು ಯಾವುದೇ ಕ್ರಮ ಕೈಗೊಂಡಿಲ್ಲ. ಶಾಲೆಯ ಆವರಣದಲ್ಲಿ ಶೌಚಾಲಯ ಕಾಮಗಾರಿಗಾಗಿ ಸುಮಾರು ೧ಲಕ್ಷದ ಟೆಂಡರ್ ಆಗಿದೆ ಆದಷ್ಟು ಬೇಗ ಮಾಡಿಸುತ್ತೇವೆ ಎಂದು ಹೇಳಿಕೆ ನೀಡಿ ಪುನಃ ಅದನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಹಾಗೆ ಈ ಶಾಲೆಯಲ್ಲಿ ಅಡುಗೆ ಸಹಾಯಕರ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡದೆ ಮನೋ ಇಚ್ಚೆಬಂದಂತೆ ಈ ಶಾಲೆಯ ಮುಖ್ಯ ಗುರುಗಳು ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ.
ಮಕ್ಕಳಪಾಲಿಗೆ ದೇವರಾಗಬೇಕಾದ ಅಧಿಕಾರಿಗಳು ದೆವ್ವದಂತೆ ನಡೆದುಕೊಳ್ಳುತ್ತಿದ್ದಾರೆ, ಯಾಕೆ ಈ ಶಾಲೆಯನ್ನು ಇಷ್ಟೊಂದು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬುದು ಇದುವರೆಗೂ ಉತ್ತರವಿಲ್ಲದ ಪ್ರಶ್ನೆಯಾಗಿದೆ, ಇದು ಮಾದಿಗ ಸಮಾಜಕ್ಕೆ ಸಂಬಂದಿಸಿದ ಶಾಲೆಯಾಗಿರುವುದರಿಂದ ಈ ರೀತಿ ನಡೆದುಕೊಳ್ಳುತ್ತಿರುವ ಎಂಬುದು ನಮ್ಮ ಅನುಮಾನವಾಗಿದೆ.
ಸುಮಾರು ೩ವರ್ಷಗಳಿಂದ ಶೌಚಾಲಯಕ್ಕೆ ಮನವಿ ಮಾಡಿಕೊಂಡರು ಸಹ ಯಾವುದೇ ಸ್ಪಂದನೆ ನೀಡದೇ ನಿರ್ಲಕ್ಷ್ಯ ಮಾಡುತ್ತಿರುವ ಗ್ರಾಮ ಪಂಚಾಯಿತಿ ಅಧಿಕಾರಿ ರಾಮಪ್ಪ ಅವರ ವಿರುದ್ದ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಕಾರ್ಯಾಧ್ಯಕ್ಷರಾದ ಸಾಬಪ್ಪ ಅಬ್ಬಗಳ ಆಕ್ರೋಶ ವ್ಯಕ್ತಪಡಿಸಿದರು.
ಒಂದು ವಾರದಲ್ಲಿ ನಮ್ಮ ಮನವಿಗೆ ಸ್ಪಂದಿಸದೆ ಇದ್ದಲ್ಲಿ ತಾಲೂಕ ಪಂಚಾಯತ ಕಾರ್ಯಾಲಯ ಎದುರು ನಮ್ಮ ಸಂಘಟನೆ ವತಿಯಿಂದ ಮಕ್ಕಳ ಪರವಾಗಿ ನಿರ್ಲಕ್ಷ್ಯ ಮಾಡುತ್ತಿರುವ ಗ್ರಾಮ ಪಂಚಾಯಿತಿ ಅಧಿಕಾರಿ ಮತ್ತು ಮುಖ್ಯ ಗುರುಗಳಾದ ಈರಪ್ಪ ಪೂಜಾರಿ ಅವರ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್



